ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20: ಬಾಂಗ್ಲಾ ವಿರುದ್ದ ಭಾರತ ವನಿತೆಯರಿಗೆ ಜಯ

Published 2 ಮೇ 2024, 16:31 IST
Last Updated 2 ಮೇ 2024, 16:31 IST
ಅಕ್ಷರ ಗಾತ್ರ

ಸಿಲೆಟ್‌ (ಬಾಂಗ್ಲಾದೇಶ): ಸ್ಮೃತಿ ಮಂಧಾನ (47, 42ಎ) ಮತ್ತು ಶಫಾಲಿ ವರ್ಮಾ (51, 38ಎ) ಅವರ ಉತ್ತಮ ಜೊತೆಯಾಟದ ನೆರವಿನಿಂದ ಭಾರತ ತಂಡ ಗುರುವಾರ ನಡೆದ ಮಹಿಳೆಯರ ಮೂರನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಆ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಭಾರತ 3–0 ಮುನ್ನಡೆ ಸಾಧಿಸಿತು.

ಟಾಸ್‌ ಗೆದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡರು. ಭಾರತದ ಬೌಲರ್‌ಗಳು ‍ಪರಿಣಾಮಕಾರಿ ದಾಳಿಯಿಂದ ಬಾಂಗ್ಲಾದೇಶವನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 117 ರನ್‌ಗಳಿಗೆ ನಿಯಂತ್ರಿಸಿದರು. ಈ ಗುರಿ ಬೆನ್ನತ್ತಿದ ಭಾರತ 9 ಎಸೆತಗಳು ಇರುವಂತೆಯೇ 3 ವಿಕೆಟ್‌ಗೆ 121 ಹೊಡೆಯಿತು.

ಆರಂಭಿಕ ಆಟಗಾರ್ತಿಯರಾದ ಸ್ಮೃತಿ  ಮತ್ತು ಶಫಾಲಿ 12.1 ಓವರ್‌ಗಳಲ್ಲಿ 91 ರನ್‌ಗಳ ಜೊತೆಯಾಟ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಶಫಾಲಿ ಬಿರುಸಿನ ಅರ್ಧ ಶತಕ ಗಳಿಸಿ ಔಟಾದರೆ, ಲಯಕ್ಕೆ ಮರಳಿದ ಮಂಧಾನ ಎಂಟು ರನ್‌ಗಳಿಂದ ಅರ್ಧ ಶತಕ ತಪ್ಪಿಸಿಕೊಂಡರು.  

ರಿತು ಮೋನಿ ಅವರು ಶಫಾಲಿ ವಿಕೆಟ್ ಕಬಳಿಸಿದರೆ, ನಹೀದಾ ಅಖ್ತರ್ ಬೌಲಿಂಗ್‌ನಲ್ಲಿ ಮಂದಾನ ಅವರು ಫಾಹಿಮಾ ಖತುನ್‌ಗೆ ಕ್ಯಾಚಿತ್ತರು.  

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು ಪವರ್‌ ಪ್ಲೇ ಅವಧಿಯಲ್ಲಿ ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿತು. ಬಾಂಗ್ಲಾ ಪರ ದಿಲಾರಾ ಅಖ್ತರ್‌ ಅತ್ಯಧಿಕ– 25 ಎಸೆಗಳಲ್ಲಿ 39 ರನ್ ಗಳಿಸಿದರು. ನಾಯಕಿ ನಿಗರ್ ಸುಲ್ತಾನಾ 28 ರನ್ ಗಳಿಸಿದರು. ಆದರೆ, ಉಳಿದ ಬ್ಯಾಟರ್‌ಗಳು ವಿಫಲರಾದರು.

ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 117 (ದಿಲಾರಾ ಅಖ್ತರ್ 39, ನಿಗರ್ ಸುಲ್ತಾನಾ 28, ರಾಧಾ ಯಾದವ್ 22ಕ್ಕೆ2, ಶ್ರೇಯಾಂಕಾ ಪಾಟೀಲ 24ಕ್ಕೆ1); ಭಾರತ 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 121 (ಸ್ಮೃತಿ ಮಂಧಾನ 47, ಶಫಾಲಿ ವರ್ಮಾ 51; ರಿತು ಮೋನಿ 10ಕ್ಕೆ1, ರಬಿಯಾ ಖಾನ್ 24ಕ್ಕೆ1) ಪಂದ್ಯದ ಆಟಗಾರ್ತಿ: ಶಫಾಲಿ ವರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT