ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು: ಸಭ್ಯರ ಸೋಗಿನಲ್ಲಿದ್ದ ಇಬ್ಬರು ಭಯೋತ್ಪಾದಕರ ಬಂಧನ

Last Updated 15 ಸೆಪ್ಟೆಂಬರ್ 2022, 10:48 IST
ಅಕ್ಷರ ಗಾತ್ರ

ಜಮ್ಮು:ಸಭ್ಯರ ಸೋಗಿನಲ್ಲಿದ್ದ ಇಬ್ಬರು ಭಯೋತ್ಪಾದಕರನ್ನು (ಹೈಬ್ರಿಡ್ ಟೆರರಿಸ್ಟ್) ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಬಂಧಿಸಿರುವ ಭದ್ರತಾ ಪಡೆಗಳು, ಸಂಭವನೀಯ ದಾಳಿಯ ಕೃತ್ಯವನ್ನು ವಿಫಲಗೊಳಿಸಿದ್ದಾರೆ.

ಜಾಫರ್‌ ಇಕ್ಬಾಲ್ ಮತ್ತು ಬಲ್‌ ಅಂಗ್ರಲಾ ಬಂಧಿತರು. ಜಾಫರ್ ಎಂಬಾತ, ಈ ಹಿಂದೆ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದ ಲಷ್ಕರ್ ಎ ತೊಯಬಾ ಸಂಘಟನೆಯ ಉಗ್ರ ಮೊಹಮ್ಮದ್‌ ಇಶಾಕ್‌ನ ಸಹೋದರ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಅಡಗುತಾಣದಲ್ಲಿ ಇರಿಸಿದ್ದ ವಿವಿಧ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಹಾಗೂ ₹1.81 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಯೋಜಿತ ದಾಳಿಯಲ್ಲಿ ಭಾಗಿಯಾಗಿ, ಸುಳಿವು ಬಿಟ್ಟುಕೊಡದೇ ಸಭ್ಯರ ಸೋಗಿನಲ್ಲಿ ಸಮಾಜದಲ್ಲಿ ಬದುಕುವುದು ಇವರ ಕಾರ್ಯಶೈಲಿ.

ಜಾಫರ್‌ ಇಕ್ಬಾಲ್‌ ಎಂಬಾತ ಪಾಕಿಸ್ತಾನದ ಸಂಘಟನೆಯ ಜೊತೆಗೆ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿ ಆಧರಿಸಿಮಹೋರ್‌ ಠಾಣೆ ಪೊಲೀಸರು, ಭದ್ರತಾ ಸಿಬ್ಬಂದಿಯ ಜೊತೆಗೂಡಿ ಜಂಟಿ ಕಾರ್ಯಾಚರಣೆ ನಡೆಸಿದ್ದರು.

ಪ್ಲಾಸು ನಲ್ಲಾದಲ್ಲಿ ಇಕ್ಬಾಲ್‌ನನ್ನು ಬಂಧಿಸಿಸಲಾಯಿತು. ಆತ ನೀಡಿದ ಮಾಹಿತಿ ಆಧರಿಸಿ ಎರಡು ಪಿಸ್ತೂಲು, ನಾಲ್ಕು ಮ್ಯಾಗಜೀನ್, 22 ಶಸ್ತ್ರಾಸ್ತ್ರಗಳು, ಒಂದು ಗ್ರೆನೈಡ್ ಅನ್ನೂ ಜಪ್ತಿ ಮಾಡಲಾಯಿತು ಎಂದು ರಿಯಾಸಿ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಗುಪ್ತಾ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT