ಉತ್ತರಪ್ರದೇಶ | ವರದಕ್ಷಿಣೆ ಹಿಂದಿರುಗಿಸಿದ ಮದುಮಗ: ಗ್ರಾಮಸ್ಥರ ಪ್ರಶಂಸೆ

ಮುಜಾಫರ್‌ನಗರ(ಉತ್ತರಪ್ರದೇಶ): ಇಲ್ಲಿನ ಲಖನ್ ಗ್ರಾಮದಲ್ಲಿ ಮದುವೆ ಗಂಡು ತನಗೆ ವರದಕ್ಷಿಣೆಯಾಗಿ ಲಭಿಸಿದ್ದ ₹11ಲಕ್ಷ ನಗದು ಹಾಗೂ ಚಿನ್ನಾಭರಣವನ್ನು ವಧುವಿನ ಪೋಷಕರಿಗೆ ಹಿಂದಿರುಗಿಸುವ ಮೂಲಕ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮದುಮಗ ಸೌರಭ್ ಚೌಹಾಣ್ ಅವರು ವರದಕ್ಷಿಣೆಗೆ ಬದಲಾಗಿ ₹1 ಅನ್ನು ‘ಶಗುನ್’ ಆಗಿ ಪಡೆದುಕೊಂಡಿದ್ದಾರೆ.
ಸೌರಭ್ ಅವರು ಕಂದಾಯ ಅಧಿಕಾರಿಯಾಗಿದ್ದಾರೆ (ಲೋಕಪಾಲ್). ವಧು ಪ್ರಿನ್ಸ್ ಅವರು ನಿವೃತ್ತ ಯೋಧರ ಪುತ್ರಿಯಾಗಿದ್ದಾರೆ.
‘ಮದುಮಗನ ನಡೆ ಎಲ್ಲರಿಗೂ ಮಾದರಿಯಾಗಲಿ’ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.