ಭಾನುವಾರ, ಜೂನ್ 20, 2021
28 °C

ಉತ್ತರ ಪ್ರದೇಶ: ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ಖುಲಾಸೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಲಖನೌ: ಅತ್ಯಾಚಾರ ಎಸಗುವ ಉದ್ದೇಶದಿಂದ ಕಾನೂನು ವಿದ್ಯಾರ್ಥಿನಿಯನ್ನು ಬಂಧನದಲ್ಲಿ ಇರಿಸಿದ್ದ ಆರೋಪ ಎದುರಿಸುತ್ತಿದ್ದ ಬಿಜೆಪಿ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ಅವರನ್ನು ಇಲ್ಲಿನ ವಿಶೇಷ ಕೋರ್ಟ್‌ ಶುಕ್ರವಾರ ಖುಲಾಸೆಗೊಳಿಸಿದೆ.

‘ಸ್ವಾಮಿ ಚಿನ್ಮಯಾನಂದ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ’ ಎಂದು ವಿಶೇಷ ನ್ಯಾಯಾಧೀಶ ಪಿ.ಕೆ.ರೈ ಅಭಿಪ್ರಾಯಪಟ್ಟರು.

ಅದೇ ರೀತಿ, ಸ್ವಾಮಿ ಚಿನ್ಮಯಾನಂದ ಅವರಿಂದ ಹಣ ವಸೂಲಿಗಾಗಿ ಯತ್ನಿಸಿದ ಆರೋಪದಿಂದ ಕಾನೂನು ವಿದ್ಯಾರ್ಥಿನಿ, ಇತರ ಆರೋಪಿಗಳಾದ ಸಂಜಯ್‌ ಸಿಂಗ್‌, ಡಿ.ಪಿ.ಎಸ್‌.ರಾಠೋಡ್‌, ವಿಕ್ರಮ್‌ ಸಿಂಗ್‌, ಸಚಿನ್‌ ಸಿಂಗ್‌ ಹಾಗೂ ಅಜಿತ್‌ ಸಿಂಗ್‌ ಅವರನ್ನು ಸಹ ಕೋರ್ಡ್‌ ಖುಲಾಸೆಗೊಳಿಸಿ ಆದೇಶಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು