ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ನಿಂದ 70 ವಿಮಾನ ಖರೀದಿಸಲಿರುವ ವಾಯುಪಡೆ

Last Updated 20 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಾಯುಪಡೆಯು ಬೆಂಗಳೂರಿನ ಎಚ್‌ಎಎಲ್‌ ಸಂಸ್ಥೆಯಿಂದ ₹ 6800 ಕೋಟಿ ಮೌಲ್ಯದ 70 ಎಚ್‌ಟಿಟಿ–40 ತರಬೇತಿ ವಿಮಾನಗಳನ್ನು ಖರೀದಿಸಲಿದೆ ಎಂದು ರಕ್ಷಣಾ ಸಚಿವಾಲಯ ಗುರುವಾರ ಪ್ರಕಟಿಸಿದೆ.

ಇಲ್ಲಿ ನಡೆಯುತ್ತಿರುವ ಮೂರು ದಿನಗಳ ರಕ್ಷಣಾ ಕ್ಷೇತ್ರದ ಪ್ರದರ್ಶನದ ಸಮಾರೋಪ ದಿನದಂದು ಈ ಪ್ರಕಟಣೆ ಹೊರಬಿದ್ದಿದೆ. ಆದರೆ, ಸಚಿವಾಲಯ ಈ ಕುರಿತ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

2020ರ ಆಗಸ್ಟ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಖರೀದಿ ಮಂಡಳಿಯು, ದೇಶೀಯವಾಗಿ ಅಭಿವೃದ್ಧಿ ಪಡಿಸಿದ ವಿಮಾನಗಳನ್ನು ₹ 7,600 ಕೋಟಿ ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಿತ್ತು. ಎಚ್‌ಎಎಲ್‌ ಮೊದಲಿಗೆ 70 ವಿಮಾನಗಳನ್ನು ಪೂರೈಸಲಿದೆ. ಈ ಎಚ್‌ಟಿಟಿ–40 ಇವುಗಳ ಕಾರ್ಯಾಚರಣೆ ಆರಂಭವಾದ ಬಳಿಕ ಇನ್ನೂ 36 ವಿಮಾನಗಳನ್ನು ಪೂರೈಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT