ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಭೇಟಿಯಾದ ವ್ಯಕ್ತಿಯಿಂದ ಕೆಲವು ಪ್ರಯೋಜನಗಳಾಗುವವು
Published 6 ಆಗಸ್ಟ್ 2023, 23:30 IST
ಪ್ರಜಾವಾಣಿ ವಿಶೇಷ
author
ಮೇಷ
ಮಕ್ಕಳ ಭವಿಷ್ಯದ ಕುರಿತಾಗಿ ಆಳವಾದ ಚಿಂತನೆ ನೆಡೆಸುವಿರಿ. ಇಂದು ನಿಮ್ಮ ಎಲ್ಲಾ ಆಲೋಚನೆಗಳಿಗೂ ಸಂಗಾತಿಯ ಸಂಪೂರ್ಣ ಬೆಂಬಲ ಇರುವುದು. ಸಾಲದ ರೂಪದಲ್ಲಿ ಕೊಟ್ಟ ಹಣ ಮರಳುವ ಲಕ್ಷಣಗಳು ಇವೆ.
ವೃಷಭ
ಹೊಸ ಕನಸು ಹಾಗು ಉತ್ಸಾಹದಿಂದ ಕೆಲಸವನ್ನು ಶುರು ಮಾಡುವಿರಿ. ತಾಯಿಯ ಆರೋಗ್ಯ ಹದಗೆಟ್ಟಿದ್ದಲ್ಲಿ ಹಂತ ಹಂತವಾಗಿ ಚೇತರಿಕೆ ಉಂಟಾಗುವುದು. ಹಳೆಯ ಸಿಹಿ ಘಟನೆಗಳನ್ನು ಮೆಲಕು ಹಾಕುವಿರಿ.
ಮಿಥುನ
ನಿಮ್ಮ ಸ್ಥಿರ ಅಥವಾ ಚರ ಆಸ್ತಿಯನ್ನು ಮಾರಲು ಯೋಚನೆ ನೆಡೆಸಿದ್ದಲ್ಲಿ ಹಿರಿಯರಿಂದ ಸರಿಯಾದ ಮಾರ್ಗ ಕೇಳಿ ಪಡೆದುಕೊಳ್ಳಿ. ನಿಮಗೆ ಅಚಾನಕ್ಕಾಗಿ ಭೇಟಿಯಾದ ವ್ಯಕ್ತಿಯಿಂದ ಕೆಲವು ಪ್ರಯೋಜನಗಳಾಗಬಹುದು.
ಕರ್ಕಾಟಕ
ನಿಮಗಿಂತ ಸಣ್ಣ ವಯಸ್ಸಿನ ಮಕ್ಕಳ ಆಟೋಟಗಳನ್ನು ನೋಡಿ ಕಳೆದು ಹೋದ ದಿನಗಳನ್ನು ನೆನಪಿಸಿಕೊಳ್ಳುವಿರಿ. ಅಧಿಕ ಒತ್ತಡದ ಕೆಲಸದ ನಡುವೆಯೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ.
ಸಿಂಹ
ನಿಮ್ಮ ಮಾನಸಿಕ ಒತ್ತಡವು ಕಡಿಮೆಯಾಗದ ಹೊರತು ಇತರರೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ. ವ್ಯವಹಾರದಲ್ಲಿ ಗೆಳೆಯನ ಮಾತುಗಳನ್ನು ಕೇಳಿದರೆ ಲಾಭವಾಗುವುದು. ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಬರುವುದು ಶುಭ ತರುವುದು.
ಕನ್ಯಾ
ನೀವು ತೆಗೆದುಕೊಂಡ ದಿಟ್ಟ ಹೆಜ್ಜೆಗಳು ನಿಮ್ಮ ಯಶಸ್ಸಿನ ಕಡೆಗೆ ಕರೆದುಕೊಂಡು ಹೋಗುವುದು. ಕುಟುಂಬದ ಸದಸ್ಯರ ನಡುವೆ ಅನಗತ್ಯ ಚರ್ಚೆಗಳನ್ನು ಮಾಡಬೇಡಿ. ನಕಾರಾತ್ಮಕ ಚಿಂತೆಗಳಿಗೆ ಆಸ್ಪದ ಕೊಡಬೇಡಿ.
ತುಲಾ
ದಿನಗೂಲಿ ಕೆಲಸವನ್ನು ಮಾಡುವವರಿಗೆ ಈ ದಿನ ಸ್ವಲ್ಪ ಅಸ್ಥಿರತೆ ಕಾಡಬಹುದು. ನಿಮ್ಮ ಖರ್ಚುಗಳನ್ನು ಬಿಟ್ಟು ಕೆಲವು ಮನೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸುವುದಕ್ಕಾಗಿ ಖರ್ಚು ಮಾಡಬೇಕಾಗಿ ಬರುವುದು.
ವೃಶ್ಚಿಕ
ಸಂಜೆಯ ವೇಳೆಗೆ ತಾಯಿಯ ತವರು ಮನೆಯ ಕಡೆಯಿಂದ ಸಿಹಿ ಸುದ್ಧಿಯನ್ನು ಕೇಳುವಿರಿ. ಕೆಲವೊಂದು ಸಮಾರಂಭದಲ್ಲಿ ನಿಮ್ಮ ಹಾಜರಿಯು ವಿಶೇಷವಾದ ಕಳೆ ತರುವುದು. ವಾತ ಪಿತ್ತಗಳ ದೋಷ ಉಂಟಾಗುವುದು.
ಧನು
ಮುಂಜಾಗರೂಕತೆ ಇಲ್ಲದೇ ಮಾಡಿದ ಕೆಲಸಗಳು ಅಪಾಯವನ್ನು ತಂದೊಡ್ಡಬಹುದು. ಸ್ವಾದವನ್ನು ಅರಸಿ ತಿಂದ ಆಹಾರವು ಅನಾರೋಗ್ಯಕ್ಕೆ ಕಾರಣವಾಗುವುದು. ನಿಮ್ಮ ಬಗ್ಗೆ ಹೆತ್ತವರಿಗೆ ಚಿಂತೆಯಾಗುವಂತೆ ಮಾಡಬೇಡಿ
ಮಕರ
ಜೀವನದ ಎಲ್ಲ ರೀತಿಯ ಕ್ಷಣಗಳನ್ನು ಅನುಭವಿಸಿದ ನಿಮಗೆ ಇತರರಿಗೆ ಜೀವನವನ್ನು ಹೇಳಿಕೊಡುವುದು ಕಷ್ಟವಾಗುವುದಿಲ್ಲ. ಆದಾಯಕ್ಕೆ ಹೊಸ ಮೂಲಗಳನ್ನು ಹುಡುಕುವಿರಿ. ನೂತನ ವಸ್ತ್ರ ಧಾರಣೆ ಖುಷಿ ಕೊಡುವುದು.
ಕುಂಭ
ಬಹು ಕಾಲದಿಂದ ಎದುರು ನೋಡುತ್ತಿದ್ದ ಜೀವನವನ್ನು ಅನುಭವಿಸುವ ಸಮಯ ಹತ್ತಿರವಿದೆ. ಭಾವನಾತ್ಮಕವಾಗಿ ಸ್ನೇಹಿತರು ಹಾಗೂ ಕುಟುಂಬದವರ ಸಹಕಾರ ಸಿಗಲಿದೆ. ಆರ್ಥಿಕವಾಗಿ ಸದೃಢವಾಗಲಿದ್ದೀರಿ.
ಮೀನ
ನಿಮ್ಮ ಧ್ಯೇಯಗಳನ್ನು ಪಸರಿಸುವ ಕೆಲಸ ಮಾಡುವಿರಿ. ಕಾರಣಾಂತರದಿಂದ ಇಂದು ಕೆಲ ವ್ಯಕ್ತಿಗಳನ್ನು ನಿರ್ಲಕ್ಷಿಸುವಿರಿ. ಅಕ್ಕ ಪಕ್ಕದವರಿಗೆ ನಿಮ್ಮ ಸಂಪತ್ತು ಅನುಭವಿಸುವ ಚಟ ಉಂಟಾಗವುದು.