ಪ್ರಧಾನಿಯಾಗಿ ಇಮ್ರಾನ್‌ ಶನಿವಾರ ಪ್ರಮಾಣ ವಚನ

7
ಪಾಕ್‌ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಆಯ್ಕೆ: 176 ಮತ ಪಡೆದ ಮಾಜಿ ಕ್ರಿಕೆಟಿಗ

ಪ್ರಧಾನಿಯಾಗಿ ಇಮ್ರಾನ್‌ ಶನಿವಾರ ಪ್ರಮಾಣ ವಚನ

Published:
Updated:
Deccan Herald

ಇಸ್ಲಾಮಾಬಾದ್‌: ಕ್ರಿಕೆಟ್‌ ಜಗತ್ತಿನಲ್ಲೇ ತನ್ನದೇ ಆದ ಛಾಪು ಮೂಡಿಸಿ ರಾಜಕೀಯ ಅಂಗಳಕ್ಕೆ ಇಳಿದಿದ್ದ ಪಾಕಿಸ್ತಾನ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಅಧ್ಯಕ್ಷ ಇಮ್ರಾನ್‌ ಖಾನ್‌ ಶನಿವಾರ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜಕೀಯ ರಂಗ ಪ್ರವೇಶಿಸಿ 22 ವರ್ಷಗಳ ಸುದೀರ್ಘ ಅವಧಿ ಬಳಿಕ ಇಮ್ರಾನ್‌ ಅಧಿಕಾರದ ಗದ್ದುಗೆ ಅಲಂಕರಿಸಿದ್ದಾರೆ.

ಸರಳ ಸಮಾರಂಭದಲ್ಲಿ 65 ವರ್ಷದ ಇಮ್ರಾನ್‌ ಅವರಿಗೆ ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್‌ ಹುಸೇನ್‌ ಅವರು ಪ್ರಮಾಣ ವಚನ ಬೋಧಿಸಿದರು. ಇಮ್ರಾನ್‌ ಅವರು ದೇಶದ 22ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಸೇನಾ ಮುಖ್ಯಸ್ಥ ಜನರಲ್‌ ಖಮರ್ ಜಾವೇದ್‌ ಬಜ್ವಾ, ಭಾರತದ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಸೇರಿದಂತೆ ಹಲವು ಮಾಜಿ ಮತ್ತು ಹಾಲಿ ಕ್ರಿಕೆಟಿಗರು ವಿಶೇಷ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 1992ರಲ್ಲಿ ಪಾಕ್‌ ಕ್ರಿಕೆಟ್‌ ತಂಡದ ನಾಯಕತ್ವ ವಹಿಸಿಕೊಂಡು ವಿಶ್ವಕಪ್‌ ಜಯಗಳಿಸಿದ್ದ ಇಮ್ರಾನ್‌, ತಮ್ಮ ತಂಡದ ಮಾಜಿ ಸದಸ್ಯರನ್ನು ಸಹ ಸಮಾರಂಭಕ್ಕೆ ಆಹ್ವಾನಿಸಿದ್ದರು. ಇಮ್ರಾನ್‌ ಮೂರನೇ ಪತ್ನಿ ಬೂಷ್ರಾ ಮನೇಕಾ ಅವರು ಸಹ ಹಾಜರಿದ್ದರು.

ಇಮ್ರಾನ್‌ ಅವರು ಪ್ರಧಾನಿಯಾಗುವ ಮೂಲಕ ಪಾಕ್‌ ರಾಜಕೀಯದಲ್ಲಿ ದಶಕಗಳ ಕಾಲ ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್‌) ಮತ್ತು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಪ್ರಾಬಲ್ಯ ಅಂತ್ಯಗೊಂಡಂತಾಗಿದೆ. ಸೇನೆಯ ಆಡಳಿತ ಇಲ್ಲದೇ ಇದ್ದಾಗ ಈ ಎರಡೇ ಪಕ್ಷಗಳು ಅಧಿಕಾರ ವಹಿಸಿಕೊಳ್ಳುತ್ತಿದ್ದವು.

 ಶಹಬಾಜ್‌ ವಿರೋಧ ಪಕ್ಷದ ನಾಯಕ:  ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್‌) ಪಕ್ಷದ ಮುಖ್ಯಸ್ಥ ಶಹಬಾಜ್‌ ಷರೀಫ್‌ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕರಾಗಲಿದ್ದಾರೆ. 111 ಸಂಸದರು ಷರೀಫ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !