ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮೇ 19 ಶುಕ್ರವಾರ 2023
Published 18 ಮೇ 2023, 18:31 IST
ಪ್ರಜಾವಾಣಿ ವಿಶೇಷ
author
ಮೇಷ
ದಿನವು ನೀವು ಮಾಡುವ ಕೆಲಸಗಳನ್ನೇ ಇಂದು ಅಧಿಕಾರಿಗಳ ಕಣ್ಣೆದುರಿಗೆ ಮಾಡಬೇಕಾದ ಸಂದರ್ಭ ಬಂದಾಗ ಗುಣಮಟ್ಟದ ಬದಲಾವಣೆಯಾಗುವುದು. ಇತರರ ಮನೆಯ ವಿಚಾರಗಳನ್ನು ಮಾತನಾಡಿ ವೈರತ್ವವನ್ನು ತಂದುಕೊಳ್ಳಬೇಡಿ.
ವೃಷಭ
ಇನ್ನೊಬ್ಬರಿಗೆ ಹೇಳಿಕೊಡುವ ಮುಂಚೆ ನಿಮ್ಮ ಜ್ಞಾನವು ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿರಿ. ಸುಲಭವಾಗಿ ಕೆಲವೊಂದು ವಿಷಯಗಳಿಗೆ ನೀವು ಎಲ್ಲರಿಗೂ ಲಭ್ಯವಾಗುವುದು ಕೆಲವೊಂದು ಸಮಯದಲ್ಲಿ ಕುಟುಂಬದವರಿಗೆ ತೊಂದರೆಯಾಗುತ್ತದೆ.
ಮಿಥುನ
ಈವರೆಗೆ ತುಂಬ ಮೃದುವಾಗಿ ಬದುಕನ್ನು ಸಾಗಿಸಿದವರಿಗೆ ಇನ್ನು ನೀವು ಕಳೆಯಬೇಕಾದ ಬದುಕು ಸ್ವಲ್ಪ ಕಷ್ಟಕರವೆಂದು ತೋರಬಹುದು. ಧರ್ಮಾಚರಣೆಯಲ್ಲಿ ಕುಂದು ಕೊರತೆಗಳನ್ನು ಮಾಡುವುದು ನಿಮಗೆ ಶ್ರೇಯಸ್ಕರವಾಗಿರುವುದಿಲ್ಲ.
ಕರ್ಕಾಟಕ
ಅಪ್ರಿಯ ಸತ್ಯ ಸ್ವೀಕರಿಸಲು ಅಸಾಧ್ಯವಾಗುವಂತಹ ಹಿರಿಯ ನಾಗರೀಕರ ಬಳಿ ಹೇಳದಿರುವುದು ಒಳ್ಳೆಯದೆಂದು ಯೋಚಿಸುವಿರಿ. ಅತಿಯಾದ ಪುತ್ರವ್ಯಾಮೋಹವು ಇಂದು ನಿಮ್ಮನ್ನು ತಪ್ಜು ಇಡುವಂತೆ ಮಾಡಬಹುದು.
ಸಿಂಹ
ಉತ್ತಮ ವಿಷಯಗಳನ್ನು ಯಾರು ಹೇಳಿದರೂ ಜೀವನದಲ್ಲಿ ಅಳವಡಿಸಿಕೊಳ್ಳಲು ಮತ್ತೊಮ್ಮೆ ಯೋಚಿಸಲು ಹೋಗದಿರಿ. ಮುಗಿದ ಸಮಾರಂಭದ ಉಳಿದ ಕೆಲಸಗಳು ಮಾಡಿದಷ್ಟೂ ಇದ್ದಂತೆ ಭಾಸವಾಗುತ್ತದೆ.
ಕನ್ಯಾ
ಅನುಪಯುಕ್ತ ವಸ್ತುಗಳನ್ನು ಮನೆಯಿಂದ ಹೊರ ಹಾಕದ ಹೊರತು ಮನೆಯನ್ನು ಚೊಕ್ಕಗೊಳಿಸಲು ಸಾಧ್ಯವಾಗುವುದಿಲ್ಲ. ಮನೆಯಲ್ಲಿರುವ ಸಣ್ಣ ಮಕ್ಕಳ ಕೆಲವು ಮಾತುಗಳು ಶಿರೋವೇದನೆಗೆ ಕಾರಣವಾಗುವುದು.
ತುಲಾ
ಸಿಕ್ಕಿರುವ ಹೊಸ ವೃತ್ತಿಯ ಅಧಿಕಾರಿಗಳು ನಿಮಗೆ ಆಹ್ವಾನವನ್ನು ಮಾಡುವ ದಿನಗಣನೆ ಶುರುಮಾಡುವಿರಿ. ತಂದೆ ತಾಯಿಯರನ್ನು ಅತ್ಯಂತ ಸಂತೋಷ ಪಡಿಸುವಂತಹ ಕ್ಷಣವನ್ನು ನೀವು ನೀಡಿರುವುದು ಹೆಮ್ಮೆ ಎಂದೆನಿಸುವುದು.
ವೃಶ್ಚಿಕ
ವ್ಯಸನಕ್ಕೆ ತುತ್ತಾಗಿರುವವರಿಂದ ನೀವು ತೊಂದರೆಯನ್ನು ಅನುಭವಿಸ ಬೇಕಾದೀತು. ಇಲ್ಲ ಸಲ್ಲದ ಕಾರಣಳನ್ನು ಕೊಟ್ಟು ನಿಮ್ಮ ಸಹೋದ್ಯೋಗಿಗಳು ಕೆಲಸವನ್ನು ಮುಂದೆ ಹಾಕುತ್ತಿರುವುದು ನಿಮಗೆ ಗೊಂದಲ ಸೃಷ್ಟಿಸುತ್ತದೆ.
ಧನು
ಅಪರೂಪದ ಅಳಿವಿನಂಚಿನಲ್ಲಿರುವ ನೀವು ಕಲಿತ ವಿದ್ಯೆಯ ಬಗ್ಗೆ ಸಂದರ್ಶನವನ್ನು ಕೊಡುವಂತೆ ಪತ್ರಿಕೆ ಅಥವಾ ದೂರದರ್ಶನ ಮಾಧ್ಯಮದವರು ನಿಮ್ಮಲ್ಲಿಗೆ ಬರುವರು. ಮನೆಯಲ್ಲಿನ ಗೋಸಂಪತ್ತಿನಲ್ಲಿ ತೊಂದರೆಗಳು ಉಂಟಾಗಬಹುದು.
ಮಕರ
ವೃತ್ತಿಗೆ ನೀವು ನೀಡುವಷ್ಟೇ ಪ್ರಾಶಸ್ತ್ಯವನ್ನು ಸಾಂಸಾರಿಕ ಜೀವನಕ್ಕು ಸಹ ನೀಡುವುದರಿಂದ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಿರಿ. ಮಕ್ಕಳ ಪ್ರತಿ ಹೆಜ್ಜೆಯ ಮೇಲೂ ಸಹ ಎಚ್ಚರಿಕೆಯ ಕಣ್ಣನ್ನು ಇಟ್ಟಿರಲೇ ಬೇಕಾಗುತ್ತದೆ.
ಕುಂಭ
ನಿವೃತ್ತ ಜೀವನವನ್ನು ಮೊಮ್ಮಕ್ಕಳ ಜೊತೆ ಸಂತೋಷದಿಂದ ಕಳೆಯುವ ನಿಮ್ಮ ಕನಸು ಅಕ್ಷರಷಃ ಸತ್ಯವಾಗುತ್ತದೆ. ದಾಂಪತ್ಯ ಜೀವನದಲ್ಲಿ ಕೆಲವು ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಒಳ್ಳೆಯದು.
ಮೀನ
ಎಲ್ಲಾ ಕಾರ್ಯಗಳು ಅಂದುಕೊಂಡ ರೀತಿಯಲ್ಲೇ ಆಗಲು ಸಾಧ್ಯವಾಗದಿರಬಹುದು. ಭೂಮಿಯಿಂದ ಉನ್ನತ ಸ್ಥಾನದಲ್ಲಿ ಕೆಲಸ ಮಾಡುವವರು ಯಾವುದೇ ಕಾರಣಕ್ಕೂ ರಕ್ಷಾಕವಚವನ್ನು ಮರೆಯದಿರಿ.