ಭಾರತೀಯ ಟೆಕಿಗೆ 9 ವರ್ಷ ಜೈಲು ಶಿಕ್ಷೆ

7
ವಿಮಾನದಲ್ಲಿ ಸಹ ಪ್ರಯಾಣಿಕ ಮಹಿಳೆಗೆ ಲೈಂಗಿಕ ಕಿರುಕುಳ

ಭಾರತೀಯ ಟೆಕಿಗೆ 9 ವರ್ಷ ಜೈಲು ಶಿಕ್ಷೆ

Published:
Updated:

ವಾಷಿಂಗ್ಟನ್‌: ಇದೇ ವರ್ಷ ವಾಣಿಜ್ಯ ವಿಮಾನದಲ್ಲಿ ಸಹ ಪ್ರಯಾಣಿಕ ಮಹಿಳೆಯ ಮೇಲೆ ‘ಲಜ್ಜೆಗೆಟ್ಟ ಲೈಂಗಿಕ ದೌರ್ಜನ್ಯ’ ಎಸಗಿದ ಆರೋಪದ ಮೇರೆಗೆ ಭಾರತೀಯ ಮೂಲದ ತಮಿಳುನಾಡಿನ ಟೆಕಿಗೆ ಒಂಬತ್ತು ವರ್ಷಗಳ ಶಿಕ್ಷೆಯನ್ನು ಅಮೆರಿಕದ ಫೆಡರಲ್‌ ಕೋರ್ಟ್‌ ಗುರುವಾರ ವಿಧಿಸಿದೆ.

ಪ್ರಭು ರಾಮಮೂರ್ತಿ (35) ಶಿಕ್ಷೆಗೆ ಗುರಿಯಾದವರು. 2015ರಲ್ಲಿ ಇವರು ಎಚ್‌1ಬಿ ಉದ್ಯೋಗ ವೀಸಾದಡಿ ಅಮೆರಿಕಕ್ಕೆ ಬಂದಿದ್ದರು. ಇದೇ ವರ್ಷದ ಜನವರಿ 3ರಂದು ರಾಮಮೂರ್ತಿ ತನ್ನ ಪತ್ನಿಯೊಂದಿಗೆ ಲಾಸ್‌ ವೆಗಾಸ್‌ನಿಂದ ಡೆಟ್ರಾಯಿಟ್‌ಗೆ ವಿಮಾನದಲ್ಲಿ ರಾತ್ರಿ ಪ್ರಯಾಣಿಸುವಾಗ ನಿದ್ರೆಯಲ್ಲಿದ್ದ ಸಹ ಪ್ರಯಾಣಿಕ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಪಾದನೆ ಎದುರಿಸುತ್ತಿದ್ದರು. ಡಿಸ್ಟ್ರಿಕ್ಟ್‌ ಕೋರ್ಟ್‌ನಲ್ಲಿ ಐದು ದಿನಗಳ ವಿಚಾರಣೆ ನಡೆದು, ಆರೋಪ ಸಾಬೀತಾಗಿತ್ತು. 

ಇದೇ ರೀತಿಯ ಅಪರಾಧಗಳನ್ನು ಎಸಗದಂತೆ ಉಳಿದವರನ್ನು ಎಚ್ಚರಿಸಲು ಈ ತೀರ್ಪು ತಕ್ಕ ಶಾಸ್ತಿಯಂತಿರುವುದಾಗಿ ಡೆಟ್ರಾಯಿಟ್‌ ಫೆಡರಲ್‌ ನ್ಯಾಯಾಲಯದ ನ್ಯಾಯಾಧೀಶ ಟೆರೆನ್ಸ್ ಬರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಪರಾಧಿಗೆ 11 ವರ್ಷಗಳ ಶಿಕ್ಷೆ ವಿಧಿಸುವಂತೆ ಫೆಡರಲ್‌ ಪ್ರಾಸಿಕ್ಯೂಟರ್‌ ಅವರು ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದರು.

ತೀರ್ಪು ಹೊರ ಬಿದ್ದ ನಂತರ ಅಮೆರಿಕದ ಅಟಾರ್ನಿ ಮ್ಯಾಥ್ಯೂ ಸ್ನಾಯ್ಡರ್‌ ‘ವಿಮಾನದಲ್ಲಿ ಪ್ರಯಾಣಿಸುವಾಗ ಎಲ್ಲರೂ ಸುರಕ್ಷಿತ ಮತ್ತು ಸುಭದ್ರವಾಗಿರುವ ಹಕ್ಕನ್ನು ಹೊಂದಿದ್ದಾರೆ. ಯಾರಾದರೂ ಅಸಹಾಯಕ ಸ್ಥಿತಿಯಲ್ಲಿದ್ದಾಗ ಆ ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳಲು ಯತ್ನಿಸಿದರೆ ಅದನ್ನು ನಾವು ಸಹಿಸುವುದಿಲ್ಲ. ಈ ಪ್ರಕರಣದಲ್ಲಿ ಸಂತ್ರಸ್ತೆ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಧೈರ್ಯವಾಗಿ ದೂರು ನೀಡಿರುವುದಕ್ಕೆ ಪ್ರಶಂಶಿಸುತ್ತೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !