ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಏಪ್ರಿಲ್ 17 ಬುಧವಾರ 2024– ಈ ರಾಶಿಯವರು ವದಂತಿಗಳಿಗೆ ಕಿವಿ ಕೊಡದಿರಿ
Published 16 ಏಪ್ರಿಲ್ 2024, 18:48 IST
ಪ್ರಜಾವಾಣಿ ವಿಶೇಷ
author
ಮೇಷ
ಒಂದು ಕೆಲಸವನ್ನು ಪೂರೈಸಲು ಮಾಡಿದ ಪ್ರಯತ್ನವು ನೀರಿನಲ್ಲಿ ಹೋಮ ಮಾಡಿದಂತೆ ಆಗದಿರಲು ಮುನ್ನೆಚ್ಚರಿಕೆ ವಹಿಸಿ. ನಿಮ್ಮದೇ ಸಂಪಾದನೆಯು ಮಕ್ಕಳಿಂದ ನೀರಿನಂತೆ ಖರ್ಚಾಗುತ್ತದೆ.
ವೃಷಭ
ಗಂಭೀರ ಹಾಗೂ ತಾಳ್ಮೆಯಿಂದ ಕಾರ್ಯನಿರ್ವಹಿಸಿದಲ್ಲಿ ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಮಾತಿನಂತೆ ನಡೆದುಕೊಳ್ಳುವುದು ಉತ್ತಮ. ವದಂತಿಗಳಿಗೆ ಕಿವಿ ಕೊಡದಿರಿ.
ಮಿಥುನ
ಗೃಹ ಹಾಗೂ ಕಟ್ಟಡ ನಿರ್ಮಾಣ ಕಾರ್ಯಗಳಂಥ ದೊಡ್ಡ ಕಾರ್ಯಗಳ ಮೇಲೆ ಸ್ವಲ್ಪ ಗಮನ ಹರಿಸಿದರೆ ಕೆಲಸವು ಬೇಗ ಪೂರ್ಣವಾಗುವ ಸಾಧ್ಯತೆಗಳಿವೆ. ಆತ್ಮೀಯರನ್ನು ಭೇಟಿ ಮಾಡಲಿದ್ದೀರಿ.
ಕರ್ಕಾಟಕ
ಮಧ್ಯಮ ವರ್ಗದವರಿಗೆ ನಿತ್ಯದ ವಸ್ತುಗಳ ಬೆಲೆ ಹೆಚ್ಚಳವು ಹೊರೆಯಾಗಿ ಕಾಣುವುದು. ಹಿರಿಯರ ಭೇಟಿಯಿಂದಾಗಿ ಕುಟುಂಬದ ಐತಿಹ್ಯ ತಿಳಿಯಲಿದೆ. ತರಕಾರಿ ಮಾರಾಟಗಾರರಿಗೆ ಲಾಭ ಆಗುವುದು.
ಸಿಂಹ
ಆಸ್ತಿ ಪಾಲುದಾರಿಕೆಯಂಥ ಮಹತ್ತರ ಕಾರ್ಯಗಳಲ್ಲಿ ತಾಳ್ಮೆ ವಹಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಜಾಣ್ಮೆಯ ನಡೆಯಿಂದಾಗಿ ಬಂಧುಮಿತ್ರರಲ್ಲಿ ವೈಮನಸ್ಸು ಉಂಟಾಗುವುದನ್ನು ತಪ್ಪಿಸಬಹುದು.
ಕನ್ಯಾ
ನಿಮ್ಮನ್ನು ರೂಪಿಸಿಕೊಳ್ಳಲು ಹೆಚ್ಚಿನ ಶ್ರಮ ಹಾಕಬೇಕೆನ್ನುವ ವಿಚಾರವು ಕೋಪ ಹಾಗೂ ಅಸಹನೆಯನ್ನು ಉಂಟು ಮಾಡಲಿದೆ. ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ನಿಮಗೆ ಈ ದಿನ ತಿಳಿಯುವುದು.
ತುಲಾ
ಇನ್ನೊಬ್ಬರ ಮನೆಯ ವಿಚಾರವಾಗಿ ಯೋಚಿಸುವುದಾಗಲಿ ಅಥವಾ ಮಾತನಾಡಿಕೊಳ್ಳುವುದಾಗಲಿ ಮಾಡಿಕೊಂಡು ಗೌರವವನ್ನು ಕಡಿಮೆ ಮಾಡಿಕೊಳ್ಳದಿರಿ. ತೆಂಗು ಹಾಗೂ ಅಡಿಕೆ ಬೆಳೆಗಾರರಿಗೆ ಲಾಭವಿರುವುದು.
ವೃಶ್ಚಿಕ
ಬೃಹತ್ ಮೊತ್ತದ ವ್ಯವಹಾರವನ್ನು ಹೊಂದಿರುವವರು ಎದುರಾಳಿಗಳ ಮೇಲಿನ ಗಮನವನ್ನು ಹೆಚ್ಚು ಮಾಡಿಕೊಳ್ಳುವುದು ಒಳ್ಳೆಯದು. ಹಣ ಸಹಾಯ ಮಾಡುತ್ತೇವೆ ಎಂದ ಸ್ನೇಹಿತರು ನೀಡದೆ ಸತಾಯಿಸುವ ಸಾಧ್ಯತೆಗಳಿವೆ.
ಧನು
ಮನೆ ಬದಲಾವಣೆ ವಿಚಾರಗಳು ಚರ್ಚೆಗೆ ಬಂದು ಹಿರಿಯರ ಮಾತಿನಂತೆಯೇ ನಡೆಯುವಿರಿ. ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಅರಿಯುವುದು ಉತ್ತಮ.
ಮಕರ
ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಪ್ರಶಂಸಾ ನುಡಿಗಳು ದೊರೆಯುತ್ತವೆ. ವಿಜ್ಞಾನ, ಶಿಕ್ಷಣ ಹಾಗೂ ಸಂಶೋಧನೆ ಕ್ಷೇತ್ರದಲ್ಲಿರುವ ವೃತ್ತಿಪರರು ಅಭಿವೃದ್ಧಿ ಕಾಣುವ ಲಕ್ಷಣಗಳಿವೆ.
ಕುಂಭ
ಉನ್ನತ ವಿದ್ಯಾಭ್ಯಾಸ ನಡೆಸಲು ವಿದೇಶಕ್ಕೆ ಹೋಗಬೇಕೆಂದುಕೊಂಡಿರುವವರಿಗೆ ವಿವಿಧ ರೀತಿಯ ಅಡಚಣೆಗಳು ಉಂಟಾಗಲಿವೆ. ಹಿರಿಯರಿಂದ ಪಡೆದ ಸಲಹೆಯು ಜೀವನಕ್ಕೆ ಬುನಾದಿಯಾಗಲಿದೆ.
ಮೀನ
ಕನ್ಯಾನ್ವೇಷಣೆಯ ಹಂತದಲ್ಲಿರುವ ಯೋಗ್ಯ ಹುಡುಗನಿಗೆ ಅನುರೂಪ ಕನ್ಯೆಯು ಲಭ್ಯವಾಗುವ ಸಂಭವವಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆ ವಹಿಸಿದರೆ ಗೆಲುವು ಇರುತ್ತದೆ.