ದಿನ ಭವಿಷ್ಯ: ಭಾನುವಾರ, 28 ಮೇ 2023
Published 27 ಮೇ 2023, 18:30 IST
ಪ್ರಜಾವಾಣಿ ವಿಶೇಷ
ಮೇಷ
ಮನೆಯಲ್ಲಿ ಮಾಡುವ ಅಡಿಗೆಯನ್ನು ಹೊರತು ಪಡಿಸಿ ಬೇರೆಯ ಆಹಾರವನ್ನು ತಿನ್ನುವ ಮನಸ್ಸಾಗುತ್ತದೆ. ಯಾತ್ರೆಯನ್ನು ಮಾಡುತ್ತಿರುವವರಿಗೆ ಜೊತೆಗಾರರಿಂದ ಸ್ಥಳಪುರಾಣ ತಿಳಿಯುತ್ತದೆ. ವ್ಯಸನಗಳಿಂದ ಬೇಗನೆ ಮುಕ್ತಿ ಪಡೆಯುವಿರಿ.
ವೃಷಭ
ಮಗಳಿಗೆ ಹೆಸರಿಡುವ ವಿಷಯವಾಗಿ ಹಲವಾರು ಚರ್ಚೆ ಆಗುತ್ತದೆ. ಶುಭ ಸಮಾರಂಭದ ದಿನಕ್ಕಾಗಿ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳುವಿರಿ. ಬರುವ ಸಂಬAಧಿಗಳು ನಿಮ್ಮ ಆದರಾತಿಥ್ಯದಿಂದ ಸಂತುಷ್ಟರಾಗುವರು.
ಮಿಥುನ
ನಿಮ್ಮ ಸಾಮರ್ಥ್ಯದ ಅರಿವಿಲ್ಲದೆ ನಿಮ್ಮ ಬಗ್ಗೆ ಲಘುವಾಗಿ ಮಾತನಾಡಿದವರಿಗೆ ಸರಿಯಾದ ಪಾಠವನ್ನು ಕಲಿಸುವಿರಿ. ಹಿರಿಯಲ್ಲಿ ನಿಮ್ಮ ತಪ್ಪಿಲ್ಲದಿದ್ದರು ಸಹ ವಯಸ್ಸಿಗೆ ಬೆಲೆ ಕೊಟ್ಟು ಕ್ಷಮೆಯನ್ನು ಕೇಳಿ. ಮೀನು ಮಾರಾಟಗಾರರು ಲಾಭ ಪಡೆಯುವಿರಿ.
ಕರ್ಕಾಟಕ
ವ್ಯವಹಾರದಲ್ಲಿ ಸಹೋದ್ಯೋಗಿಗಳ ಜೊತೆಯಲ್ಲಿ ಉತ್ತಮವಾದ ಸಂಬAಧವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಅನಿರೀಕ್ಷಿತವಾಗಿ ನಿಮ್ಮ ಮನಸ್ಸಿನಲ್ಲಿದ್ದಂತಹ ಅಸಮಾಧಾನಗಳೆಲ್ಲವು ಮಾತಿನಲ್ಲಿ ಹೊರ ಬರುವವು.
ಸಿಂಹ
ನಿಮ್ಮ ಹಲವು ದಿನಗಳ ಪ್ರತೀಕ್ಷೆಯ ಮನೋಭಿಲಾಷೆಯು ಪೂರ್ಣಗೊಳ್ಳುವ ದಿನ ಇದಾಗಲಿದೆ. ದೀರ್ಘವಾದ ಪ್ರಯಾಣವನ್ನು ಮುಗಿಸಿ ಮನೆಗೆ ಮರಳಲಿದ್ದೀರಿ. ಅನುಭವಗಳ ಕಥೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಿದ್ದೀರಿ.
ಕನ್ಯಾ
ಅದ್ದೂರಿಯ ಮದುವೆಯಲ್ಲಿ ನಿಮ್ಮ ಮಕ್ಕಳು ಮಾಡಿದ ಖರ್ಚು ವೆಚ್ಚಗಳು ನಿಮಗೆ ದುಂದುವೆಚ್ಚದAತೆ ಕಾಣುತ್ತದೆ. ಮುಕ್ತವಾದ ಭಾವನೆಯಿಂದ ನೀವಾಡಿದ ಮಾತುಗಳು ಉಳಿದವರಿಗೆ ಅಧಿಕ ಪ್ರಸಂಗದAತೆ ತೋರುವುದರಲ್ಲಿ ಸಂಶಯವಿಲ್ಲ.
ತುಲಾ
ಕೆಲವು ಸಮಸ್ಯೆಗಳನ್ನು ನಿಮ್ಮ ವಯಸ್ಕರಲ್ಲಿಯೇ ಹೇಳುವುದಕ್ಕಿಂತ ಹಿರಿಯರಲ್ಲಿ ಹೇಳುವುದರಿಂದಾಗಿ ಸಮಾಧಾನವಾಗುವುದು. ಯಾವುದೇ ವಿಷಯವನ್ನಾಗಲಿ ಅಧಿಕಾರಿಗಳಿಂದ ಒಂದಕ್ಕಿAತ ಹೆಚ್ಚು ಬಾರಿ ಹೇಳಿಸಿಕೊಳ್ಳಬೇಡಿ.
ವೃಶ್ಚಿಕ
ಚಕ್ರವ್ಯೂಹದಲ್ಲಿ ಸಿಲುಕಿದ ನಿಮಗೆ ಅದನ್ನು ಭೇದಿಸುವ ಉಪಾಯವು ಮಿತ್ರರಿಂದ ಸಿಗುತ್ತದೆ. ಮಧ್ಯವರ್ತಿಗಳ ಅತಿ ಆಸೆಯಿಂದ ರೈತರಾದ ನಿಮಗೆ ಲಾಭವಿಲ್ಲವಾಗುವ ಕಾರಣ ರೈತ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಿ.
ಧನು
ಅತ್ಯಂತ ಆತ್ಮೀಯರಿಂದಲೇ ಭೂಮಿಯ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಬಹಳ ಕಷ್ಟದಿಂದ ಸಂಪಾದನೆ ಮಾಡಿದ ಹಣವನ್ನು ಸರಿಯಾದ ವಿನಿಯೋಗಕ್ಕಾಗಿ ಬಹಳವಾಗಿ ಯೋಚಿಸುವಿರಿ. ವಾತಕ್ಕೆ ಔಷಧಿ ತೆಗೆದುಕೊಳ್ಳಿರಿ.
ಮಕರ
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಶಯವನ್ನು ಬಗೆಹರಿಸುವುದಾದರೆ ಮನೆಯಲ್ಲಿ ಮಗುವಿನ ಸಂಶಯನ್ನು ಬಗೆ ಹರಿಸುವುದರಲ್ಲಿ ನಿಮ್ಮ ದಿನವನ್ನು ಕಳೆಯುವಿರಿ. ಮಿತ್ರವರ್ಗದಿಂದ ದುಃಖದ ಸಮಾಚಾರಗಳನ್ನು ಕೇಳಬೇಕಾಗಬಹುದು.
ಕುಂಭ
ಹೊಸ ಹೊಸ ಮನೆ ಕೆಲಸಗಳ ಜವಬ್ದಾರಿಯನ್ನು ನಿಮ್ಮದಾಗಿ ಮಾಡಿಕೊಳ್ಳುತ್ತಿರುವ ಕಾರಣ ಬಿಡುವಿಲ್ಲದ ದುಡಿಮೆಯ ದಿನಗಳು ನಿಮ್ಮದಾಗಲಿದೆ. ತಿಳಿಯದ ವಿಷಯಗಳ ಬಗ್ಗೆ ಅನಾವಶ್ಯಕವಾಗಿ ಸಹೋದರರ ಜೊತೆ ವಾದಿಸಬೇಡಿ.
ಮೀನ
ಬದಲಾವಣೆಯ ಅಲೆಯನ್ನು ನಿರೀಕ್ಷಿಸುತ್ತಿರುವ ನೀವು ಸಣ್ಣ ಸಣ್ಣ ವಿಷಯಗಳಲ್ಲಿ ಉತ್ತಮ ರೀತಿ ನೀತಿಗಳನ್ನು ಅಳವಡಿಸಿಕೊಳ್ಳುವಿರಿ. ಗಂಡ ಹೆಂಡತಿಯರ ವಾದ ವಿವಾದದಲ್ಲಿ ಮಧ್ಯ ಪ್ರವೇಶಸುವುದು ಒಳ್ಳೆಯ ನಡೆಯಲ್ಲ.