ಶುಕ್ರವಾರ, ಮಾರ್ಚ್ 24, 2023
23 °C
ತುಕಾರಾಂ ಅವರ ಶಿಲಾ ದೇಗುಲ ಉದ್ಘಾಟನೆ ವೇಳೆ ಮೋದಿ

ಜೈಲಿನಲ್ಲಿದ್ದಾಗ ತುಕಾರಾಂ ಅವರ ಅಭಂಗ ಹಾಡುತ್ತಿದ್ದ ಸಾವರ್ಕರ್: ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದೇಹೂ: ಹಿಂದುತ್ವದ ಪ್ರತಿಪಾದಕ ವೀರ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ವೇಳೆ ಸಂತ ತುಕಾರಾಂ ಅವರ ಅಭಂಗಗಳನ್ನು ಹಾಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 

ದೇಹೂನಲ್ಲಿ ಮಂಗಳವಾರ 17ನೇ ಶತಮಾನದ ಸಂತ ತುಕಾರಾಂ ಅವರ ಶಿಲಾ ದೇವಸ್ಥಾನ ಉದ್ಘಾಟಿಸಿದ ಅವರು ಪಂಢರಪುರದ ವಿಠಲ ಮಂದಿರ ತೀರ್ಥಯಾತ್ರೆ ಕೈಗೊಂಡ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ‘ವೀರ ಸಾವರ್ಕರ್ ಅವರು ಜೈಲಿನಲ್ಲಿದ್ದಾಗ ತಮಗೆ ತೊಡಿಸಿದ್ದ ಕೈಕೋಳಗಳನ್ನು ಸಂಗೀತ ವಾದ್ಯಗಳ ರೀತಿ ಬಳಸಿಕೊಂಡು, ತುಕಾರಾಂ ಅವರ ಅಭಂಗಗಳನ್ನು ಹಾಡುತ್ತಿದ್ದರು’ ಎಂದರು. 

ಈ ವೇಳೆ ಮೋದಿ ಅವರಿಗೆ ತುಕಾರಾಂ ಪಗಡಿ ತೊಡಿಸಿ ಗೌರವಿಸಲಾಯಿತು. ತುಕಾರಾಂ ಅವರು ಭಕ್ತಿ ಚಳವಳಿಯಲ್ಲಿ ಪ್ರಮುಖರಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜ್ ಅವರಂತಹ ನಾಯಕರ ಜೀವನದಲ್ಲಿ ತುಕಾರಾಂ ಅವರು ಮುಖ್ಯ ಪಾತ್ರ ವಹಿಸಿದ್ದರು ಎಂದು ಕೊಂಡಾಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು