ಶನಿವಾರ, ಜನವರಿ 28, 2023
18 °C

Video| 74ನೇ ಗಣರಾಜ್ಯೋತ್ಸವ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಶುಕ್ರವಾರ ದೇಶ 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಎನ್‌ಇಪಿ, ಭಾರತಕ್ಕೆ ಜಿ–20 ಅಧ್ಯಕ್ಷ ಸ್ಥಾನ, ಜಾಗತಿಕ ತಾಪಮಾನ ಏರಿಕೆಯ ಕಳವಳ ಮುಂತಾದ ವಿಷಯಗಳನ್ನು  ಪ್ರಸ್ತಾಪಿಸಿದ್ದಾರೆ.

ನಾವು 74ನೇ ಗಣರಾಜ್ಯೋತ್ಸವವನ್ನು ಆಚರಿಸುವಾಗ, ನಾವು ಒಟ್ಟಾಗಿ ಮಾಡಿದ ಸಾಧನೆಯನ್ನು ಸಂಭ್ರಮಿಸುತ್ತಿದ್ದೇವೆ  ಜಾಗತಿಕ ಮಟ್ಟದಲ್ಲಿ ಅನಕ್ಷರಸ್ಥ, ಬಡ ರಾಷ್ಟ್ರ ಎಂಬ ಹಣಪಟ್ಟಿ  ತೊಡೆದು ಹಾಕಿ ಆತ್ಮವಿಶ್ವಾಸದ ದೇಶವಾಗಿ ಭಾರತ ಬೆಳೆದಿದೆ ಎಂದು ಅವರು ಹೇಳಿದ್ದಾರೆ.
 
ದ್ರೌಪದಿ ಮುರ್ಮು ಭಾಷಣದ ಮುಖ್ಯಾಂಶಗಳು..

* ಸಂವಿಧಾನ ರಚಿಸಿದರ ಸಾಮೂಹಿಕ ಜ್ಞಾನದ ಮಾರ್ಗದರ್ಶನ ಇಲ್ಲದೇ ಹೋಗಿದ್ದರೆ ಭಾರತದ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ.

* ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳಲು ನಾವು ಆಧುನಿಕ ದೃಷ್ಟಿಕೋನದಲ್ಲಿ ಪ್ರಾಚೀನ ಸಂಪ್ರದಾಯಗಳತ್ತ ಗಮನಹರಿಸಬೇಕು ಎಂದು ಹೇಳಿದರು.

* ನಮ್ಮ ಮೂಲಭೂತ ಆದ್ಯತೆಗಳನ್ನು ನಾವು ಮತ್ತೊಮ್ಮೆ ಪರಿಶೀಲಿಸಬೇಕಿದೆ. ಸಾಂಪ್ರದಾಯಿಕ ಜೀವನ ಮೌಲ್ಯಗಳ ವೈಜ್ಞಾನಿಕ ಆಯಾಮಗಳನ್ನು ಅರ್ಥಮಾಡಿಕೊಳ್ಳಬೇಕಿದೆ.

 * ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತದ ಆರ್ಥಿಕತೆಯೂ ಒಂದಾಗಿದೆ.

* ಸರ್ಕಾರದ ಸಮಯ ಪ್ರಜ್ಞೆ ಮತ್ತು ಕ್ರಿಯಾಶೀಲತೆಯಿಂದ ದೇಶ ಯಶಸ್ಸು ಕಂಡಿದೆ. ಆತ್ಮ ನಿರ್ಭರ ಭಾರತ ಉಪಕ್ರಮ ಪ್ರಶಂಸನಾರ್ಹ. 

* ಭಾರತವು ವಿಶ್ವದ ಐದನೇ ದೊಡ್ಡ ಆರ್ಥಿಕತೆ ಹೊಂದಿದೆ. ಈ ಸಾಧನೆಯನ್ನು ಜಾಗತಿಕ ಆರ್ಥಿಕತೆ ಅನಿಶ್ಚಿತತೆ ನಡುವೆ ಸಾಧಿಸಲಾಗಿದೆ..

* ದುರ್ಬಲ ವರ್ಗದವರ ತೊಡಕುಗಳನ್ನು ನಿವಾರಿಸುವುದು ಮಾತ್ರವಲ್ಲದೆ ಅವರ ಏಳಿಗೆಗೆ ನೆರವಾಗುವುದು ನಮ್ಮ ಕರ್ತವ್ಯ.

*  ಪರಿಸರವನ್ನು ರಕ್ಷಿಸುವುದರಿಂದ ಹಿಡಿದು ಸಮಾಜವನ್ನು ಒಗ್ಗೂಡಿಸುವವರೆಗೆ ಬುಡಕಟ್ಟು ಸಮುದಾಯಗಳು ಅನೇಕ ಕ್ಷೇತ್ರಗಳಲ್ಲಿ ನಮಗೆ ಮಾದರಿ.

* ಎನ್‌ಇಪಿ ನಮ್ಮ ನಾಗರಿಕತೆಗಳ ಪಾಠಗಳನ್ನು ಸಮಕಾಲೀನ ಜೀವನಕ್ಕೆ ಪ್ರಸ್ತುತವಾಗಿಸುತ್ತದೆ. 21 ನೇ ಶತಮಾನದ ಸವಾಲುಗಳನ್ನು ಎದುರಿಸಲು ಮಕ್ಕಳನ್ನು ಸಿದ್ಧಪಡಿಸುತ್ತದೆ.

* ಉತ್ತಮ ಜಗತ್ತನ್ನು ನಿರ್ಮಿಸುವಲ್ಲಿ ಕೊಡುಗೆ ನೀಡಲು ಜಿ–20 ಅಧ್ಯಕ್ಷ ಸ್ಥಾನವು ಭಾರತಕ್ಕೆ ನೆರವಾಯಿತು.

* ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯು ತುರ್ತಾಗಿ ಪರಿಹರಿಸಬೇಕಾದ ಸವಾಲುಗಳಾಗಿವೆ.

* ನಮ್ಮ ಮಕ್ಕಳು ಈ ಭೂಮಿಯ ಮೇಲೆ ಸುಖಮಯ ಜೀವನ ನಡೆಸಬೇಕೆಂದರೆ ನಾವು ನಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು.

* ನಮ್ಮ ಗಡಿಯನ್ನು ಕಾಪಾಡುವ ಮತ್ತು ಯಾವುದೇ ತ್ಯಾಗಕ್ಕೆ ಸದಾ ಸಿದ್ಧರಾಗಿರುವ ಕೆಚ್ಚೆದೆಯ ಸೈನಿಕರನ್ನು ನಾನು ವಿಶೇಷವಾಗಿ ಪ್ರಶಂಸಿಸುತ್ತೇನೆ.

* ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿರುವ ಪ್ರತಿಯೊಬ್ಬ ನಾಗರಿಕರನ್ನು ನಾನು ಪ್ರಶಂಸಿಸುತ್ತೇನೆ.

* ದೇಶದ ಎಲ್ಲ ಪ್ರೀತಿಯ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಆಶೀರ್ವದಿಸುತ್ತೇನೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು