ವಾರ ಭವಿಷ್ಯ: ವಿದೇಶದಲ್ಲಿ ಓದಬೇಕೆನ್ನುವ ಈ ರಾಶಿಯವರಿಗೆ ಈಗ ಉತ್ತಮ ಫಲ ಸಿಗಲಿದೆ
Published 24 ಆಗಸ್ಟ್ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಏನೋ ಒಂದು ಸಾಧನೆ ಮಾಡಿದಂತೆ ಮನಸ್ಸಿನಲ್ಲಿ ಸಂತೋಷವಿರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯು ಆದಾಯ ಮಾಡಿಕೊಳ್ಳುವತ್ತಲೇ ಇರುತ್ತದೆ. ಗಣಿತ ವಿದ್ಯಾರ್ಥಿಗಳಿಗೆ ಹಾಗೂ ಯಾವುದೇ ಅಧ್ಯಯನ ನಡೆಸುತ್ತಿರುವವರಿಗೆ ಉತ್ತಮ ಪ್ರಗತಿ ಸಿಗಲಿದೆ. ಮೂತ್ರ ಸಂಬಂಧಿ ಕಾಯಿಲೆಗಳು ಕೆಲವರನ್ನು ಕಾಡಬಹುದು. ನಿಮ್ಮ ಸಂಗಾತಿಯ ಸಾಲಕಟ್ಟಲು ಹಣ ಖರ್ಚಾಗುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭವಿರುತ್ತದೆ. ಕೃಷಿಯಿಂದ ನಿರೀಕ್ಷಿತ ಲಾಭ ಇರುವುದಿಲ್ಲ. ಬಂಧುಗಳಿಂದ ಸ್ವಲ್ಪ ತೊಂದರೆ ಎದುರಾಗಬಹುದು. ಹೆಚ್ಚಿನ ಒಳಿತಿಗಾಗಿ ದುರ್ಗೆಯನ್ನು ಪ್ರಾರ್ಥಿಸಿ.
24 ಆಗಸ್ಟ್ 2024, 23:30 IST
ವೃಷಭ
ದೃಢವಾದ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುವಿರಿ. ಇದು ನಿಮ್ಮ ಮುಂದಿನ ಕೆಲಸಗಳಿಗೆ ಅನುಕೂಲವಾಗುತ್ತದೆ. ಹಣದ ಒಳ ಹರಿವು ಮಧ್ಯಮಗತಿಯಲ್ಲಿದ್ದರೂ ಯಾವುದೇ ತೊಂದರೆ ಇರುವುದಿಲ್ಲ. ನಿಮ್ಮ ಚಟುವಟಿಕೆಗಳಿಂದ ಹೊಸ ಆದಾಯದ ಮೂಲಗಳನ್ನು ಹುಡುಕುವಿರಿ. ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಉತ್ತಮ ಅವಕಾಶಗಳಿರುತ್ತವೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಹಣ ನಿರ್ವಹಣೆ ಸರಿಯಾಗಿರಲಿ. ಇಲ್ಲವಾದಲ್ಲಿ ಸಾಲ ಮಾಡಬೇಕಾಗುತ್ತದೆ. ಸಂಗಾತಿಯಿಂದ ಧನ ಸಹಾಯ ಸಿಗುತ್ತದೆ. ಕೃಷಿಯಲ್ಲಿ ಅಭಿವೃದ್ಧಿ ಇರುತ್ತದೆ. ಹೆಚ್ಚಿನ ಒಳಿತಿಗಾಗಿ ಲಕ್ಷ್ಮಿ ಗಣೇಶರನ್ನು ಪ್ರಾರ್ಥಿಸಿರಿ.
24 ಆಗಸ್ಟ್ 2024, 23:30 IST
ಮಿಥುನ
ವ್ಯಾವಹಾರಿಕವಾಗಿ ಬಹಳ ಚುರುಕಾಗಿರುವಿರಿ. ಆದಾಯವು ನಿರೀಕ್ಷೆಯ ಹತ್ತಿರ ಬರಲಿದೆ. ಹಿರಿಯರೊಡನೆ ಉತ್ತಮ ಸಂಬಂಧವನ್ನು ರೂಡಿಸಿಕೊಳ್ಳುವಿರಿ. ಭೂಮಿಯ ವ್ಯವಹಾರಗಳಿಂದ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಸಾಧಾರಣ ಫಲಿತಾಂಶವಿರುತ್ತದೆ. ಉದರ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ನಿಮ್ಮ ಸಂಗಾತಿಯ ಸಂಬಂಧಿಗಳ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ. ಎಲೆಕ್ಟ್ರಾನಿಕ್ಸ್ ಉದ್ದಿಮೆದಾರರಿಗೆ ಹೆಚ್ಚಿನ ಅನುಕೂಲವಿರುತ್ತದೆ.
ಉದ್ಯೋಗದಲ್ಲಿ ಹಿತಶತ್ರುಗಳಿರುವರು. ನಿಮ್ಮ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ. ಹೆಚ್ಚಿನ ಒಳಿತಿಗಾಗಿ ದುರ್ಗೆ ಮತ್ತು ಸುಬ್ರಹ್ಮಣ್ಯನ ಆರಾಧನೆ ಮಾಡಿರಿ.
24 ಆಗಸ್ಟ್ 2024, 23:30 IST
ಕರ್ಕಾಟಕ
ವ್ಯವಹಾರದ ನಿಪುಣತೆಯನ್ನು ಕರಗತ ಮಾಡಿಕೊಳ್ಳುವಿರಿ. ಆದಾಯವು ಉತ್ತಮವಾಗಿರುತ್ತದೆ. ಸರ್ಕಾರದಿಂದ ಬರಬೇಕಾಗಿದ್ದ ಹಣ ಈಗ ಬರುತ್ತವೆ. ನಿಮ್ಮ ಸೋದರಿಯರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಬರಬಹುದು. ವಿದ್ಯಾರ್ಥಿಗಳಿಗೆ ಯಶಸ್ಸಿನ ಹಾದಿ ಇರುತ್ತದೆ. ಮಾಂಸ ಖಂಡಗಳಲ್ಲಿ ನೋವು ಕೆಲವರಿಗೆ ಬರಬಹುದು. ಸಂಗಾತಿಯು ನಿಮ್ಮ ಆಲೋಚನೆಗಳಿಗೆ ಸ್ಪಂದಿಸದಿರಬಹುದು. ಸೈನಿಕರಿಗೆ ಹೆಚ್ಚು ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣಬಹುದು. ವಿದ್ಯುತ್ ಕ್ಷೇತ್ರದಲ್ಲಿರುವವರಿಗೆ ಅಭಿವೃದ್ಧಿ ಇರುತ್ತದೆ. ಹೆಚ್ಚಿನ ಒಳಿತಿಗಾಗಿ ಶನೇಶ್ಚರರಧ್ಯಾನ ಮಾಡಿರಿ.
24 ಆಗಸ್ಟ್ 2024, 23:30 IST
ಸಿಂಹ
ಬಹಳ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡು ಮುನ್ನಡೆಯುವಿರಿ. ನಿಮ್ಮ ನಿರ್ಧಾರಗಳಿಂದ ನಿಮಗೆ ಗೌರವ ಬರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಸಂಗಾತಿಯ ಹೂಡಿಕೆಗಳು ಕೈಕೊಡಬಹುದು. ಭೂಮಿ ವ್ಯವಹಾರಗಳಲ್ಲಿ ಲಾಭ ಬರುತ್ತದೆ. ವಿದ್ಯಾರ್ಥಿಗಳಿಗೆ ಸಾಧಾರಣ ಅಭಿವೃದ್ಧಿ ಇರುತ್ತದೆ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಸಂಗಾತಿಯ ನಡುವೆ ಕಾವೇರಿದ ಮಾತುಗಳಾಗುವ ಸಾಧ್ಯತೆಗಳಿವೆ. ನ್ಯಾಯಾಧೀಶರುಗಳಿಗೆ ಉತ್ತಮ ನ್ಯಾಯದಾನ ಮಾಡುವ ಅವಕಾಶವಿದೆ. ವಿದೇಶಿ ವ್ಯವಹಾರಗಳಲ್ಲಿ ಸಾಕಷ್ಟು ಏರಿಳಿತವನ್ನು ಕಾಣಬಹುದು. ಹೆಚ್ಚಿನ ಒಳಿತಿಗಾಗಿ ಶನೇಶ್ಚರ ಧ್ಯಾನ ಮಾಡಿರಿ.
24 ಆಗಸ್ಟ್ 2024, 23:30 IST
ಕನ್ಯಾ
ನಿಮ್ಮ ಯೋಜನೆಗಳಿಗೆ ಹಣ ಒದಗದಿರಬಹುದು. ಆದಾಯವೂ ಕಡಿಮೆ ಇರುತ್ತದೆ. ನಿಮ್ಮ ಮಾತುಗಳು ದ್ವಂದ್ವಾರ್ಥದಿಂದ ಕೂಡಿರುತ್ತದೆ. ವ್ಯವಹಾರ ಚತುರತೆ ಹೆಚ್ಚಾಗುತ್ತದೆ. ನಿಮ್ಮ ಕೆಲಸಕಾರ್ಯಗಳಿಗೆ ಬಂಧುಗಳಿಂದ ಧನಸಹಾಯ ದೊರೆಯಬಹುದು. ರೈತರಿಗೆ ಹೆಚ್ಚು ಆದಾಯ ಬರುವ ಸಾಧ್ಯತೆ ಇದೆ. ಸಾಲ ಕೊಟ್ಟವರ ಕಾಟ ಬರಬಹುದು. ಸಂಗಾತಿಯ ವಿಪರೀತವಾದ ಖರ್ಚುಗಳು ನಿಮಗೆ ಗಾಬರಿ ಹುಟ್ಟಿಸಬಹುದು. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಸಹೋದ್ಯೋಗಿಗಳಿಂದ ಸೂಕ್ತ ಸಹಾಯ ದೊರೆಯುತ್ತದೆ. ಹೆಚ್ಚಿನ ಒಳಿತಿಗಾಗಿ ಗಣೇಶ ಸುಬ್ರಹ್ಮಣ್ಯರನ್ನು ಧ್ಯಾನ ಮಾಡಿರಿ.
24 ಆಗಸ್ಟ್ 2024, 23:30 IST
ತುಲಾ
ಮನಸ್ಸಿನಲ್ಲಿ ಆನಂದವಿದ್ದರೂ ಒಳಗೆ ಬಹಳ ಆತಂಕವಿರುತ್ತದೆ. ಆದಾಯವು ನಿರೀಕ್ಷಿತ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಇರುತ್ತದೆ. ನೀವು ಮಾಡುವ ಆಚಾರ ವಿಚಾರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿ ಟೀಕೆಗೆ ಗುರಿಯಾಗುವ ಸಾಧ್ಯತೆಗಳಿವೆ. ಭೂಮಿಯ ಮಾರಾಟ ಮಾಡುವವರಿಗೆ ಸ್ವಲ್ಪ ನಷ್ಟವಾಗಬಹುದು. ಮಕ್ಕಳಿಂದ ಅಥವಾ ಬಂಧುಗಳಿಂದ ನಿರೀಕ್ಷಿತ ಗೌರವ ಇರುವುದಿಲ್ಲ. ಕೀಲುಗಳ ನೋವುಗಳು ಕೆಲವರನ್ನು ಕಾಡಬಹುದು. ನಿಮ್ಮ ಸಂಗಾತಿಯಿಂದ ನಿಮಗೆ ಸಾಂತ್ವನ ಸಿಗುತ್ತದೆ. ಹಿರಿಯರಿಂದ ಬರಬೇಕಾಗಿದ್ದ ಧನ ಸಹಾಯ ನಿಲ್ಲಬಹುದು. ಇನ್ನೂ ಹೆಚ್ಚಿನ ಒಳಿತಿಗಾಗಿ ಗಣೇಶ ಮತ್ತು ಲಕ್ಷ್ಮಿಯನ್ನು ಧ್ಯಾನ ಮಾಡಿರಿ.
24 ಆಗಸ್ಟ್ 2024, 23:30 IST
ವೃಶ್ಚಿಕ
ನಿಮ್ಮಲ್ಲಿ ಬಹಳ ಗಂಭೀರ ನಡವಳಿಕೆ ಇರುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ನಿಮ್ಮನ್ನು ಕಂಡರೆ ಶತ್ರುಗಳಿಗೆ ಭಯ ಹುಟ್ಟುವಂತೆ ಮಾಡುವಿರಿ. ಕೃಷಿಯಿಂದ ಹೆಚ್ಚಿನ ಆದಾಯ ಇರುತ್ತದೆ. ವಿದೇಶದಲ್ಲಿ ಓದಬೇಕೆನ್ನುವವರಿಗೆ ಉತ್ತಮ ಅವಕಾಶವಿರುತ್ತದೆ. ನಿಮ್ಮ ತಾಯಿಯು ನಿಮ್ಮ ಕೆಲವು ನಿರ್ಧಾರಗಳನ್ನು ಒಪ್ಪದಿರಬಹುದು. ಶೀತ ಬಾಧೆ ಇರುವವರು ಹೆಚ್ಚು ಎಚ್ಚರವಹಿಸಿರಿ. ಸಂಗಾತಿಗೆ ಕೃಷಿ ಭೂಮಿ ದೊರೆಯುವ ಸಾಧ್ಯತೆ ಇದೆ. ತಾಯಿಯಿಂದ ಸಾಕಷ್ಟು ಧನಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಪ್ರಗತಿಯನ್ನು ಕಾಣಬಹುದು. ಇನ್ನೂ ಹೆಚ್ಚಿನ ಒಳಿತಿಗಾಗಿ ದುರ್ಗೆ ಮತ್ತು ಗೌರಿಯನ್ನು ಪ್ರಾರ್ಥಿಸಿರಿ.
24 ಆಗಸ್ಟ್ 2024, 23:30 IST
ಧನು
ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚು ಮಾಡಿಕೊಳ್ಳಿರಿ. ಆದಾಯವು ಕಡಿಮೆ ಇದ್ದರೂ ನಿಮ್ಮ ಚಟುವಟಿಕೆಗಳಿಂದ ಆದಾಯ ಹೆಚ್ಚು ಮಾಡಿಕೊಳ್ಳಲು ಪ್ರಯತ್ನಪಡುವಿರಿ. ಶತ್ರುಗಳನ್ನು ಅವರದೇ ತಂತ್ರ ಬಳಸಿ ಸದೆ ಬಡಿಯುವಿರಿ. ವಿದೇಶಿ ಕಂಪನಿಗಳಿಗೆ ಭೂಮಿ ಮಾರುವವರಿಗೆ ಮತ್ತು ಭೂಮಿ ಕೊಡಿಸುವವರಿಗೆ ಆದಾಯವು ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಈಗ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಹೈನುಗಾರಿಕೆಯನ್ನು ಓದುತ್ತಿರುವವರಿಗೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಫಲಿತಾಂಶ ಬರಬಹುದು. ಬಂಧುಗಳಿಗೆ ಸಾಲ ಕೊಟ್ಟಿದ್ದ ಹಣದಲ್ಲಿ ಸ್ವಲ್ಪ ಮರಳಿ ಬರಬಹುದು. ಇನ್ನೂ ಹೆಚ್ಚಿನ ಒಳಿತಿಗಾಗಿ ನರಸಿಂಹ ಸ್ವಾಮಿಯ ಧ್ಯಾನ ಮಾಡಿರಿ.
24 ಆಗಸ್ಟ್ 2024, 23:30 IST
ಮಕರ
ಕಠಿಣ ಪರಿಶ್ರಮದಿಂದ ಮೇಲೆ ಬರುವಿರಿ. ಆದಾಯ ಕಡಿಮೆ ಇದ್ದರೂ ಹಣ ನಿರ್ವಹಣೆ ಮಾಡುವಿರಿ. ವಿದೇಶಗಳಿಗೆ ಹೋಗುವವರ ದಾಖಲಾತಿ ಮಾಡಿ ಕೊಡುವವರಿಗೆ ಆದಾಯ ಹೆಚ್ಚುತ್ತದೆ. ಸಂಸಾರದಲ್ಲಿ ಸಂತೋಷವಿರುತ್ತದೆ. ರೈತರಿಗೆ ಆದಾಯ ಹೆಚ್ಚುತ್ತದೆ. ಹೈನುಗಾರಿಕೆ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಹೆಚ್ಚಲಿದೆ. ಹೆಚ್ಚಿನ ಒಳಿತಿಗಾಗಿ ಶನೇಶ್ಚರನ ಧ್ಯಾನ ಮಾಡಿರಿ.
24 ಆಗಸ್ಟ್ 2024, 23:30 IST
ಕುಂಭ
ಬಹಳ ಶ್ರಮವಹಿಸಿ ಕೆಲಸ ಮಾಡುವಿರಿ. ವಿದೇಶದಲ್ಲಿ ಭಾಷಣ ಮಾಡುವವರಿಗೆ ಲಾಭ ಇರುತ್ತದೆ. ಸಂಸ್ಕರಿತ ರಸಾಯನಿಕಗಳನ್ನು ಮಾರಾಟ ಮಾಡುವವರಿಗೆ ಆದಾಯ ಹೆಚ್ಚು. ಸಹೋದರಿಯರಿಂದ ಈಗ ಸಹಾಯ ದೊರೆಯುವ ಸಾಧ್ಯತೆಗಳಿವೆ. ಆಸ್ತಿ ವ್ಯವಹಾರ ಮಾಡುವವರಿಗೆ ಸಾಕಷ್ಟು ಆದಾಯವಿರುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಗತಿಯ ಫಲಿತಾಂಶವಿರುತ್ತದೆ. ರಕ್ತ ಸಂಬಂಧಿ ದೋಷಗಳಿರುವವರು ಎಚ್ಚರ ವಹಿಸಿರಿ. ಪಾಲುದಾರಿಕೆ ವ್ಯವಹಾರ ಮಾಡುವವರಿಗೆ ಉತ್ತಮ ಸ್ಥಾನ ಸಿಗುವ ಸಾಧ್ಯತೆಗಳಿವೆ. ಹೆಚ್ಚಿನ ಒಳಿತಿಗಾಗಿ ದುರ್ಗಾ ಧ್ಯಾನ ಮಾಡಿರಿ.
24 ಆಗಸ್ಟ್ 2024, 23:30 IST
ಮೀನ
ಅನಾರೋಗ್ಯ ಪೀಡಿತರ ಆರೋಗ್ಯ ಈಗ ಸುಧಾರಣೆಯತ್ತ ಸಾಗುತ್ತದೆ. ವಸ್ತ್ರವಿನ್ಯಾಸ ಮಾಡುವವರಿಗೆ ಉತ್ತಮ ಆದಾಯವಿರುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ಶಾಲಾ ಕಾಲೇಜುಗಳನ್ನು ನಡೆಸುವವರಿಗೆ ಸಂಕಷ್ಟ ಎದುರಾಗಬಹುದು. ಕೃಷಿ ಆಧಾರಿತ ಕೈಗಾರಿಕೆಗಳಿಗೆ ಲಾಭವಿದೆ. ಉದ್ಯೋಗ ಸ್ಥಳದಲ್ಲಿ ಕೆಲಸದ ಒತ್ತಡ ಹೆಚ್ಚಾಗುವುದು. ವಿದೇಶಕ್ಕೆ ಆಹಾರ ಪದಾರ್ಥಗಳನ್ನು ಕಳಿಸುವವರಿಗೆ ಲಾಭವಿದೆ. ಮಕ್ಕಳಿಗಾಗಿ ಹಣ ಖರ್ಚು ಮಾಡಬೇಕಾಗಬಹುದು. ಹೆಚ್ಚಿನ ಒಳಿತಿಗಾಗಿ ಲಕ್ಷ್ಮಿ ಮತ್ತು ಗಣೇಶನನ್ನು ಆರಾಧಿಸಿರಿ.
24 ಆಗಸ್ಟ್ 2024, 23:30 IST