ಕೆನಡಾ ಸಂಸತ್‌ ಪ್ರವೇಶಿಸಿದ ಭಾರತ ಸಂಜಾತ ಜಗಮೀತ್‌

ಗುರುವಾರ , ಏಪ್ರಿಲ್ 25, 2019
33 °C

ಕೆನಡಾ ಸಂಸತ್‌ ಪ್ರವೇಶಿಸಿದ ಭಾರತ ಸಂಜಾತ ಜಗಮೀತ್‌

Published:
Updated:
Prajavani

ಒಟ್ಟಾವ: ಕೆನಡಾದ ಸಂಸತ್‌ ಪ್ರವೇಶಿಸುವ ಮೂಲಕ ಭಾರತ ಸಂಜಾತ ಜಗಮೀತ್‌ ಸಿಂಗ್‌ ಅವರು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಇಲ್ಲಿನ ಪ್ರಮುಖ ವಿರೋಧ ಪಕ್ಷದ ನಾಯಕರಾಗಿರುವ ಜಗಮೀತ್‌ ಅವರು ಸಂಸತ್‌ ಪ್ರವೇಶಿಸಿರುವ ಶ್ವೇತವರ್ಣೀಯರಲ್ಲದ ಮೊದಲ ವ್ಯಕ್ತಿಯಾಗಿದ್ದಾರೆ.

ನ್ಯೂ ಡೆಮಾಕ್ರೆಟಿಕ್‌ ಪಕ್ಷದ ನಾಯಕರಾಗಿರುವ 40 ವರ್ಷದ ಜಗಮೀತ್‌ ಅವರು ಫೆಬ್ರುವರಿ ತಿಂಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ತಲೆಗೆ ಮುಂಡಾಸು ಧರಿಸಿ ಕಲಾಪದಲ್ಲಿ ಪಾಲ್ಗೊಳ್ಳಲು ಸಂಸತ್‌ಗೆ ಬಂದ ಅವರನ್ನು ಇತರ ಸಂಸದರು ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !