ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗೆ ರೈತರ ಬಗ್ಗೆ ಕಾಳಜಿ ಇದ್ದರೆ ಲೋಕಸಭೆ ಕಲಾಪ ನಡೆಯಲು ಬಿಡಿ: ತೋಮರ್

Last Updated 27 ಜುಲೈ 2021, 8:16 IST
ಅಕ್ಷರ ಗಾತ್ರ

ನವದೆಹಲಿ: ರೈತರ ಬಗ್ಗೆ ವಿಪಕ್ಷಗಳಿಗೆ ನಿಜವಾಗಿಯೂ ಕಾಳಜಿ ಇದ್ದರೆ ಲೋಕಸಭೆ ಕಲಾಪ ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡಲಿ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಪೆಗಾಸಸ್ ಗೂಢಚರ್ಯೆ ಆರೋಪಗಳು ಮತ್ತು ಹೊಸ ಕೃಷಿ ಕಾನೂನುಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿರುವ ಪ್ರತಿಪಕ್ಷದ ಸದಸ್ಯರು ಸರ್ಕಾರದ ಘೋಷಣೆ ಮುಂದುವರಿಸಿದ್ದಾರೆ.

ಈ ಕುರಿತಂತೆ, ಪ್ರಶ್ನಾವಳಿ ಅವಧಿಯಲ್ಲಿ ರೈತರಿಗೆ ವಿಮಾ ಯೋಜನೆಗೆ ಸಂಬಂಧಿಸಿದ ಪೂರಕ ಪ್ರಶ್ನೆಗೆ ಉತ್ತರಿಸುವಾಗ ಅವರು ಈ ಹೇಳಿಕೆ ನೀಡಿದ್ದಾರೆ.

ರೈತರಿಗೆ ಸಂಬಂಧಿಸಿದ ಸುಮಾರು 15 ಪ್ರಶ್ನೆಗಳಿವೆ. ಪ್ರತಿಪಕ್ಷದ ಸದಸ್ಯರು ನಿಜವಾಗಿಯೂ ರೈತರ ಬಗ್ಗೆ ಕಾಳಜಿ ವಹಿಸುತ್ತಿದ್ದರೆ, ಸರ್ಕಾರ ಹೇಳುವುದನ್ನು ಅವರು ಕೇಳಬೇಕು ಎಂದು ತೋಮರ್ ಹೇಳಿದರು.

‘ಈ ರೀತಿಯ ಕಲಾಪಕ್ಕೆ ಅಡ್ಡಿ ಮಾಡುವುದು ಸದನದ ಘನತೆಯನ್ನು ಕಡಿಮೆ ಮಾಡುತ್ತದೆ’ ಎಂದು ಅವರು ಹೇಳಿದರು.

ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಮತ್ತು ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.

ಈ ಕಾನೂನುಗಳು ಕನಿಷ್ಠ ಬೆಂಬಲ ಬೆಲೆಯ ಸುರಕ್ಷತಾ ಜಾಲವನ್ನು ತೆಗೆದುಹಾಕುತ್ತವೆ ಮತ್ತು ದೊಡ್ಡ ಸಂಸ್ಥೆಗಳ ಅಡಿಯಾಳಾಗಿ ನಾವು ಬದುಕುವಂತೆ ಮಾಡುತ್ತವೆ ಎಂದು ಪ್ರತಿಭಟನಾನಿರತ ರೈತರು ಹೇಳುತ್ತಾರೆ. ಆದರೆ, ಈ ಕಾನೂನುಗಳು ರೈತ ಪರ ಎಂದು ಸರ್ಕಾರ ಸಮರ್ಥಿಸುತ್ತಿದೆ.

ಇದೇವೇಳೆ, ಪೆಗಾಸಸ್ ಗೂಢಚರ್ಯೆ ಆರೋಪಗಳ ಬಗ್ಗೆಯೂ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT