ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಶನಿವಾರ, 03 ಜೂನ್ 2023
Published 2 ಜೂನ್ 2023, 18:31 IST
ಕೆ.ಎಲ್.ವಿದ್ಯಾಶಂಕರ ಸೋಮಯಾಜಿ
ಮೇಷ
ನ್ಯಾಯಾಲಯದಲ್ಲಿ ನಡೆಯುತ್ತಿರುವ ವ್ಯಾಜ್ಯಗಳ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ವಕೀಲರ ಬಳಿ ವೈಯಕ್ತಿವಾಗಿ ಮಾತನಾಡಬೇಕಾಗುವುದು. ಆಗು ಹೋಗುಗಳ ಮೇಲೆ ಹೆಚ್ಚು ಚಿಂತೆಗೊಳಗಾಗದಿರಿ.
ವೃಷಭ
ಕನಸು ಸಾಕಾರಗೊಳಿಸಲು ಶ್ರಮವಹಿಸಲು ಆರಂಭಿಸುವಿರಿ. ಸಣ್ಣ ಪ್ರಮಾಣದಲ್ಲಿ ವಾಹನಕ್ಕೆ ಅವಘಡಗಳಾಗುವ ಸಾಧ್ಯತೆ ಇದೆ. ಸ್ಥಳ ಬದಲಾದ ಕಾರಣ ನೀರಿನಿಂದ ಸೋಂಕು ಉಂಟಾಗಬಹುದು.
ಮಿಥುನ
ಪವಿತ್ರವಾದ ವಸ್ತುಗಳನ್ನು ಗೌರವದಿಂದ ಕಾಣಿ. ಚಿನ್ನ ಮೊದಲಾದ ದುಬಾರಿ ಲೋಹಗಳಿಗೆ ಹಣ ವಿನಿಯೋಗ ಮಾಡುವಿರಿ. ಹಲವು ದಿನಗಳ ನಂತರ ನಿಮ್ಮ ಹವ್ಯಾಸದ ಕೆಲಸವನ್ನು ಸಂತಸದಿಂದ ಮಾಡುವಿರಿ.
ಕರ್ಕಾಟಕ
ನಿನ್ನೆಯ ಭೂರಿ ಭೋಜನದ ಸಲುವಾಗಿ ಅಜೀರ್ಣ ಮೊದಲಾದ ಸಮಸ್ಯೆಗಳನ್ನು ಎದುರಿಸುವಿರಿ. ಯೋಗಪಟುಗಳಿಗೆ ದೊಡ್ಡ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ಮಾಡುವ ಅವಕಾಶ ದೊರೆಯಲಿದೆ.
ಸಿಂಹ
ಮನೆಯಲ್ಲಿ ನಡೆಯಬೇಕಾದ ಮಂಗಳ ಕಾರ್ಯದ ಕುರಿತು ಹಿರಿಯೊರೊಂದಿಗೆ ಹೆಚ್ಚಿನ ಸಮಾಲೋಚನೆ ನಡೆಸುವಿರಿ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಲೇಸು.
ಕನ್ಯಾ
ಈ ದಿನ ನಿಮಗೆ ಎದುರಾಗುವ ಪರಿಸ್ಥಿತಿಗೆ ನೀವೇ ಹೊಂದಿಕೊಳ್ಳುವ ತೀರ್ಮಾನವನ್ನು ಮಾಡಿರಿ. ಸಹೋದ್ಯೊಗಿಗಳೊಡನೆ ಸಹನೆಯಿಂದ ನಡೆದುಕೊಳ್ಳಿ. ಉದರ ಸಂಬಂಧದ ವ್ಯಾಧಿಗಳು ಕಾಣಿಸಿಕೊಳ್ಳಬಹುದು.
ತುಲಾ
ಆತ್ಮೀಯನಿಗೆ ಸಾಂತ್ವನ ಹೇಳಬೇಕಾದ ಸಂದರ್ಭ ಬರಲಿದೆ. ಕಿರು ಸಂಚಾರ ಯೋಗವಿದೆ. ನಿಮಗೆ ಒದಗಿದ್ದ ಆತಂಕ ದೂರವಾಗುತ್ತದೆ. ಕೆಲಸವನ್ನು ಆಸಕ್ತಿಯಿಂದ ನಿರ್ವಹಿಸುತ್ತೀರಿ.
ವೃಶ್ಚಿಕ
ವೃತ್ತಿಯ ಬಗ್ಗೆ ಅಧ್ಯಯನ ನಡೆಸುವ ಅಥವಾ ಹೆಚ್ಚಿನ ಮಾಹಿತಿಯನ್ನು ಕಲೆಹಾಕಬೇಕಾಗಬಹುದು. ಮಗನ ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡು ಮನೆಯವರಿಗೆ ಸಂತಸವಾಗುವುದು.
ಧನು
ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿ ಕೊಳ್ಳುವ ಉಪಾಯವನ್ನು ಆಪ್ತರೊಬ್ಬರು ತಿಳಿಸಿಕೊಡುವರು. ಮೇಲಧಿಕಾರಿಗಳ ಒತ್ತಡದಿಂದ ಕೆಲಸದಲ್ಲಿ ಆಯಾಸವೆನಿಸುವುದಾದರೂ ಅಧಿಕಾರಿಗಳ ಮನ ಗೆಲ್ಲುವಂತಾಗುತ್ತದೆ.
ಮಕರ
ನೂತನ ಮನೆ ನಿರ್ಮಾಣದಲ್ಲಿರುವ ಸಹೋದರರಿಗೆ ಸಹಾಯ ಹಸ್ತ ನೀಡುವ ಮನಸ್ಸಾಗುವುದು. ಮಗನೊಡನೆ ಮಾತುಕತೆ ನಡೆಯುವ ಸಂಭವವಿದೆ. ಸಾಹಿತ್ಯ ವಲಯದಲ್ಲಿರುವ ನಿಮಗೆ ಮನ್ನಣೆ ಸಿಗಲಿದೆ.
ಕುಂಭ
ಕೆಲ ದಿನಗಳ ಹಿಂದೆ ತೆಗೆದುಕೊಂಡಿದ್ದ ತೀರ್ಮಾನ ಸರಿಯಾದುದೇ ಎಂಬುದರ ಬಗ್ಗೆ ಇಂದು ಆಲೋಚಿಸಿ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗುವುದು. ಆಧ್ಯಾತ್ಮಿಕ ವಿಷಯಗಳತ್ತ ಮನಸ್ಸು ಹೊರಳುವುದು.
ಮೀನ
ಉದ್ಯೋಗದ ವಿಷಯದಲ್ಲಿದ್ದ ಚಿಂತೆ ದೂರಾಗುವುದು. ಹೊಸ ಉದ್ಯೋಗದಲ್ಲಿ ಹೊಂದಿಕೊಳ್ಳುವ ವಾತಾವರಣ ಸಿಗುವುದು. ವೃತ್ತಿಪರವಾದ ಸಾಧನೆಗಳಿಂದಾಗಿ ಸೂಕ್ತ ಸ್ಥಾನಮಾನ ಒದಗಿ ಬರಲಿದೆ.
ADVERTISEMENT
ADVERTISEMENT