ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಉನ್ನತ ವ್ಯಾಸಂಗದವರಿಗೆ ನೇರ ಆಯ್ಕೆಯಾಗುವ ಸಂಭವವಿದೆ
Published 10 ಏಪ್ರಿಲ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿ ಜೀವನಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ನಿರ್ಣಯ ಕೈಗೊಳ್ಳಲು ಆಪ್ತರೊಬ್ಬರ ಸಲಹೆ ಕೇಳುವಿರಿ. ಉನ್ನತ ವ್ಯಾಸಂಗದವರಿಗೆ ನೇರ ಆಯ್ಕೆಯಾಗುವ ಸಂಭವವಿದೆ. ಸಾಧ್ಯವಾದಲ್ಲಿ ದೇವಾಲಯಕ್ಕೆ ಭೇಟಿ ನೀಡಿ.
ವೃಷಭ
ಭೌತವಿಜ್ಞಾನ ಸಂಶೋಧನೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಫಲಿತಾಂಶದ ಕಡೆಗೆ ಹೊಸ ಹೊಸ ಮಾರ್ಗಗಳು ಗೋಚರಿಸುವುದು. ಪುಟ್ಟದೊಂದು ಪ್ರಯಾಣ ಮತ್ತಷ್ಟು ಹುರುಪು ತುಂಬಲಿದೆ.
ಮಿಥುನ
ಅಕ್ಕ-ತಂಗಿಯರಲ್ಲಿ ಭಿನ್ನಾಭಿಪ್ರಾಯವಿದ್ದರೇ, ಸ್ವ-ಪ್ರಯತ್ನದಿಂದ ಸಂಬಂಧ ಉತ್ತಮಪಡಿಸಿಕೊಳ್ಳುವ ಪ್ರಯತ್ನ ಈ ದಿನ ನಡೆಸಿ. ರಾಜಕೀಯ ವ್ಯಕ್ತಿಗಳಿಗೆ ಅನೇಕ ಜನರ ಜತೆ ಸಮಾಲೋಚನೆ ನಡೆಸಬೇಕಾಗುವುದು.
ಕರ್ಕಾಟಕ
ಉದರ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ದ್ರವರೂಪಿ ಆಹಾರವನ್ನು ಹೆಚ್ಚು ಸೇವಿಸಿ. ತಾವು ಬಯಸಿದ ಕ್ಷೇತ್ರದಲ್ಲಿ ತಿರುವನ್ನು ಪಡೆಯುವಲ್ಲಿ ಯಶಸ್ವಿಯಾಗುವಿರಿ.
ಸಿಂಹ
ಕಾರ್ಯಕ್ಷೇತ್ರದಲ್ಲಿ ಕೆಲಸದ ಹೊರೆ ಬೆಟ್ಟದಂತೆ ಇರುವುದು. ಕಾನೂನು ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗಾಗಿ ಹೆಚ್ಚು ಮಾಹಿತಿಯನ್ನು ಸಂಗ್ರಹಿಸಲು ಉತ್ತಮ ದಿನ. ಹಳದಿ ವರ್ಣ ಶುಭದಾಯಕ.
ಕನ್ಯಾ
ಎಲ್ಲಾ ಸನ್ನಿವೇಶಗಳು ನಿಮ್ಮ ಪರ ಇರುವುದರಿಂದ ನಿರಾಳವಾಗಿ ಮುಂದುವರಿಯಬಹುದು. ಕಾರ್ಮಿಕ ವರ್ಗದವರಿಗೆ ಹೆಚ್ಚಿನ ಸವಲತ್ತುಗಳು ಒದಗಲಿದೆ. ಮಾನವೀಯತೆ ಮುಖ್ಯ ಧ್ಯೇಯವಾಗಿರಲಿ.
ತುಲಾ
ಮೇಲಧಿಕಾರಿಗಳ ಒತ್ತಾಯಕ್ಕೆ ಮಣಿದು ಸ್ವಯಂ ನಿವೃತ್ತಿ ಯೋಚನೆಯನ್ನು ಕೈ ಬಿಡಬೇಕಾಗುವುದು. ಹಣ್ಣು ಹಾಗೂ ತರಕಾರಿ ವ್ಯಾಪಾರಿಗಳಿಗೆ ಸರಕು ಸಾಗಾಣಿಕೆಯಲ್ಲಿ ತೊಂದರೆಗಳಾಗಬಹುದು.
ವೃಶ್ಚಿಕ
ಕೌಟುಂಬಿಕ ಸಮಸ್ಯೆಗಳಿಗೆ ಸಂಗಾತಿಯೊಂದಿಗೆ ಸಮಾಲೋಚನೆ ಮಾಡಿದಲ್ಲಿ ಉತ್ತಮ ಪರಿಹಾರವು ದೊರೆಯುವುದು. ಹಿರಿಯರೊಂದಿಗೆ ಯಾತ್ರೆ ಕೈಗೊಳ್ಳುವುದರ ಪುಣ್ಯದಿಂದ ಕಾರ್ಯಾನುಕೂಲವಾಗುವುದು.
ಧನು
ರಸ್ತೆ ಗುತ್ತಿಗೆದಾರರು, ಮರ-ಮುಟ್ಟುಗಳ ಮತ್ತು ಕಲ್ಲಿನ ವ್ಯಾಪಾರ ಮಾಡುವವರು ಶ್ರಮದ ದುಪ್ಪಟ್ಟು ಸಂಪಾದನೆಯನ್ನು ಅಪೇಕ್ಷಿಸಬಹುದು. ದಿನಸಿ ವ್ಯಾಪಾರಸ್ಥರಿಗೆ , ಆಲಂಕಾರಿಕ ವಸ್ತುಗಳ ವ್ಯಾಪಾರದವರಿಗೆ ಶುಭದಿನ.
ಮಕರ
ನಿಧಾನವಾಗಿಯಾದರೂ ಕಾರ್ಯದ ಲಾಭ ಬಂದು ಕೈ ಸೇರಿದ ಸಂತಸ ಆಗುತ್ತದೆ. ಮಕ್ಕಳ ಯೋಗ ಕ್ಷೇಮದ ಬಗ್ಗೆ ಅತಿಯಾಗಿ ಚಿಂತಿಸುವುದನ್ನು ಕಡಿಮೆ ಮಾಡುವುದು ಉತ್ತಮ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ಲಭಿಸುವುದು.
ಕುಂಭ
ಏಜೆನ್ಸಿಯಂಥ ಉದ್ಯೋಗ ತೆರೆಯಲು ಸೂಕ್ತ ಸ್ಥಳದ ಹುಡುಕಾಟದಲ್ಲಿರುವ ನಿಮಗೆ ಅನುಕೂಲಕರವಾದ ಸ್ಥಳ ದೊರಕುವುದು. ಗೃಹ ತಾಪತ್ರಯಗಳಿಂದಲೂ ಮುಕ್ತರಾಗಿ ನಿಶ್ಚಿಂತತೆ ತೋರಿ ಬರುತ್ತದೆ.
ಮೀನ
ಭೂಮಿಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಪ್ರಯತ್ನ ಪಟ್ಟ ಕೆಲಸಗಳು ದಿನದ ಅಂತ್ಯಕ್ಕೆ ಫಲ ನೀಡಲಿವೆ. ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವ ರೀತಿಗೆ ಇತರರು ಮೆಚ್ಚುಗೆಯನ್ನು ಸೂಚಿಸುತ್ತಾರೆ.