ಶನಿವಾರ, ಮಾರ್ಚ್ 25, 2023
28 °C
ಮುಂಬೈನಲ್ಲಿ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನ

ರಾಜ್ಯಪಾಲ ಕೋಶಿಯಾರಿ ಪದಚ್ಯುತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಪದಚ್ಯುತಿ ಹಾಗೂ ಕರ್ನಾಟಕ ಜತೆಗಿನ ಗಡಿ ವಿವಾದ ಸೇರಿದಂತೆ ಅನೇಕ ವಿಷಯಗಳಲ್ಲಿ ಏಕನಾಥ್ ಶಿಂದೆ-ದೇವೇಂದ್ರ ಫಡಣ ವೀಸ್ ಸರ್ಕಾರದ ನಿಲುವು ಖಂಡಿಸಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ ಶನಿವಾರ ಶಕ್ತಿ ಪ್ರದರ್ಶನ ನಡೆಸಿತು.

ಭಾಯ್ಖಳಾ ಜೆಜೆ ಆಸ್ಪತ್ರೆಯಿಂದ ಆರಂಭಗೊಂಡ ಮೆರವಣಿಗೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ನಲ್ಲಿ ಅಂತ್ಯಗೊಂಡಿತು. ಸುಮಾರು ಮೂರು ಕಿ.ಮೀ.ವರೆಗೂ ಮೆರವಣಿಗೆ ಸಾಗಿತು.

ಕೋಶಿಯಾರಿ ಮತ್ತು ಮೂವರು ಸಚಿವರಾದ ಚಂದ್ರಕಾಂತ್ ಪಾಟೀಲ್, ಅಬ್ದುಲ್ ಸತ್ತಾರ್ ಮತ್ತು ಮಂಗಳಪ್ರಭಾತ್ ಲೋಧಾ ಅವರು ಇತ್ತೀಚೆಗೆ ಪ್ರಮುಖ ನಾಯಕರನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ನಾಯಕರು ಆರೋಪಿಸಿದರು.

‘ಶಿವಾಜಿ ಅವರು ಹಳೆ ಕಾಲದ ಐಕಾನ್‌’ ಎಂದು ಹೇಳಿಕೆ ನೀಡಿರುವ ರಾಜ್ಯಪಾಲ ಕೋಶಿಯಾರಿ ಅವರನ್ನು ಕೇಂದ್ರವು ವಾಪಸ್‌ ಕರೆಸಿಕೊಳ್ಳಬೇಕು’ ಎಂದು ಪವಾರ್ ಆಗ್ರಹಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು