ಪ್ಯಾಲೆಸ್ಟೀನ್‌ ದಾಳಿ ಬಳಿಕ ಮುಚ್ಚಲಾಗಿದ್ದ ಗಾಜಾ ಮಾರ್ಗ ಮುಕ್ತಗೊಳಿಸಿದ ಇಸ್ರೇಲ್‌

ಶುಕ್ರವಾರ, ಏಪ್ರಿಲ್ 26, 2019
33 °C

ಪ್ಯಾಲೆಸ್ಟೀನ್‌ ದಾಳಿ ಬಳಿಕ ಮುಚ್ಚಲಾಗಿದ್ದ ಗಾಜಾ ಮಾರ್ಗ ಮುಕ್ತಗೊಳಿಸಿದ ಇಸ್ರೇಲ್‌

Published:
Updated:

ಜರುಸಲೇಂ: ಪ್ಯಾಲೆಸ್ಟೀನ್‌ನ ನಡೆಸಿದ ರಾಕೆಟ್‌ ದಾಳಿಯ ನಂತರ ವಾರದಿಂದ ಮುಚ್ಚಲಾಗಿದ್ದ ಗಾಜಾ ಮಾರ್ಗವನ್ನು ಇಸ್ರೇಲ್‌ ಭಾನುವಾರ ತೆರವುಗೊಳಿಸಿದೆ. 

ಜನರ ಸಂಚಾರಕ್ಕೆ ಇದ್ದ ಎರ್ಜ್‌ ಮಾರ್ಗ ಮತ್ತು ಸರಕು ಸರಂಜಾಮುಗಳ ಸಾಗಣೆಗೆ ಬಳಸುತ್ತಿದ್ದ ಶಾಲೋಂ ಮಾರ್ಗವನ್ನು ತೆರೆದಿರುವುದಾಗಿ ರಕ್ಷಣಾ ಸಚಿವಾಲಯದ ಘಟಕ ತಿಳಿಸಿದೆ.

ಇಸ್ರೇಲ್‌ ಸೋಮವಾರ ನಡೆಸಿದ ರಾಕೆಟ್‌ ದಾಳಿಯಲ್ಲಿ ಏಳುಮಂದಿ ಗಾಯಗೊಂಡಿದ್ದರು. ಇದು ಗಾಜಾಪಟ್ಟಿಯಲ್ಲಿ ಸಂಘರ್ಷಕ್ಕೆ ಕಾರಣವಾಗಿತ್ತು.

ಗಾಜಾಪಟ್ಟಿಯಲ್ಲಿ ಸಾವಿರಾರು ಪ್ಯಾಲೆಸ್ಟೀನಿಯರು ಶನಿವಾರ ಗಡಿ ತೆರೆಯುವಂತೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಾಲ್ವರು ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !