ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ: ನವೆಂಬರ್ 2023– ಈ ರಾಶಿಯವರಿಗೆ ಉದ್ಯೋಗದ ಅವಕಾಶಗಳು ಕಂಡುಬರಲಿವೆ
Published 31 ಅಕ್ಟೋಬರ್ 2023, 23:20 IST
ಅರುಣ ಪಿ.ಭಟ್ಟ
ಮೇಷ
ವ್ಯಾಪಾರ ವ್ಯವಹಾರದ ವಿಸ್ತರಣೆ ಸಲುವಾಗಿ ಪ್ರಯಾಣ. ಆರೋಗ್ಯದಲ್ಲಿ ಏರುಪೇರು. ರಾಜಕಾರಣಿಗಳಿಗೆ ಪ್ರಗತಿ. ಸಂಗಾತಿ ಜತೆಗೆ ವೈಮನಸ್ಸು, ಇದರಿಂದ ಮಾನಸಿಕ ಕಿರಿಕಿರಿ. ತಿಂಗಳಂತ್ಯಕ್ಕೆ ವ್ಯಾಪಾರ ವ್ಯವಹಾರಗಳಲ್ಲಿ ಅತ್ಯುತ್ತಮ ಪ್ರಗತಿ ಕಾಣುವಿರಿ. ಹಣಕಾಸು ಸ್ಥಿತಿ ಉತ್ತಮವಾಗಲಿದೆ. ಶುಭ: 09,12,22. ಅಶುಭ: 15,20,28.
ವೃಷಭ
ಕೌಟುಂಬಿಕ ವ್ಯಾಪಾರ ವ್ಯವಹಾರಗಳ ಬಗ್ಗೆ ಸೋದರರೊಂದಿಗೆ ಚರ್ಚಿಸಿ. ದೈಹಿಕವಾಗಿ ಆಯಾಸ, ಉಸಿರಾಟದ ಸಮಸ್ಯೆ, ರಕ್ತದೊತ್ತಡ ಕಾಡಬಹುದು. ಚಿಕಿತ್ಸೆ ಪಡೆದುಕೊಳ್ಳಿ. ತಿಂಗಳ ಮಧ್ಯಭಾಗದಲ್ಲಿ ಆರೋಗ್ಯ ಚೇತರಿಸಲಿದೆ. ತಿಂಗಳಂತ್ಯದಲ್ಲಿ ಆದಾಯ ವೃದ್ಧಿಸಲಿದೆ. ಶುಭ: 08,14,29. ಅಶುಭ: 12,16,27.
ಮಿಥುನ
ವಿವೇಚನೆಯಿಂದ ಕೆಲಸ ಮಾಡಿ. ಕೆಲವರ ಮಾತನ್ನು ನಂಬಿ ನಷ್ಟದ ವ್ಯವಹಾರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ, ಎಚ್ಚರವಿರಲಿ. ಆದಾಯ ಹೆಚ್ಚಲಿದೆ. ಸಿನಿಮಾ, ಸಂಗೀತ, ಸಾಹಿತ್ಯ, ವೈದ್ಯಕೀಯ, ಕಾನೂನು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರಗತಿ. ‌ಶುಭ:10,14,26. ಅಶುಭ: 13,18,25.
ಕರ್ಕಾಟಕ
ಉದ್ಯೋಗದ ಅವಕಾಶಗಳು ಕಂಡುಬರಲಿವೆ. ಹಣಕಾಸು ವ್ಯವಹಾರಗಳು ಯೋಜನೆಯಂತೆ ನಡೆಯಲಿವೆ. ಕುಟುಂಬದಲ್ಲಿ ಶುಭಸುದ್ದಿ. ಅವಿವಾಹಿತರಿಗೆ ವಿವಾಹ ಯೋಗ. ವೈಯಕ್ತಿಕ ಜೀವನದಲ್ಲಿ ಭಿನ್ನಾಭಿಪ್ರಾಯ ತಲೆದೋರಬಹುದು. ತಿಂಗಳಂತ್ಯದಲ್ಲಿ ಅನುಕೂಲಕರ. ಶುಭ:12,16,18. ಅಶುಭ:11,19,22.
ಸಿಂಹ
ಆತ್ಮೀಯ ವ್ಯಕ್ತಿಗಳೊಡನೆ ವಿವಾದಗಳು ಹೆಚ್ಚಬಹುದು. ಶಾಂತಿಯುತವಾಗಿ ವರ್ತಿಸಿ. ಭೂಮಿಗೆ ಸಂಬಂಧಪಟ್ಟಂತಹ ವ್ಯಾಜ್ಯಗಳಿಂದ ಬೇಸರ, ಒತ್ತಡದ ವಿಚಾರಗಳಿಂದ ಖಿನ್ನತೆ. ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಇದರಿಂದ ಪ್ರಗತಿ ಕಾಣಬಹುದು. ಶುಭ: 09,18,26 ಅಶುಭ: 11,21,29.
ಕನ್ಯಾ
ಧನಾಗಮನ. ಲೇವಾದೇವಿ ವ್ಯವಹಾರಗಳಿಂದ ದೂರವಿರುವುದು ಲೇಸು. ಕುಟುಂಬದ ಜೊತೆಗೆ ಹೆಚ್ಚಿನ ಕಾಲ ಕಳೆಯಲಿದ್ದೀರಿ. ಆತ್ಮೀಯರೊಡನೆ ಮನಸ್ತಾಪವಾಗದಂತೆ ನೋಡಿಕೊಳ್ಳಿ. ನಿಮ್ಮ ಉತ್ಸಾಹದಾಯಕ ಸ್ವಭಾವವು ಸಂತಸಮಯ ವಾತಾವರಣವನ್ನು ನಿರ್ಮಿಸಲಿದೆ. ಶುಭ:10,18,24. ಅಶುಭ:11,19,27.
ತುಲಾ
ಜನಪ್ರಿಯತೆ ಹೆಚ್ಚಾದಂತೆ ವಿರೋಧಿಗಳು ಹೆಚ್ಚಾಗಲಿದ್ದಾರೆ. ಪ್ರತಿ ಕಾರ್ಯಕ್ಕೂ ತೊಂದರೆ ನೀಡುವ ವ್ಯಕ್ತಿಗಳನ್ನು ಗುರುತಿಸಿ ಆದಷ್ಟು ದೂರವಿಡುವುದು ಒಳ್ಳೆಯದು. ವೈಯಕ್ತಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಪತ್ನಿಯ ವಿಚಾರಗಳಿಗೆ ಸಹಮತನೀಡಿ. ಶುಭ:10,18,28. ಅಶುಭ: 12,19,26.
ವೃಶ್ಚಿಕ
ಕೆಲಸಗಳಿಗೆ ವೇಗ ನೀಡಿ, ಯೋಜನೆಗಳನ್ನು ಅಂತಿಮಗೊಳಿಸಲು ಅಧಿಕಾರಿಗಳ ನೆರವು ಪಡೆಯಿರಿ. ವೈವಾಹಿಕ ಜೀವನವು ಸಂತಸದಾಯಕವಾಗಿರುತ್ತದೆ. ಆರ್ಥಿಕವಾಗಿ ಪ್ರಬಲರಾಗುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಸ್ವಾವಲಂಬನೆಯ ಚಿಂತನೆ ಮೂರ್ತಸ್ವರೂಪ ಪಡೆಯಲಿದೆ. ಶುಭ: 09,19,29. ಅಶುಭ: 11,15,22.
ಧನು
ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿ. ಮಾನಸಿಕ ಕ್ಲೇಶಗಳು, ಕುಟುಂಬದಲ್ಲಿ ಅಶಾಂತಿ, ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಬಹುದು. ಕೌಟುಂಬಿಕ ಜೀವನದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಲಿವೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಶುಭ: 12,16,29. ಅಶುಭ: 10,17,26.
ಮಕರ
ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಸಹವರ್ತಿಗಳು ನಿಮ್ಮ ಯೋಜನೆಗಳಿಗೆ ಬೆಂಬಲ ನೀಡಲಿದ್ದಾರೆ. ಸಾಹಿತ್ಯ ಚಟುವಟಿಕೆಗಳಲ್ಲಿ ಉತ್ತಮ ಮನ್ನಣೆ ಗಳಿಸಲಿದ್ದೀರಿ. ಅದೃಷ್ಟದ ಭಾಗ್ಯಗಳು ಒದಗಿಬರಲಿವೆ. ಕುಟುಂಬ ಸದಸ್ಯರೊಂದಿಗೆ ಬಾಂಧವ್ಯ ಗಟ್ಟಿಯಾಗಲಿದೆ. ಶುಭ: 13,19,28. ಅಶುಭ: 11,17,26.
ಕುಂಭ
ಅಪರಿಚಿತ ವ್ಯಕ್ತಿಗಳಿಂದ ನಿಮ್ಮ ಯೋಜನೆಗಳಲ್ಲಿ ನಷ್ಟವಾಗಬಹುದು, ಎಚ್ಚರದಿಂದಿರಿ. ವಾಹನದಲ್ಲಿ ಜಾಗೃತೆ ವಹಿಸಿ. ಹಣಕಾಸಿನ ವಿಷಯದಲ್ಲಿ ಉತ್ತಮ ರೀತಿಯ ವ್ಯವಹಾರ ಕಾಣಬಹುದು. ದಿಢೀರ್ ಆಗಿ ಹಣಕಾಸಿನ ವೆಚ್ಚ ಹೆಚ್ಚಾಗಲಿದೆ. ವೃತ್ತಿ, ವ್ಯಾಪಾರದಲ್ಲಿ ನಿಮ್ಮ ಶ್ರಮಕ್ಕೆ ಫಲ ಸಿಗಲಿದೆ. ಶುಭ: 09,14,26. ಅಶುಭ: 11,15,27.
ಮೀನ
ಈ ಹಿಂದೆ ಮಾಡಿದ ಕೆಲಸಕ್ಕೆ ಮೆಚ್ಚುಗೆ, ಮನ್ನಣೆ, ಪುರಸ್ಕಾರಗಳು ಲಭಿಸಲಿವೆ. ನಿಮ್ಮ ಯಶಸ್ಸು ಕಂಡು ಪೋಷಕರು ಸಂತೋಷ ಪಡುತ್ತಾರೆ. ಈಗಿರುವುದರೊಂದಿಗೆ ಇನ್ನೂ ಹಲವು ಕೆಲಸವನ್ನು ಒಪ್ಪಿಕೊಳ್ಳಲಿದ್ದೀರಿ. ಆರ್ಥಿಕವಾಗಿ ಲಾಭವಾಗಲಿದೆ. ಶುಭ: 06,14,22. ಅಶುಭ: 12,18,29.