ವಿದ್ಯುತ್ ಕಂಪನಿಗಳ ಬಾಕಿ ಮೊತ್ತ ಪಾವತಿಸುವಂತೆ ರಾಜ್ಯಗಳಿಗೆ ಪ್ರಧಾನಿ ಮೋದಿ ಸೂಚನೆ

ನವದೆಹಲಿ: ವಿದ್ಯುತ್ ಕಂಪನಿಗಳಲ್ಲಿ ರಾಜ್ಯಗಳು ಬಾಕಿ ಇರಿಸಿಕೊಂಡಿರುವ ಅಂದಾಜು ₹2.5 ಲಕ್ಷ ಕೋಟಿ ಮೊತ್ತವನ್ನು ಪಾವತಿಸುವಂತೆ ರಾಜ್ಯ ಸರ್ಕಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸೂಚಿಸಿದ್ದಾರೆ.
ವಿದ್ಯುತ್ ಕಂಪನಿಗಳ ಸಬ್ಸಿಡಿ ಮೊತ್ತ ₹75,000 ಕೋಟಿಯನ್ನು ರಾಜ್ಯ ಸರ್ಕಾರಗಳು ಇನ್ನೂ ಚುಕ್ತಾ ಮಾಡದಿರುವ ಬಗ್ಗೆ ಪ್ರಧಾನಿ ವಿಷಾದ ವ್ಯಕ್ತಪಡಿಸಿದ್ದಾರೆ.
‘ಉಜ್ವಲ್ ಭಾರತ್ ಉಜ್ವಲ್ ಭವಿಷ್ಯ – ಪವರ್ @2047’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಲ್ಲಿ ತೊಡಗಿಕೊಂಡಿರುವ ಕಂಪನಿಗಳ ₹2.5 ಲಕ್ಷ ಕೋಟಿ ಮೊತ್ತ ಪಾವತಿಯಾಗಬೇಕಿದೆ’ ಎಂದು ಹೇಳಿದ್ದಾರೆ.
ರಾಜಸ್ಥಾನಿ, ಗುಜರಾತಿಗಳಿಲ್ಲವಾದರೆ ಮುಂಬೈನಲ್ಲಿ ಹಣವೇ ಇರದು: ರಾಜ್ಯಪಾಲ ಕೋಶಿಯಾರಿ
ವಿದ್ಯುತ್ ಕೊರತೆ ಎದುರಿಸುತ್ತಿದ್ದ ದಿನಗಳನ್ನು ನೆನಪಿಸಿ ಮಾತನಾಡಿದ ಅವರು, ಕಳೆದ 8 ವರ್ಷಗಳಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ 1,70,000 ಮೆಗಾ ವಾಟ್‌ನಷ್ಟು ಹೆಚ್ಚಿಸಲಾಗಿದೆ. ದೇಶದ ಅಭಿವೃದ್ಧಿಗೆ ವಿದ್ಯುತ್ ಅಗತ್ಯ. ದೇಶಕ್ಕೆ ‘ರಾಷ್ಟ್ರನೀತಿ’ ಬೇಕಿದೆಯೇ ವಿನಹ ‘ರಾಜನೀತಿ’ಯಲ್ಲ ಎಂದು ಹೇಳಿದ್ದಾರೆ.
ಸೌರ ವಿದ್ಯುತ್ ಸಾಮರ್ಥ್ಯ ವೃದ್ಧಿಸಿಕೊಂಡಿರುವ ದೇಶಗಳ ಪೈಕಿ ಭಾರತವು ಅಗ್ರ 4–5ನೇ ಸ್ಥಾನದಲ್ಲಿದೆ. ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿದ ದೇಶಗಳ ಪೈಕಿ ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಅವರು ರಾಜಸ್ಥಾನದ 735 ಮೆಗಾ ವಾಟ್ ಸಾಮರ್ಥ್ಯದ ನೋಖ್ ಸೋಲಾರ್ ಯೋಜನೆಗೆ, ಲೇಹ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ‘ಗ್ರೀನ್ ಹೈಡ್ರೋಜನ್ ಮೊಬಿಲಿಟಿ ಪ್ರಾಜೆಕ್ಟ್’ಗೆ ಹಾಗೂ ಗುಜರಾತ್‌ನ ‘ಕವಾಸ್ ಗ್ರೀನ್ ಹೈಡ್ರೋಜನ್ ಬ್ಲೆಂಡಿಂಗ್ ವಿದ್ ನ್ಯಾಚುರಲ್ ಗ್ಯಾಸ್’ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಸಿಎಂ ಕಣ್ಣೀರು ಹಾಕುತ್ತಿದ್ದಾರೆ: ರೇಣುಕಾಚಾರ್ಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.