ಹೈದರಾಬಾದ್ ನಿಜಾಮ ವಂಶಸ್ಥ ಮುಕರ‍್ರಮ್ ಜಾಹ್ ಇಸ್ತಾಂಬುಲ್‌ನಲ್ಲಿ ನಿಧನ

ಹೈದರಾಬಾದ್: 8ನೇ ನಿಜಾಮ ಎಂದೇ ಕರೆಯಲಾಗುತ್ತಿದ್ದ, ಹೈದರಾಬಾದ್‌ನ ನಿಜಾಮ ವಂಶಸ್ಥ ಮುಕರ‍್ರಮ್ ಜಾಹ್ (89) ಅವರು ಟರ್ಕಿಯೆದ ಇಸ್ತಾಂಬುಲ್‌ನಲ್ಲಿ ಶನಿವಾರ ನಿಧನರಾದರು.
‘ನವಾಬ್ ಮೀರ್ ಬರ್ಕತ್ ಅಲಿ ಖಾನ್ ವಾಲಾಶನ್ ಮುಕರ‍್ರಮ್ ಜಾಹ್ ಬಹದೂರ್ ಅವರು ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ’ ಎಂದು ಅವರ ಕಚೇರಿಯು ಭಾನುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
‘ಅವರ ಇಚ್ಛೆಯಂತೆ, ಮುಕರ‍್ರಮ್ ಅವರ ಅಂತ್ಯಕ್ರಿಯೆಯನ್ನು ತಾಯ್ನಾಡಿನಲ್ಲಿಯೇ ನೆರವೇರಿಸಲಾಗುತ್ತದೆ. ಅವರ ಪಾರ್ಥಿವ ಶರೀರದೊಂದಿಗೆ ಅವರ ಮಕ್ಕಳು ಜ.17ರಂದು ಹೈದರಾಬಾದ್‌ಗೆ ಪ್ರಯಾಣಿಸುವರು’ ಎಂದೂ ಪ್ರಕಟಣೆ ತಿಳಿಸಿದೆ.
‘ಪಾರ್ಥಿವ ಶರೀರವನ್ನು ಹೈದರಾಬಾದ್‌ನಲ್ಲಿರುವ ಚೌಮೊಹಲ್ಲಾ ಅರಮನೆಗೆ ತೆಗೆದುಕೊಂಡು ಹೋಗಿ, ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗುವುದು. ನಂತರ, ಅವರ ಪೂರ್ವಜರ (ಆಸಫ್ ಜಾಹಿ ರಾಜವಂಶ) ಸಮಾಧಿಗಳು ಇರುವ ಸ್ಥಳದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗುವುದು’ ಎಂದು ತಿಳಿಸಿದೆ.
1933ರಲ್ಲಿ ಜನಿಸಿದ್ದ ಅವರು, ನಂತರ ಟರ್ಕಿಯೆಗೆ ವಲಸೆ ಹೋಗಿ, ನಂತರ ಅಲ್ಲಿಯೇ ವಾಸಿಸುತ್ತಿದ್ದರು. ಮೀರ್ ಹಿಮಾಯತ್ ಅಲಿ ಖಾನ್ (ಅಜಂ ಜಾಹ್ ಬಹದೂರ್ ಎಂದೂ ಕರೆಯಲಾಗುತ್ತಿತ್ತು), ಮುಕರ‍್ರಮ್ ಅವರ ತಂದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.