ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮಹನೀಯರ ಸಂದೇಶ ವಾಣಿಗಳ ಪಾಲನೆ ಮಾಡುವಿರಿ
Published 13 ಮೇ 2024, 0:19 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲವೊಂದು ದುರಭ್ಯಾಸಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವುದು ಪ್ರತ್ಯಕ್ಷವಾಗಿ ಗೋಚರವಾಗುತ್ತದೆ ವಾಹನ ಖರೀದಿ ವಿಚಾರಕ್ಕೆ ಶುಭಾಂತ್ಯ ದೊರೆಯಲಿದೆ.
ವೃಷಭ
ದತ್ತು ಮಕ್ಕಳ ತಂದೆ ತಾಯಿ ಆರೈಕೆಯ ನಂತರವೂ ಮಗುವಿನ ಅಸಮಾಧಾನವನ್ನು ಕಂಡು ದುಃಖಿಸುವಂತಾಗುವುದು. ಸಿನಿಮಾ ನಟರಿಗೆ ಪಾಠ ಕಲಿತು ಗೌರವಾನ್ವಿತ ವ್ಯಕ್ತಿಯನ್ನಾಗಿ ರೂಪುಗೊಳ್ಳುವ ಅವಕಾಶವಿದೆ.
ಮಿಥುನ
ಮನೆಯಲ್ಲಿನ ಪದ್ಧತಿಗಳನ್ನು ನಡೆಸಿಕೊಂಡು ಹೋಗಲು ಸಂಪೂರ್ಣ ಗಮನ ವಹಿಸಬೇಕು. ಕಾರ್ಯ ಕ್ಷೇತ್ರದ ಸಮಸ್ಯೆಗಳನ್ನು ಮನೆಗೆ ತರವುದು ಸರಿಯಲ್ಲ. ಮಹನೀಯರ ಸಂದೇಶ ವಾಣಿಗಳ ಪಾಲನೆ ಮಾಡುವಿರಿ. ‌
ಕರ್ಕಾಟಕ
ಭಾಗವಹಿಸುವ ಸಭೆಯಲ್ಲಿ ಪಾಂಡಿತ್ಯಕ್ಕೆ ತಕ್ಕನಾದ ಸ್ಥಾನಮಾನವು ದೊರೆಯದೆ ಇರಬಹುದು. ಮನ ಗೆದ್ದ ಸಂಬಂಧ ಮನೆಯವರ ಮನಸ್ಸನ್ನು ಮುದಗೊಳಿಸುತ್ತದೆ. ಯಾವುದಕ್ಕೂ ಆತುರಗೊಳ್ಳದಿರಿ.
ಸಿಂಹ
ಆರಕ್ಷಕ ವರ್ಗದವರು ಜಾಗರೂಕತೆಯಿಂದ ವರ್ತಿಸಿ. ಸ್ವತಃ ನೀವೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದಂತಹ ಸನ್ನಿವೇಶ ಎದುರಾಗಬಹುದು. ಖರ್ಚು ವೆಚ್ಚಗಳಲ್ಲಿ ಮಿತ ವ್ಯಯ ಸಾಧಿಸಿ.
ಕನ್ಯಾ
ಪ್ರತಿಯೊಬ್ಬರ ಬೇಕು ಬೇಡಗಳನ್ನು ಅರಿತು ತುಂಬು ಕುಟುಂಬವನ್ನು ನಿಭಾಯಿಸುತ್ತಿರುವವರನ್ನು ಅತಿಥಿಗಳು ಮುಕ್ತ ಕಂಠದಿಂದ ಶ್ಲಾಘಿಸುತ್ತಾರೆ. ಕಾಡಿನಲ್ಲಿ ಕೆಲಸ ಮಾಡುವಾಗ ವಿಷಪೂರಿತ ಜಂತುಗಳ ಮೇಲೆ ನಿಗಾ ಇರಲಿ.
ತುಲಾ
ವಿದೇಶಿ ಸಂಸ್ಥೆಯೊಂದಿಗೆ ವ್ಯವಹಾರಿಕ ಒಪ್ಪಂದ ಮಾಡಿಕೊಳ್ಳಲು ಈ ದಿನ ಸೂಕ್ತ. ಕೆಲವು ವಿಷಯಗಳು ಸರಿಯಾದ ಸಮಯಕ್ಕೆ ಮರೆತು ಹೋದಂತೆ ಆಗಿ ತೊಳಲಾಟಕ್ಕೆ ಒಳಗಾಗಬೇಕಾದೀತು.
ವೃಶ್ಚಿಕ
ಇನ್ನೊಬ್ಬರಿಗೆ ಮೋಸ ಮಾಡಲು ಪ್ರೇರೇಣೆ ಸಿಗಲಿದೆ. ಆದರೆ ಬುದ್ಧಿಯನ್ನು ಸ್ಥಿಮಿತದಲ್ಲಿ ಇರಿಸಿಕೊಳ್ಳಿರಿ. ಉಡುಪು ವಿನ್ಯಾಸಗಾರರು ಕಂಡುಕೊಂಡ ಹೊಸ ಮಾದರಿಯು ಜನರ ಮಾನಸವನ್ನು ಗೆಲ್ಲಲಿದೆ.
ಧನು
ನಿವೇಶನ ಕೊಳ್ಳುವ ನಿಮ್ಮ ಕನಸು ನನಸಾಗಲಿದೆ. ಕೆಲಸ ಕಾರ್ಯಗಳು ನಿಧಾನವಾಗಿಯಾದರೂ ನೆರವೇರುವುದು. ಹೋಟೆಲ್‌ ಉದ್ಯಮದವರಿಗೆ ಹೆಚ್ಚಿನ ವರಮಾನ ದೊರೆಯಲಿದೆ.
ಮಕರ
ಪೂರ್ವಿಕರ ಸಂಪಾದನೆಯ ಆಸ್ತಿಯ ಮಾರಾಟ ವಿಚಾರದಲ್ಲಿ ಅನೇಕ ಅನಿರೀಕ್ಷಿತ ತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ. ಆತ್ಮೀಯರ ದುರ್ಮರಣದ ವಾರ್ತೆಯು ಕಂಗಾಲು ಪಟ್ಟುಕೊಳ್ಳುವಂತೆ ಮಾಡುತ್ತದೆ.
ಕುಂಭ
ಪ್ರತಿ ಬಾರಿಯಂತೆ ಈ ಬಾರಿಯು ಉತ್ತಮ ಕಾರ್ಯಕ್ರಮ ನಿರ್ವಹಣೆಗೆ ಪ್ರತಿಕ್ರಿಯೆಗಳು ಬರುತ್ತವೆ. ಕಾಲ ಕಳೆದಂತೆ ಪ್ರಕೃತಿ ಬದಲಾಗುವ ಹಾಗೆ ಮನಸ್ಸು ತಿಳಿಗೊಂಡು ಸಾಮಾನ್ಯ ಸ್ಥಿತಿಗೆ ಬರುವಿರಿ.
ಮೀನ
ಊರಿನ ಗೌರವಾನ್ವಿತ ವ್ಯಕ್ತಿಗಳೊಂದಿಗೆ ವ್ಯವಹಾರದ ಬಗ್ಗೆ ಹೇಳಿಕೊಂಡು ಅವರೊಂದಿಗೆ ಜಂಟಿ ಕಾರ್ಯಗಳನ್ನು ನಡೆಸಬಹುದು. ದವಸ ಧಾನ್ಯಗಳು ಪ್ರಾಣಿಗಳ ದಾಳಿಗೆ ತುತ್ತಾಗದಂತೆ ಜಾಗ್ರತೆಯನ್ನು ಮಾಡಿ ಸಂರಕ್ಷಿಸಿ.