ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕೋವಿಡ್ ಸ್ಫೋಟವಾಗಲ್ಲ: ಸಾಂಕ್ರಾಮಿಕ ರೋಗ ತಜ್ಞರು ನೀಡಿದ ಕಾರಣವಿದು...

Last Updated 30 ಡಿಸೆಂಬರ್ 2022, 11:29 IST
ಅಕ್ಷರ ಗಾತ್ರ

ಶ್ರೀನಗರ: ಕೊರೊನಾ ವೈರಸ್ ಸಂಪೂರ್ಣವಾಗಿ ನಿರ್ನಾಮವಾಗದೇ ಇರಬಹುದು. ಆದರೆ ಮುಂದಿನ ಎರಡು ತಿಂಗಳಲ್ಲಿ ಭಾರತದಲ್ಲಿ ಸೋಂಕು ಸ್ಫೋಟಗೊಳ್ಳುವ ಸಾಧ್ಯತೆ ಕಡಿಮೆ ಎಂದು ಸಾಂಕ್ರಾಮಿಕ ರೋಗ ತಜ್ಞರು ಶುಕ್ರವಾರ ಹೇಳಿದ್ದಾರೆ.

ಕಾಶ್ಮೀರದ ಸ್ಕಿಮ್ಸ್‌ (ಎಸ್‌ಕೆಐಎಂಸ್‌ ) ಆಸ್ಪತ್ರೆ ನಿರ್ದೇಶಕ ಡಾ.ಪರ್ವೈಜ್‌ ಕೌಲ್ ಅವರು, ‘ಕೋವಿಡ್‌ ಸಂಪೂರ್ಣವಾಗಿ ನಿರ್ನಾಮವಾಗುತ್ತದೆಂದು ಹೇಳಲಾಗದು. ಹೊಸ ರೂಪಾಂತರಿಗಳು ಸೃಷ್ಟಿಯಾದರೆ ಆಗಾಗ ಸೋಂಕು ಸ್ಫೋಟಗೊಳ್ಳಬಹುದು. ಆದರೆ ಭಾರತದಲ್ಲಿ ಮುಂದಿನ ಎರಡು ಅಥವಾ ಮೂರು ತಿಂಗಳಲ್ಲಿ ಸೋಂಕು ಸ್ಫೋಟಗೊಳ್ಳುವ ಸಾಧ್ಯತೆ ಕಡಿಮೆ’ ಎಂದು ಹೇಳಿದ್ದಾರೆ.

‘ದೇಶದ ಬಹುತೇಕ ಜನರಲ್ಲಿ ಈಗಾಗಲೇ ಹೈಬ್ರಿಡ್‌ ರೋಗನಿರೋಧಕ ಶಕ್ತಿ ಸೃಷ್ಟಿಯಾಗಿದೆ. ಆದಾಗ್ಯೂ ಹೆಚ್ಚಿನ ಅಪಾಯ ಇರುವ ಜನರು ಬೂಸ್ಟರ್‌ ಡೋಸ್‌ ಲಸಿಕೆ ಪಡೆಯುವುದು ಸೂಕ್ತ’ ಎಂದು ಸಲಹೆ ನೀಡಿದ್ದಾರೆ.

ಓಮೈಕ್ರಾನ್‌ ರೂಪಾಂತರಿ ಬಿಎಫ್‌. 7, ಚೀನಾ ಸೇರಿ ಹಲವು ದೇಶಗಳಲ್ಲಿ ಕೊರೊನಾ ಪ್ರಕರಣಗಳ ಏರಿಕೆಗೆ ಕಾರಣವಾಗಿರುವ ಮಧ್ಯೆಯೇ ಕೌಲ್‌ ಹೀಗೆ ಹೇಳಿದ್ದಾರೆ.

ಇದಕ್ಕೂ ಮುನ್ನ ಕೌಲ್‌, ‘ವಿಶ್ವಾಸಾರ್ಹ ಏಜೆನ್ಸಿಗಳ(ವಾಷಿಂಗ್ಟನ್‌ ವಿಶ್ವವಿದ್ಯಾಲಯಗಳ) ದತ್ತಾಂಶವು, ಜಮ್ಮು–ಕಾಶ್ಮೀರದಲ್ಲಿ ಮುಂಬರುವ ವಾರಗಳಲ್ಲಿ ಕೋವಿಡ್‌ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದಿದೆ. ಆದರೆ, ಇದು ತಪ್ಪಾಗಿಯೂ ಇರಬಹುದು. ಜಾಗ್ರತೆಯಿಂದ ಇರಿ, ಲಸಿಕೆ ಪಡೆಯದವರು ಲಸಿಕೆ ಪಡೆಯಿರಿ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT