ಸಿಖ್ಖರ ಕೊಡುಗೆಗಳಿಗೆ ಭಾರತ ಕೃತಜ್ಞ: ಮೋದಿ

ನವದೆಹಲಿ (ಪಿಟಿಐ): ‘ಸಿಖ್ಖರ ಕೊಡುಗೆಗಳಿಗೆ ಭಾರತ ಕೃತಜ್ಞವಾಗಿರುತ್ತದೆ. ಭಾರತ ಹಾಗೂ ಇತರ ದೇಶಗಳ ನಡುವಿನ ಸಂಬಂಧಗಳು ರೂಪುಗೊಳ್ಳುವಲ್ಲಿ ಸಿಖ್ ಸಮುದಾಯ ಬಲವಾದ ಕೊಂಡಿಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶುಕ್ರವಾರ ತಮ್ಮ ನಿವಾಸದಲ್ಲಿ ಸಿಖ್ ಸಮಾಜದ ವಿವಿಧ ಕ್ಷೇತ್ರಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಸ್ವಾತಂತ್ರ್ರ್ಯಾನಂತರದಲ್ಲಿ ಸಿಖ್ಖರು ನೀಡಿದ ಕೊಡುಗೆಗಳಿಗೆ ದೇಶ ಕೃತಜ್ಞವಾಗಿದೆ. ಸಿಖ್ ಸಂಪ್ರದಾಯವು ನಿಜಾರ್ಥದಲ್ಲೂ ಒಂದು ಭಾರತ, ಶ್ರೇಷ್ಠ ಭಾರತದ ಜೀವಂತ ಸಂಪ್ರದಾಯವಾಗಿದೆ’ ಎಂದರು.
‘ವಿದೇಶಕ್ಕೆ ವಲಸೆ ಹೋಗಿರುವ ಎಲ್ಲ ಸಿಖ್ ಸಮುದಾಯದವರು ದೇಶದ ಬಲವಾದ ಧ್ವನಿಯಾಗಿದ್ದಾರೆ. ಅವರೆಲ್ಲರೂ ಭಾರತ ಮಾತೆಯ ಹೆಮ್ಮೆಯ ಗುರುತನ್ನು ಪ್ರತಿನಿಧಿಸುತ್ತಾರೆ. ನಾವು ಎಲ್ಲೇ ಇದ್ದರೂ ಭಾರತ ಮೊದಲು ಎಂಬುದು ನಮ್ಮ ಪ್ರಥಮ ನಂಬಿಕೆಯಾಗಬೇಕು’ ಎಂದು ಮೋದಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.