ಸೂರತ್: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ‘ನೀಚ’ ಪದ ಬಳಸಿರುವ ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಅವರಿಗೆ ಮೋದಿ ತಿರುಗೇಟು ನೀಡಿದ್ದಾರೆ.

ಸೂರತ್ನಲ್ಲಿ ಗುರುವಾರ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮೋದಿ, ಅಯ್ಯರ್ ಅವರ ಟೀಕೆ ಗುಜರಾತ್ ಅನ್ನು ಅವಮಾನಿಸಿದೆ ಎಂದು ಹೇಳಿದ್ದಾರೆ.

‘ಶ್ರೀಮಾನ್ ಮಣಿಶಂಕರ್ ಅಯ್ಯರ್ ಅವರು ಇಂದು ಮೋದಿ ‘ನೀಚ’(ಕೆಳ) ('neech' lower vile) ಜಾತಿಯವ ಮತ್ತು ‘ಅಷ್ಟೇ’ ಕೆಟ್ಟವ(vile) ಎಂದು ಹೇಳಿದ್ದಾರೆ. ಇದು ಗುಜರಾತ್ಗೆ ಮಾಡಿದ ಅಪಮಾನವೇ? ಎಂದಿದ್ದಾರೆ.

‘ಇದೊಂದು ಮೊಘಲ್ ಮನಸ್ಥಿತಿಯಾಗಿದ್ದು, ಗ್ರಾಮವೊಂದ ವ್ಯಕ್ತಿಯೊಬ್ಬ (ವಿನಮ್ರ ಹಿನ್ನೆಲೆಯಿಂದ ಬಂದವರು) ಉತ್ತಮ ಬಟ್ಟೆಗಳನ್ನು ಧರಿಸಿದರೆ, ಅವರಿಗೆ ಕಿರಿಕಿರಿ ಉಂಟಾಗುತ್ತದೆ’ ಎಂದು ಮೋದಿ ಪ್ರತಿಕ್ರಿಯಿಸಿದರು.

ದೆಹಲಿಯಲ್ಲಿ ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಮೋದಿ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಮತ ಕೇಳುವ ರಾಜಕೀಯ ಪಕ್ಷಗಳು, ದಶಕದ ಕಾಲ ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಯನ್ನೇ ಅಳಿಸಿ ಹಾಕಲು ಯತ್ನಿಸಿದ್ದವು ಎಂದು ವಾಗ್ದಾಳಿ ನಡೆಸಿದ್ದರು.

ಅಂಬೇಡ್ಕರ್ ಅವರ ಚಿಂತನೆಗಳನ್ನು ಹತ್ತಿಕ್ಕುವ ಕಾರ್ಯ ಹಲ ವರ್ಷ ಕಾಲ ನಡೆದಿದೆ. ಆದರೆ, ಜನರ ನೆನಪಿನಲ್ಲಿ ಉಳಿದಿರುವ ಬಾಬಾ ಸಾಹೇಬರ ಚಿಂತನೆಗಳನ್ನು ಆಳಿಸಲು ಅವರು ಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ಮಾಡಿದರು.

ಇದಾದ ಬಳಿಕ, ಮಣಿ ಶಂಕರ್ ಅಯ್ಯರ್ ಅವರು ಮೋದಿ ಅವರ ಕುರಿತಾಗಿ ಟೀಕೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.