ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಅನವಶ್ಯಕ ಮಾತಿನಿಂದ ಉದ್ವೇಗ ಉಂಟಾಗಬಹುದು
Published 28 ಜನವರಿ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಓದು ಅಥವಾ ಉದ್ಯೋಗ ಆಯ್ಕೆ ವಿಚಾರದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ. ಚಿಲ್ಲರೆ ಮಾರಾಟಗಾರರಿಗೆ ಮತ್ತು ಹೂವು, ಹಣ್ಣು ಬೆಳೆಗಾರರಿಗೆ ಶುಭ ದಿನ. ಹೊಸ ಉದ್ಯೋಗದ ಬಗ್ಗೆ ಭಯ ಬೇಡ.
ವೃಷಭ
ವೃತ್ತಿಯಲ್ಲಿ ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಸಿಕ್ಕ ಗೆಲುವಿನಿಂದ ಹೆಚ್ಚಿನ ಸಂತೋಷ ಮತ್ತು ತೃಪ್ತಿ ಉಂಟಾಗಲಿದೆ. ಸತ್ಯವಾದ ಸಂಗತಿಗಳು ತಿಳಿಯುವುದರಿಂದ ದುಃಖಗಳು ದೂರಾಗಲಿದೆ. ಕೆಲಸದಲ್ಲಿ ಬಡ್ತಿ ಸಿಗಲಿದೆ.
ಮಿಥುನ
ಕೆಲಸಗಳಿಗೆ ಬೇಕಾದ ಸೂಕ್ತ ವ್ಯಕ್ತಿಯನ್ನು ಹುಡುಕುವಲ್ಲಿ ವಿಫಲರಾಗುವ ಮುನ್ಸೂಚನೆ ಸಿಗುವುದು. ನೃತ್ಯಾಭ್ಯಾಸ ಮುಂದುವರಿಸುವಂತೆ ಒತ್ತಾಯ ಹೆಚ್ಚಲಿದೆ. ದಂತ ವೈದ್ಯರಿಗೆ ಬೇಡಿಕೆ ಹೆಚ್ಚಾಗುತ್ತದೆ.
ಕರ್ಕಾಟಕ
ಪತ್ರಿಕಾ ವರದಿಗಾರರಿಗೆ ವಿಶೇಷ ದಿನವಾಗಿ ಜೀವನದಲ್ಲಿ ಸದಾಕಾಲ ನೆನಪಿರುವಂತೆ ಆಗಬಹುದು. ನಿಮ್ಮ ಸಲಹೆ ಸೂಚನೆಗಳನ್ನು ಒಪ್ಪುವಂತೆ ವ್ಯಕ್ತಿಯ ಮನಃ ಪರಿವರ್ತನೆ ಮಾಡುವಲ್ಲಿ ಸಫಲರಾಗುತ್ತೀರಿ.
ಸಿಂಹ
ಕುಟುಂಬ ನಿರ್ವಹಣೆಯಲ್ಲಿ ವಿಪರೀತ ಖರ್ಚು ಕಾಣಿಸಲಿದೆ. ಆದಾಯಕ್ಕೆ ಕೊರತೆ ಇರದು. ವೃತ್ತಿಪರ ಗಮನಹರಿಸಿದಲ್ಲಿ ಬಹುನಿರೀಕ್ಷಿತವಾದ ಬೆಳವಣಿಗೆಗಳು ಇರುತ್ತದೆ. ನಿಮ್ಮ ಬಯಕೆಗಳು ಈಡೇರುವುದು.
ಕನ್ಯಾ
ಮೇಲಧಿಕಾರಿಗಳು ನಿಮ್ಮೊಂದಿಗಿದ್ದಾರೆ ಎಂಬ ಭರವಸೆಯಿಂದ ಕೆಲಸವನ್ನು ಮಾಡದಿರಿ. ಆಶಾ ದಾಯಕ ಭಾವನೆಗಳಿಂದ ನೆಮ್ಮದಿ, ಬೆಳವಣಿಗೆಯು ಗೋಚರಕ್ಕೆ ಬರಲಿದೆ. ಗುತ್ತಿಗೆದಾರರಿಗೆ ಹೆಚ್ಚಿನ ಕೆಲಸ ಇರಲಿದೆ.
ತುಲಾ
ಉನ್ನತ ಅಧಿಕಾರಿಗಳ ದಿಢೀರ್ ಭೇಟಿಯಿಂದ ಕೆಲಸ ಕಾರ್ಯಗಳು ಏರುಪೇರಾಗುವುದು. ಸೋದರರೊಂದಿಗಿರುವ ವಿರಸ ಕಡಿಮೆ ಮಾಡಿಕೊಳ್ಳಿ. ಮನೆಯಲ್ಲಿ ಅನುಕೂಲಕರ ಸನ್ನಿವೇಶ ನಿರ್ಮಾಣವಾಗಲಿದೆ.
ವೃಶ್ಚಿಕ
ಸ್ವಂತ ಉದ್ಯಮದಲ್ಲಿರುವವರು ತಮ್ಮ ಕಾರ್ಯಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಬಹಳ ಉತ್ಸಾಹ ತೋರಿ ಸಫಲತೆಯನ್ನು ಹೊಂದಬಹುದು. ಆಹಾರ ಪದ್ಧತಿ ಬದಲಿಸಿಕೊಳ್ಳುವುದು ಸರಿ ಎನಿಸುವುದು.
ಧನು
ಕಾರ್ಯಕ್ಷೇತ್ರದಲ್ಲಿ ಉಂಟಾದ ಸನ್ನಿವೇಶವನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಕೊಳ್ಳಿ. ಸಮಯವ್ಯರ್ಥ ಮಾಡದೆ ಕೆಲಸ ಪೂರ್ಣಗೊಳಿಸಿ. ಅನವಶ್ಯಕ ಮಾತಿನಿಂದ ಉದ್ವೇಗ ಉಂಟಾಗಬಹುದು.
ಮಕರ
ಈ ದಿನ ಜರುಗಲಿರುವ ಸಂಗತಿಯೊಂದು ಗಾಢ ಪರಿಣಾಮ ಬೀರಿ ವೃತ್ತಿಗೆ ಸಂಬಂಧಿಸಿದ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ಸಹಾಯವಾಗಲಿದೆ. ಹಣಕ್ಕಿಂತ ಸಂಬಂಧ ಮುಖ್ಯವೆಂಬುವುದನ್ನು ಮರೆಯದಿರಿ.
ಕುಂಭ
ರಾಜಕೀಯ ವ್ಯಕ್ತಿಗಳಿಗೆ ಪ್ರಚಾರದ ನಿಮಿತ್ತ ದೂರ ಪ್ರಯಾಣವನ್ನು ಕೈಗೊಳ್ಳಬೇಕಾಗಲಿದೆ. ಅರ್ಹತೆ ಹೊಂದಿದವರಿಗೆ ಹೆಸರಾಂತ ಶಿಕ್ಷಣ ಸಂಸ್ಥೆಯಲ್ಲಿ ಬಹಳ ಸುಲಭವಾಗಿ ಅಧ್ಯಾಪಕ ವೃತ್ತಿ ದೊರೆಯುವುದು.
ಮೀನ
ಉದಾರ ಮನೋಭಾವದಿಂದ ಇತರರಿಗೆ ಸಹಾಯ ಮಾಡಿದ ಫಲ ನಿಮಗೆ ಅನುಭವಕ್ಕೆ ಬರಲಿದೆ. ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದ ಶುಭಫಲವನ್ನು ಅನುಭವಿಸುವಿರಿ.