ಸೋಮವಾರ, ನವೆಂಬರ್ 18, 2019
23 °C

‘ಬ್ರೆಕ್ಸಿಟ್‌ ವಿಳಂಬವಿಲ್ಲ, ಚುನಾವಣೆ ಬೇಕಿಲ್ಲ’

Published:
Updated:
Prajavani

ಲಂಡನ್‌ (ಪಿಟಿಐ): ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ಬ್ರೆಕ್ಸಿಟ್‌ಗೆ ಅವಧಿ ವಿಸ್ತರಣೆಗೆ ಒಲವು ತೋರಿರುವ ವಿರೋಧ ಪಕ್ಷಗಳನ್ನು ಬೆಂಬಲಿಸುವ ತಮ್ಮ ಪಕ್ಷದ ಬಂಡಾಯ ಸಂಸದರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ‘ಅದು ಮತ್ತೊಂದು ಅರ್ಥಹೀನ ವಿಳಂಬ ಎಂದು ಟೀಕಿಸಿದ್ದಾರೆ. ಸಾರ್ವತ್ರಿಕ ಚುನಾವಣೆ ಅವಶ್ಯಕತೆ ಇಲ್ಲ ಎಂದೂ ಹೇಳಿದ್ದಾರೆ.

ಯಾವುದೇ ಒಪ್ಪಂದವಿಲ್ಲದೇ ಅಕ್ಟೋಬರ್‌ 31 ರಂದು ಐರೋಪ್ಯ ಒಕ್ಕೂಟದಿಂದ ಹೊರಬರುವುದಕ್ಕೆ ಬ್ರಿಟನ್‌ ಸಂಸದರು ವಿರೋಧಿಸಿದ್ದಾರೆ. ಸರ್ಕಾರದ ವಿರುದ್ಧ ಮತ ಚಲಾಯಿಸಲು ನಿರ್ಧರಿಸಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಬಂಡಾಯ ಸಂಸದರು ಸಹ ಜಾನ್ಸನ್‌ ಅವರ ಧೋರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

‘ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರಬರಲು ಅಕ್ಟೋಬರ್‌ 31 ನಿಗದಿಯಾಗಿದ್ದು, ಬ್ರೆಕ್ಸಿಟ್‌ಗೆ ವಿಳಂಬ ಮಾಡಲು ಈಗ ಯಾವುದೇ ಸಂದರ್ಭವಿಲ್ಲ’ ಎಂದು ಜಾನ್ಸನ್‌ ಅವರು ಸೋಮವಾರ ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಬ್ರೆಕ್ಸಿಟ್‌ಗೆ ವಿಳಂಬ ಆಗುವ ನಿಟ್ಟಿನಲ್ಲಿ ಐರೋಪ್ಯ ಒಕ್ಕೂಟದಿಂದ ಹೊರಬರಲು ನೀಡಿರುವ ಗಡುವು ವಿಸ್ತರಿಸುವಂತೆ ನಾನು ಬ್ರಸೆಲ್ಸ್‌ನ್ನು ಕೋರುವುದಿಲ್ಲ. ಅ. 31ರಂದು ನಾವು ಹೊರಬರಲಿದ್ದೇವೆ. ಜನಾಭಿಪ್ರಾಯಗಳಿಗೆ ನೀಡಿದ ಭರವಸೆಗಳಿಂದ ಹಿಂದೆ ಸರಿಯುವುದಿಲ್ಲ’ ಎಂದು ಜಾನ್ಸನ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)