ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
30/06/2024 - 06/07/2024
ವಾರ ಭವಿಷ್ಯ: ಜುಲೈ 7 ರಿಂದ ಜುಲೈ 13ರವರೆಗೆ– ಅನಿರೀಕ್ಷಿತ ಲಾಭ ಬರುವ ಸಂಭವ
Published 6 ಜುಲೈ 2024, 18:31 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಒಂದು ರೀತಿಯ ಸಿಟ್ಟು ಸೆಡವುಗಳು ನಿಮ್ಮ ಮನಸ್ಸಿನಲ್ಲಿ ಇರುತ್ತದೆ. ಆದಾಯವು ಉತ್ತಮವಾಗಿದ್ದರೂ ಸಹ ಅನಿರೀಕ್ಷಿತ ಖರ್ಚು ಗಳು ಬರಬಹುದು. ಹಿರಿಯರೊಡನೆ ನಿಷ್ಠೂರ ಉಂಟಾಗುವ ಸಾಧ್ಯತೆಗಳಿವೆ. ಭೂಮಿಯ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚುತ್ತದೆ. ನೀರಿನ ವ್ಯವಹಾರ ಮಾಡುವವರಿಗೂ ಸಹ ಲಾಭ ಹೆಚ್ಚುತ್ತದೆ. ಅಧ್ಯಯನ ಮಾಡುವರು ಹೆಚ್ಚು ಶ್ರದ್ಧೆ ವಹಿಸಿ ಅಧ್ಯಯನ ಮಾಡಬೇಕು. ಕೆಲವು ಆರೋಗ್ಯ ಸಮಸ್ಯೆಗಳು ನಿಮ್ಮ ತಿಳು ವಳಿಕೆಗೆ ಬರದೆ ಕಾಡಬಹುದು. ಸಂಗಾತಿಗಾಗಿ ಭೂಮಿ ಖರೀದಿ ಮಾಡಲು ಮುಂದಾಗುವಿರಿ. ಹಣಕಾಸಿನ ವ್ಯವಹಾರ ಮಾಡುತ್ತಿರುವವರಿಗೆ ಅನಿರೀಕ್ಷಿತ ಲಾಭವಿರುತ್ತದೆ. ರಾಜಕಾರಣಿಗಳಿಗೆ ಅಭಿವೃದ್ಧಿಯ ಯೋಗವಿದೆ.
ವೃಷಭ
ಬಹಳ ಗಂಭೀರ ನಡವಳಿಕೆ ನಿಮ್ಮಲ್ಲಿ ಇರುತ್ತದೆ.ಹಿರಿಯ ವಿದ್ವಾಂಸರುಗಳಿಗೆ ಗೌರವ ದೊರೆಯುತ್ತದೆ. ಆದಾಯವು ನಿರೀಕ್ಷೆಯ ಮಟ್ಟಕ್ಕಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಹೆಚ್ಚು ಜನರ ಸಹಾಯ ಸಿಗುತ್ತದೆ. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರ ಆದಾಯ ಹೆಚ್ಚುತ್ತದೆ. ಅಧ್ಯಯನಶೀಲರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ಆಹಾರ ವ್ಯತ್ಯಾಸದಿಂದ ಅನಾ ರೋಗ್ಯದ ಸಂಭವವಿದೆ. ಸಂಗಾತಿಯ ಆಸೆಗಾಗಿ ಕೃಷಿಗೆ ಹಣಹೂಡುವಿರಿ,ವೃತ್ತಿಯಲ್ಲಿ ಶ್ರಮಪಟ್ಟು ಕೆಲಸ ಮಾಡಿ ಹೆಸರನ್ನು ಗಳಿಸುವಿರಿ. ವಿದೇಶಕ್ಕೆ ಆಹಾರ ವಸ್ತುಗಳನ್ನು ರಫ್ತು ಮಾಡುವವರಿಗೆ ಆದಾಯ ಹೆಚ್ಚುತ್ತದೆ.ಸಾಂಪ್ರದಾಯಿಕ ಬೆಳೆಗ ಳನ್ನು ಬೆಳೆಯುವವರಿಗೆ ಹೆಚ್ಚು ಅಭಿವೃದ್ಧಿ ಇರು ತ್ತದೆ.
ಮಿಥುನ
ಬಹಳಷ್ಟು ಆತ್ಮಗೌರವವನ್ನು ಹೆಚ್ಚಿಸಿ ಕೊಳ್ಳುವಿರಿ. ಆದಾಯವು ನಿರೀಕ್ಷಿತ ಮಟ್ಟದಲ್ಲಿ ರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರ ಸಹಕಾರ ದೊರೆಯುತ್ತದೆ. ನಿಮ್ಮ ನಡವಳಿಕೆ ಯಲ್ಲಿ ಹೆಚ್ಚು ಗಂಭೀರತೆ ಇರುತ್ತದೆ. ಆಸ್ತಿ ವ್ಯವ ಹಾರಗಳಲ್ಲಿ ಅಂತಹ ಪ್ರಗತಿ ಇರುವುದಿಲ್ಲ. ಸಂಗೀತಗಾರರಿಗೆ ಹೆಚ್ಚಿನ ಅವಕಾಶ ಮತ್ತು ಪ್ರೋತ್ಸಾಹ ಸಿಗುತ್ತದೆ. ಹಳೆಯ ಕಾಯಿಲೆಗಳು ಈಗ ಕಾಡಬಹುದು. ಸಂಗಾತಿಯ ವ್ಯವಹಾರ ಗಳಿಗಾಗಿ ಹೆಚ್ಚು ಹಣ ಹೂಡಬೇಕಾಗುತ್ತದೆ. ಸಾಂಪ್ರದಾಯಕ ಕೃಷಿ ಮಾಡುವವರಿಗೆ ಹೆಚ್ಚು ಬೆಲೆ ಬರುತ್ತದೆ. ಅದಿರು ವ್ಯಾಪಾರಿಗಳಿಗೆ ಲಾಭವಿರುತ್ತದೆ.ಮೂಳೆ ತೊಂದರೆಗಳು ಕಾಣಿಸಬಹುದು. ಕೃಷಿಯಿಂದ ಲಾಭವಿರುತ್ತದೆ.
ಕರ್ಕಾಟಕ
ಬುದ್ಧಿವಂತಿಕೆ ಮತ್ತು ಜನರನ್ನು ಆಕರ್ಷಿ ಸುವ ಕಲೆನಿಮಗೆ ತಿಳಿದಿರುತ್ತದೆ.ಆದಾಯದಷ್ಟೇ ಖರ್ಚು ಇರುತ್ತದೆ. ಸ್ವಲ್ಪ ಆಲಸೀತನ ನಿಮ್ಮಲ್ಲಿ ಇರುತ್ತದೆ. ಭೂಮಿಯ ವ್ಯವಹಾರ ಮಾಡುವವ ರಿಗೆ ಹೆಚ್ಚು ಹಣ ದೊರೆಯುತ್ತದೆ. ಅಧ್ಯಯನ ಶೀಲರಿಗೆ ಅಧ್ಯಯನದಲ್ಲಿ ಏಕಾಗ್ರತೆ ಕಡಿಮೆ ಯಾಗಬಹುದು. ಉದರ ಸಂಬಂಧಿ ದೋಷ ಗಳು ಕಾಣಿಸಬಹುದು. ನಿಮ್ಮ ಸಂಗಾತಿಯು ನಿಮ್ಮ ಮಾತಿಗೆ ಬೆಲೆಯನ್ನು ಕೊಡದಿರಬಹುದು. ಗಣಿತ ತಜ್ಞರಿಗೆ ಹೆಚ್ಚು ಮಾರುಕಟ್ಟೆ ಇರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸರಾಗತೆಯನ್ನು ಕಾಣಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಅನಿರೀಕ್ಷಿತ ಆದಾಯ ಇರುತ್ತದೆ.
ಸಿಂಹ
ವ್ಯವಹಾರ ಚತುರರಾಗಿರುವಿರಿ. ಅದರಲ್ಲೂ ಆಹಾರ ವಸ್ತುಗಳ ವ್ಯವಹಾರದಲ್ಲಿ ಹೆಚ್ಚು ಸಾಧನೆ ಮಾಡುವಿರಿ. ಆದಾಯವು ಸ್ವಲ್ಪ ಕಡಿಮೆ ಇರುತ್ತದೆ. ಸಂಗಾತಿಯ ಸಂತೋಷಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಹಿರಿಯರ ಆಸ್ತಿ ಮಾರುವುದರಿಂದ ಸಾಕಷ್ಟು ಲಾಭವಿರುತ್ತದೆ. ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹೆಚ್ಚಿನ ಅನುಕೂಲವಿರುತ್ತದೆ. ಕಾಲಿನಲ್ಲಿ ಸೆಳೆತ ಕಾಣಿಸ ಬಹುದು. ಪಾಲುದಾರಿಕೆಯ ವ್ಯವಹಾರಗಳಲ್ಲಿ ಪಾಲುದಾರರು ಸಾಕಷ್ಟು ಪ್ರಶ್ನೆ ಮಾಡುವರು. ಅನಿರೀಕ್ಷಿತವಾಗಿ ವಿದೇಶಯಾನ ಯೋಗ ದೊರೆ ಯಬಹುದು. ಕೃಷಿಯಿಂದ ಹೆಚ್ಚು ಲಾಭ ಬರು ತ್ತದೆ. ಉದ್ಯೋಗದಲ್ಲಿ ಅಭಿವೃದ್ಧಿ ಇರುತ್ತದೆ. ಹೈನುಗಾರಿಕೆ ಮಾಡುವವರಿಗೆ ಆದಾಯ ಹೆಚ್ಚುತ್ತದೆ.
ಕನ್ಯಾ
ಆದಾಯವು ತುಸು ಏರಿಕೆ ಮಟ್ಟವನ್ನು ಕಾಣು ತ್ತದೆ. ಕೆಲಸ ಕಾರ್ಯಗಳನ್ನು ಮಾಡುವಲ್ಲಿ ವಿಳಂಬ ಧೋರಣೆ ತಾಳುವಿರಿ. ಹಣಕಾಸಿನ ವ್ಯವಹಾರ ಮಾಡುತ್ತಿರುವವರಿಗೆ ಹಳೆಯ ಬಾಕಿ ಹಣ ವಸೂಲಿಯಾಗಬಹುದು. ಕೃಷಿಯಲ್ಲಿ ಸಂಶೋಧನೆ ಮಾಡುತ್ತಿರುವವರಿಗೆ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ಕಾಲುಗಳಲ್ಲಿ ಹೆಚ್ಚು ನೋವು ಕಾಣಿಸಬಹುದು. ಸಂಗಾತಿಯ ಕಠಿಣ ಪ್ರಶ್ನೆಗಳು ನಿಮ್ಮನ್ನು ತಬ್ಬಿಬ್ಬು ಮಾಡುತ್ತವೆ. ವೃತ್ತಿ ಯಲ್ಲಿ ಅಂತಹ ಏಳಿಗೆ ಇರುವುದಿಲ್ಲ. ಸರ್ಕಾರಿ ಗುತ್ತಿಗೆದಾರರಿಗೆ ಲಾಭವಿರುತ್ತದೆ. ಸಂಗಾತಿಗೆ ವಿದೇಶಕ್ಕೆ ಹೋಗುವ ಅವಕಾಶ ದೊರೆಯ ಬಹುದು. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚು ವ್ಯಾಪಾರವಾಗುತ್ತದೆ.
ತುಲಾ
ಸ್ವಂತ ಉದ್ಯೋಗ ಮಾಡುವವರಿಗೆ ಲಾಭ ಹೆಚ್ಚುತ್ತದೆ.ಈ ವಾರ ಹೆಚ್ಚು ತಾಳ್ಮೆಯಿಂದ ಇರುವುದು ಒಳ್ಳೆಯದು. ಸಮೂಹದಲ್ಲಿ ಮಾತ ನಾಡುವಾಗ ಎಚ್ಚರವಿರಲಿ.ಕೆಲವರ ಕುಕೃತ್ಯಗಳು ಅವರಿಗೆ ವಾಪಸ್ಸುಬರುವ ಸಾಧ್ಯತೆಗಳಿವೆ ನೀವು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಂದ ನಿಮ್ಮ ಆದಾಯ ಕಡಿಮೆಯಾಗುತ್ತದೆ.ಉದ್ಯೋಗವನ್ನು ಬದಲಾವಣೆ ಮಾಡುವರು ಸಾಕಷ್ಟು ಎಚ್ಚರ ವಹಿಸಿರಿ. ರಾಜಕೀಯ ನಾಯಕರುಗಳಿಗೆ ಹೊಸ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ವಿದೇಶಿ ವ್ಯವಹಾರ ಮಾಡುವವರಿಗೆ ಹಿನ್ನಡೆಯಾಗಬ ಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು. ಸರ್ಕಾರದಿಂದ ಬರುವ ಹಣಕಾಸಿನ ಸಹಾಯಗಳು ಸಹ ನಿಧಾನವಾಗುತ್ತದೆ.
ವೃಶ್ಚಿಕ
ದ್ವಂದ್ವ ನಿರ್ಧಾರಗಳಿಂದ ಕೆಲಸ ಕಾರ್ಯಗಳಲ್ಲಿ ಗೋಜಲು ಮಾಡಿಕೊಳ್ಳುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಮಾತಿನಲ್ಲಿಮೃದುತ್ವ ಇರುತ್ತದೆ. ಕೆಲಸಗಾರರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆ ಬರಬ ಹುದು.ಕೃಷಿಕ್ಷೇತ್ರವನ್ನುಅಭಿವೃದ್ಧಿಪಡಿಸಬಹುದು. ಕೃಷಿ ಭೂಮಿಯನ್ನು ಕೊಳ್ಳುವ ಯೋಗವಿದೆ. ಮಕ್ಕಳಿಂದ ನಿರೀಕ್ಷಿತ ಪ್ರಮಾಣದ ಸಹಾಯವು ದೊರೆಯುವುದಿಲ್ಲ. ಆಮದು ರಫ್ತು ಮಾಡುವ ವರಿಗೆ ಸಾಕಷ್ಟುಅಭಿವೃದ್ಧಿ ಇರುತ್ತದೆ.ಹರಿತವಾದ ಆಯುಧಗಳನ್ನು ಉಪಯೋಗಿಸುವಾಗ ಹೆಚ್ಚು ಎಚ್ಚರವಿರಲಿ. ಸಂಗಾತಿಯಿಂದ ಧನಸಹಾಯ ವನ್ನು ನಿರೀಕ್ಷೆ ಮಾಡಬಹುದು. ಧಾರ್ಮಿಕ ವಸ್ತು ಗಳನ್ನು ಮಾರಾಟಮಾಡುವವರಿಗೆ ಹೆಚ್ಚು ಲಾಭ ವಿರುತ್ತದೆ.
ಧನು
ಆತ್ಮಗೌರವಕ್ಕೆ ಹೆಚ್ಚು ಬೆಲೆ ಕೊಡುವಿರಿ. ಆದಾಯವು ಕಡಿಮೆ ಇರುತ್ತದೆ. ನಿಮ್ಮದೇ ಆದ ಚಾಣಾಕ್ಷತನದಿಂದ ಶತ್ರುಗಳನ್ನು ಸದ್ದಿಲ್ಲದಂತೆ ಮಾಡುವಿರಿ. ಕೆಲಸ ಕಾರ್ಯಗಳನ್ನು ಬಹಳ ಶ್ರದ್ಧೆಯಿಂದ ಮಾಡುವಿರಿ. ವಿದೇಶದಲ್ಲಿರುವ ವರು ಸ್ಥಿರಾಸ್ತಿ ಮಾಡಿಕೊಳ್ಳಬಹುದು. ಕೃಷಿಕರಿಗೆ ಬಹಳ ಅಭಿವೃದ್ಧಿ ಇರುತ್ತದೆ. ಸಾಹಸ ಕಲಾವಿದ ರುಗಳಿಗೆ ಮಾರುಕಟ್ಟೆ ಹೆಚ್ಚುತ್ತದೆ. ಆಹಾರದ ವ್ಯತ್ಯಾಸದಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗ ಬಹುದು. ಸಂಗಾತಿಯ ಕೆಲವು ನಿರ್ಧಾರಗಳು ನಿಮಗೆ ಸಂತಸ ತರುತ್ತದೆ.ತಂದೆಯಿಂದ ಸೂಕ್ತ ಸಮಯಕ್ಕೆ ಸಹಕಾರ ಸಲಹೆಗಳು ಬರುತ್ತವೆ. ವೃತ್ತಿಯಲ್ಲಿ ವೇತನ ಏರಿಕೆಯ ಸಾಧ್ಯತೆಗಳಿವೆ. ವಿದೇಶಿ ಕಂಪನಿಗಳಿಗೆ ಭೂಮಿಕೊಡಿಸುವವರಿಗೆ ಲಾಭ ಹೆಚ್ಚುತ್ತದೆ.
ಮಕರ
ನಿಮ್ಮ ದೈನಂದಿನ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳುವಿರಿ. ಆದಾಯ ಕಡಿಮೆ ಇರುತ್ತದೆ ಆದರೆ ಹಣ ನಿರ್ವಹಣೆಯನ್ನು ಸರಿಯಾಗಿ ಕಾಯ್ದುಕೊಳ್ಳುವಿರಿ. ಪರಾಕ್ರಮಯುಕ್ತ ಕೆಲವು ಕೆಲಸಗಳನ್ನು ಕೈಗೆತ್ತಿಕೊಳ್ಳುವಿರಿ. ಕೃಷಿಯನ್ನು ಬಹಳಶ್ರದ್ಧೆಯಿಂದ ಮಾಡುವಿರಿ.ಉಪಾಧ್ಯಾಯ ರುಗಳಿಗೆ ವಿದ್ವಾಂಸರುಗಳಿಗೆ ಈಗ ಗೌರವ ದೊರೆಯುವ ಸಾಧ್ಯತೆಗಳಿವೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಇರುತ್ತದೆ. ಕಣ್ಣಿನ ತೊಂದರೆಗಳು ನಿಧಾನವಾಗಿ ಕರಗುತ್ತವೆ. ಸಂಗಾತಿಯ ಕಡೆಯಿಂದ ವ್ಯವಹಾರಕ್ಕೆ ಧನ ಸಹಾಯ ಮತ್ತುಪಾಲುದಾರಿಕೆವ್ಯವಹಾರಗಳಲ್ಲಿ ಅವಕಾಶ ಸಿಗುತ್ತದೆ. ತಂದೆಯಿಂದ ವ್ಯಾಪಾರ ವ್ಯವಹಾರಗಳ ಬಗ್ಗೆ ತಿಳುವಳಿಕೆಯನ್ನು ಈಗ ಪಡೆಯಬಹುದು. ವೃತ್ತಿಯಲ್ಲಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ಬೆಳ್ಳಿಯ ಆಭರಣ ತಯಾರಕರಿಗೆ ಬೇಡಿಕೆ ಹೆಚ್ಚುತ್ತದೆ. ಕೃಷಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ.
ಕುಂಭ
ಹಿರಿಯರು ಸಮಾಜ ಸೇವೆಯುತ್ತ ಹೆಚ್ಚಿನ ಗಮನ ಕೊಡುವರು. ಆದಾಯವು ಕಡಿಮೆ ಇದ್ದುಅದನ್ನುಹೊಂದಾಣಿಕೆಮಾಡುವಿರಿ. ವಿದೇಶಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ.ವಯಸ್ಕರ ಮಾತಿನಲ್ಲಿ ವ್ಯತ್ಯಾಸ ಗಳಿದ್ದು ಟೀಕೆಗೆ ಒಳಗಾಗುತ್ತದೆ. ಹಣದ ವ್ಯವ ಹಾರ ಮಾಡುವವರಿಗೆ ಆದಾಯವಿಲ್ಲದಿದ್ದರೂ ನಷ್ಟವಿರುವುದಿಲ್ಲ. ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಅನುಕೂಲವಿರುತ್ತದೆ. ರಕ್ತ ಸಂಬಂಧಿ ದೋಷಗಳು ಚರ್ಮ ಕಾಯಿಲೆ ಗಳು ಇರುವವರು ಎಚ್ಚರ ವಹಿಸಿರಿ. ಸಂಗಾತಿ ಯಿಂದ ಸಾಕಷ್ಟು ಅನುಕೂಲವಾಗುತ್ತದೆ. ಸಂಗಾತಿ ಕಡೆಯವರಿಂದ ನಿಮ್ಮ ವಿದ್ಯೆಗೆ ಅನು ಕೂಲ ದೊರೆಯುತ್ತದೆ.ಆಭರಣ ವ್ಯಾಪಾರ ಗಾರರಿಗೆ ಲಾಭವಿರುತ್ತದೆ.
ಮೀನ
ನಿಮ್ಮ ನಡವಳಿಕೆಯಲ್ಲಿ ಬಹಳ ತೋರಿಕೆ ಇರುತ್ತದೆ. ಆದಾಯವು ಕಡಿಮೆ ಇರುವಸಾಧ್ಯತೆ ಗಳಿವೆ. ಹಿರಿಯರು ನಿಮ್ಮ ಕೆಲಸಕಾರ್ಯಗಳನ್ನು ಸೂಕ್ಷ್ಮವಾಗಿಗಮನಿಸಿ ಸರಿಅನಿಸಿದರೆ ಸಹಾಯ ಮಾಡುವರು. ಸರ್ಕಾರಿ ಲೆಕ್ಕದ ಆಸ್ತಿಗಳನ್ನು ವಿಲೇವಾರಿ ಮಾಡುವವರಿಗೆ ಅನುಕೂಲವಿರು ತ್ತದೆ. ಉನ್ನತ ಹುದ್ದೆಗಳಿಗೆ ಓದುತ್ತಿರುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಕಣ್ಣಿನ ತೊಂದರೆಯ ಬಗ್ಗೆ ಹೆಚ್ಚು ಗಮನವಹಿಸಿರಿ. ಹಿರಿ ಯರ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು. ಇದ್ದಕ್ಕಿದ್ದಂತೆ ಧರ್ಮ ಶ್ರದ್ಧೆ ಬರುವ ಸಾಧ್ಯತೆ ಗಳಿವೆ .ಕಬ್ಬಿಣದವ್ಯಾಪಾರಿಗಳಿಗೆಲಾಭವಿರುತ್ತದೆ.ಹಿರಿಯರ ಆರೋಗ್ಯಕ್ಕಾಗಿ ಹೆಚ್ಚು ಹಣಖರ್ಚಾ ಗುವುದು. ತಂದೆ ಮಕ್ಕಳ ನಡುವೆ ಕಾವೇರಿದ ವಾತಾವರಣ ವಿರುತ್ತದೆ.