ಬೆಂಗಳೂರು: ಪ್ರಜ್ವಲ್ ಪ್ರಕರಣದಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಆಘಾತಕ್ಕೆ ಒಳಗಾಗಿದ್ದಾರೆ. ತಂದೆ (ಎಚ್.ಡಿ. ಕುಮಾರಸ್ವಾಮಿ) ಜತೆ ಹಾಸನಕ್ಕೆ ತೆರಳಿ ಆತ್ಮಸ್ಥೈರ್ಯ ತುಂಬಲಾಗುವುದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡ ಅವರನ್ನು ಶನಿವಾರ ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಘಟನೆಯಿಂದ ದೇವೇಗೌಡರು ಆಘಾತಕ್ಕೆ ಒಳಗಾಗಿದ್ದಾರೆ. 91ರ ಇಳಿವಯಸ್ಸಿನಲ್ಲಿ ಅವರಿಗಾದ ನೋವು ಊಹಿಸಲೂ ಸಾಧ್ಯವಿಲ್ಲ. ಸಾಕಷ್ಟು ನೊಂದಿದ್ದಾರೆ. ವಿಶ್ರಾಂತಿಯಲ್ಲಿ ಇದ್ದಾರೆ’ ಎಂದರು.

‘ವಿಡಿಯೊಗಳನ್ನು ನಾನು ನೋಡಿಲ್ಲ. ಬೇರೆಯವರಿಂದ ವಿಡಿಯೊಗಳ ಬಗ್ಗೆ ಕೇಳಿದ್ದೇನೆ. ಸದ್ಯ ಪ್ರಜ್ವಲ್ ಆರೋಪಿ ಸ್ಥಾನದಲ್ಲಿದ್ದಾರೆ. ಎಸ್‌ಐಟಿ ತನಿಖೆ ನಡೆಯುತ್ತಿದೆ. ತಪ್ಪು ಮಾಡಿದ್ದರೆ ಖಂಡಿತ ಶಿಕ್ಷೆ ಅನುಭವಿಸುತ್ತಾರೆ. ಆದರೆ, ವಿಡಿಯೊ ಪ್ರಸಾರ ಮಾಡಿದವರು ಮಹಿಳೆಯರ ಘನತೆಗೆ ಕುತ್ತು ತಂದಿದ್ದಾರೆ. ಕೊನೆಯ ಪಕ್ಷ ಮಸುಕು ಮಾಡಬಹುದಿತ್ತು’ ಎಂದರು.

‘ಹಾಸನ ಸಂಸದರ ವಿಚಾರದಲ್ಲಿ ದೇಶದ ಪ್ರಧಾನಿಗಳನ್ನು ಎಳೆದು ತರುವ ಕೆಲಸವನ್ನು ಕಾಂಗ್ರೆಸ್ ಮಾಡಬಾರದು. ಅವರಿಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಹೇಳಿದರು.
.ಲೈಂಗಿಕ ದೌರ್ಜನ್ಯ ಪ್ರಕರಣ: ದೇವೇಗೌಡರ ಮನೆಯಲ್ಲೇ ರೇವಣ್ಣ ಸೆರೆ.ಪ್ರಜ್ವಲ್ ರೇವಣ್ಣ ವಿರುದ್ಧ ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಜಾರಿ ಸಾಧ್ಯತೆ: SIT.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.