ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ | ಜೂನ್ 2024: ಈ ರಾಶಿಯವರಿಗೆ ತಿಂಗಳ ಪ್ರಾರಂಭದಲ್ಲಿ ಕಾರ್ಯಸಿದ್ಧಿ
Published 31 ಮೇ 2024, 23:15 IST
ಅರುಣ ಪಿ.ಭಟ್ಟ
ಮೇಷ
ತಿಂಗಳ ಪ್ರಾರಂಭದಲ್ಲಿ ಕಾರ್ಯಸಿದ್ಧಿ. ಬಂಧುಗಳ ಆಗಮನದಿಂದ ಕುಟುಂಬದಲ್ಲಿ ಸಂತಸ. ಮನೆ ಬಾಡಿಗೆಯಿಂದ ಧನಲಾಭ. ಸ್ವತಂತ್ರ ಉದ್ಯೋಗಸ್ಥರಿಗೆ ಲಾಭ. ದೂರ ಪ್ರಯಾಣ. ಗ್ರಂಥರಚನೆಯಲ್ಲಿ ಆಸಕ್ತಿ. ವಾಹನ ಸೌಖ್ಯ. ಮಕ್ಕಳಿಂದ ಕಿರಿಕಿರಿ. ಬರತಕ್ಕ ಬಾಕಿ ಬರುವುದು.
ವೃಷಭ
ಸಹೋದರಿಯರಿಂದ ಶುಭವಾರ್ತೆ. ಗೃಹಾಲಂಕಾರ ವಸ್ತು ಖರಿದಿ. ಉದ್ಯಮಿಗಳಿಗೆ ಹೊಸ ಯೋಜನೆ ಪ್ರಾರಂಭಿಸಲು ಸಕಾಲ. ತಿಂಗಳ ಮಧ್ಯದಲ್ಲಿ ಜ್ವರ ಪೀಡೆ ವೈದ್ಯಕೀಯ ಖರ್ಚು. ಕೋರ್ಟ್‌ ಪ್ರಕರಣದಲ್ಲಿ ಗೆಲುವು ಅವಮಾನಕರ ಪ್ರಸಂಗ. ವಿವಾಹ ಪ್ರಸ್ತಾವದಲ್ಲಿ ಯಶಸ್ಸು
ಮಿಥುನ
ದೈಹಿಕ ಜಾಡ್ಯ, ಅಲರ್ಜಿ. ವಿನಾಕಾರಣ ಹೆದರಿಕೆ. ಆದರೆ ಬಹುದಿನಗಳ ನಂತರ ಕುಟುಂಬದಲ್ಲಿ ಸಂತೋಷದ ಸಮಾರಂಭ. ಕಲಾವಿದರು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು. ಉತ್ತಮ ವಾಗ್ಜರಿ ಪ್ರದರ್ಶನ. ಮಾನ ಸನ್ಮಾನ. ಮೂತ್ರ ಜನಕಾಂಗ ಪೀಡೆ ಸಾಧ್ಯತೆ.
ಕರ್ಕಾಟಕ
ಮನೆಕಟ್ಟುವ ಸಮಸ್ಯೆ ಬಗೆಹರಿಯುವುದು. ಕ್ರಯ ವಿಕ್ರಯದಲ್ಲಿ ವಂಚನೆ ನಡೆಯುವ ಸಂಭವ, ಜಾಗ್ರತೆ. ತಿಂಗಳಿಡಿ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವಿರಿ. ತಂದೆಯಿಂದ ಹಣಕಾಸಿನ ಸಹಾಯ ಸಾದ್ಯತೆ. ಕಾಲಿಗೆ ನೋವು. ಆಸ್ಪತ್ರೆ ಖರ್ಚು. ನಿರೀಕ್ಷಿತ ಸ್ಪರ್ಧೆಯಲ್ಲಿ ಯಶಸ್ಸು.
ಸಿಂಹ
ಉತ್ಸಾಹ ವೃದ್ಧಿಸುವುದು. ಸರಕಾರಿ ಕೆಲಸಗಳು ತ್ವರಿತ ಗತಿಯಲ್ಲಿ ನಡೆಯುವವು. ಪರಿಚಿತ ವ್ಯಕ್ತಿಗಳಿಂದ ವಿರೋಧ ಕಾಣಿಸುವುದು. ಪಶುಗಳ ವಿಕ್ರಯದಾರರಿಗೆ ಲಾಭ. ಹೊಟ್ಟೆನೋವು. ಅಜ್ಞಾತವಾಸದಿಂದ ಬಿಡುಗಡೆ. ಮಹತ್ವದ ಮಾತುಕತೆ. ಸರಕಾರಿ ಪರೀಕ್ಷೆಗಳಲ್ಲಿ ಯಶಸ್ಸು.
ಕನ್ಯಾ
ವಿಶೇಷ ಸಾಲಗಳು ತೀರುವವು. ತಿಂಗಳ ಮಧ್ಯದಲ್ಲಿ ಅನಿರೀಕ್ಷಿತ ಖರ್ಚಿನ ಪ್ರಸಂಗ. ಸ್ವಂತ ಉದ್ಯೋಗಸ್ಥರಿಗೆ ಉತ್ತಮ ಲಾಭ. ಸರಕಾರಿ ಕೆಲಸದಲ್ಲಿ ವ್ಯತ್ಯಯ. ಸೇವಕರಿಂದ ಹಾನಿ, ತೊಂದರೆ. ಬಂಧುಗಳಿಗೆ ಆಪತ್ತು. ಮನೆಕೆಲಸ ಅರ್ದಕ್ಕೆ ನಿಲ್ಲುವುದು. ಪ್ರೇಮ ವೈಫಲ್ಯ. ಅಧಿಕಾರಿಗಳಿಗೆ ಹಿನ್ನಡೆ.
ತುಲಾ
ಉತ್ತಮ ಫಲ ಪ್ರಾಪ್ತಿ. ಆಕಸ್ಮಿಕ ಧನಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು. ಸಂತತಿ ಇಲ್ಲದವರಿಗೆ ಸಂತತಿಯ ಸೂಚನೆ. ವಿವಾಹಾಪೇಕ್ಷಿಗಳಿಗೆ ಸಂಗಾತಿ ಲಭ್ಯ. ಹಳೆಯ ವ್ಯಾದಿಗಳು ಮರುಕಳಿಸುವ ಸಾದ್ಯತೆ ಇದೆ. ಆಹಾರದ ಬಗ್ಗೆ ಎಚ್ಚರವಿರಲಿ.
ವೃಶ್ಚಿಕ
ಕಷ್ಟದಲ್ಲೂ ಇಷ್ಟ ಫಲ ಪ್ರಾಪ್ತಿಯಾಗುವುದು. ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಿ. ರಾಜಕಾರಣದಿಂದ ಮಾನಹಾನಿ ಸಂಭವ. ಪರದೇಶ ಪ್ರವಾಸಕ್ಕೆ ಸಿದ್ದತೆ ನಡೆಯುವುದು. ಸರಕಾರಿ ಅಧಿಕಾರ ಪ್ರಾಪ್ತಿಯೋಗ. ಶಿಕ್ಷಕರಿಗೆ ಪದೋನ್ನತಿಯೊಡನೆ ವರ್ಗಾವಣೆ ಸಂಭವ.
ಧನು
ಆರೋಗ್ಯದಲ್ಲಿ ಏರುಪೇರು. ಸಂಗಾತಿಯೊಡನೆ ಜಗಳ. ಕಚೇರಿ ಕಾಗದ ಪತ್ರಗಳು ಹಟಾತ್ ಕಾಣೆಯಾಗುವಿಕೆ. ದೂರದಿಂದ ಶುಭವಾರ್ತೆ ಬರುವುದು. ದೈನಂದಿನ ಕೆಲಸಗಳು ಸರಾಗ. ದಿಢೀರ್ ಹಿರಿಯ ಅಧಿಕಾರಿಗಳ ಆಗಮನ. ಸ್ತ್ರೀ ಮೂಲಕ ದ್ರವ್ಯ ಲಾಭ. ದೇವತಾ ಪೂಜೆ.
ಮಕರ
ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಕಾಲು ನೋವಿನ ಸಮಸ್ಯೆ. ಕೌಟುಂಬಿಕ ಖರ್ಚು ಜಾಸ್ತಿಯಾಗುವುದು. ಶತ್ರುಗಳು ತಲೆ ತಗ್ಗಿಸುವರು. ಹಳೆಯ ಮಿತ್ರರ ಆಗಮನ. ಮಕ್ಕಳಿಂದ ಶುಭವಾರ್ತೆ. ಮನೆಯಲ್ಲಿ ವಿಶೇಷ ಸಮಾರಂಭ ನಡೆಯುವುದು. ದಾಂಪತ್ಯ ಸೌಖ್ಯ.
ಕುಂಭ
ಶುಭಯೋಗ. ಯಾಂತ್ರಿಕ ವಸ್ತುಗಳ ಖರೀದಿ. ಶೈಕ್ಷಣಿಕ ಖಾತೆಯಲ್ಲಿ ಕೆಲಸದಲ್ಲಿರುವವರಿಗೆ ತಾತ್ಕಾಲಿಕ ಬಡ್ತಿ. ಬ್ಯಾಂಕ್ ನೌಕರರಿಗೆ ವರ್ಗಾವಣೆ ಸಂಭವ. ಕೈಗೊಂಡ ಕೆಲಸಗಳಲ್ಲಿ ನೀರಿಕ್ಷೆಗಿಂತ ಲಾಭ. ಕಂಟ್ರಾಕ್ಟರದಾರರಿಗೆ ಉತ್ತಮ ಧನ ಲಾಭ ಕಾಣುವಿರಿ. ಮಿತ್ರರಿಂದ ವಂಚನೆ ಸಂಭವ.
ಮೀನ
ವಿನಾಕಾರಣ ಮಿತ್ರರು ಶತ್ರುಗಳಾವುರು. ಮೇಲಾಧಿಕಾರಿಗಳಿಂದ ಭಯದ ನೋಟಿಸು ಬರಬಹುದು. ಕಲಾವಿದರಿಗೆ ಸಂಗೀತಗಾರರಿಗೆ ತಿಂಗಳ ಮೊದಲರ್ಧ ಉತ್ತಮ. ಸೊಂಟನೊವು ಕಾಣಿಸುವುದು. ಮಕ್ಕಳ ಆರೋಗ್ಯದಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಹಿನ್ನಡೆ.