ಶನಿವಾರ, ಅಕ್ಟೋಬರ್ 23, 2021
20 °C

ಅತ್ಯುತ್ತಮ ರುಚಿ; ಜಮ್ಮು ಬಿಯರ್‌ಗಳಿಗೆ ನಾಲ್ಕು ಪದಕ!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ಜಮ್ಮು ಮೂಲದ ದೇವನ್ಸ್‌ ಮಾಡರ್ನ್‌ ಬ್ರೀವೆರೀಸ್‌ ಲಿಮಿಟೆಡ್‌ನ ಎಲ್ಲಾ ನಾಲ್ಕು ಬಿಯರ್‌ ಬ್ರ್ಯಾಂಡ್‌ಗಳಿಗೆ 'ಸ್ಪಿರಿಟ್ಸ್‌ ಸೆಲೆಕ್ಷನ್‌ ಅವಾರ್ಡ್ಸ್‌ 2021' ಸಂದಿರುವುದಾಗಿ ಕಂಪನಿಯ ವಕ್ತಾರರು ಮಂಗಳವಾರ ಹೇಳಿದ್ದಾರೆ.

ಭಾನುವಾರ ದೆಹಲಿಯಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ 'ಬಿಯರ್‌' ಪ್ರಶಸ್ತಿಗಳು ಘೋಷಣೆಯಾಗಿವೆ. 2020ರಲ್ಲೂ ಜಮ್ಮುವಿನ ಈ ಕಂಪನಿಯು ಪ್ರಶಸ್ತಿ ಗಳಿಸಿತ್ತು.

ಬಿಯರ್‌ ರುಚಿ ನೋಡುವ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡುವ ವಿಧಾನ ಅನುಸರಿಸಲಾಗಿದೆ. ಗಾಡ್‌ಫಾದರ್ ಲೆಜೆಂಡರಿ, ಕಾಟ್ಸ್‌ಬರ್ಗ್‌ ಬಿಲ್ಸ್‌, ಸಿಕ್ಸ್‌ ಫೀಲ್ಡ್ಸ್‌ ಬ್ಲಾಂಚ್ ಹಾಗೂ ಸಿಕ್ಸ್‌ ಫೀಲ್ಡ್ಸ್‌ ಕಲ್ಟ್‌ ಹೆಸರಿನ ಬಿಯರ್‌ಗಳಿಗೆ ಚಿನ್ನದ ಪದಕಗಳು ಮತ್ತು ಬೆಳ್ಳಿಯ ಪದಕ ಸಂದಿವೆ.

ಬಿಯರ್‌ನ ಹೆಸರು, ಕಂಪನಿಯ ವಿವರ ನೋಡದೆಯೇ ರುಚಿಯ ಮೂಲಕ ಮಾತ್ರವೇ ಅತ್ಯುತ್ತಮ ಡ್ರಿಂಕ್‌ ಅಥವಾ ಬಿಯರ್‌ ಆಯ್ಕೆ ಮಾಡುವ ಪದ್ಧತಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು