ಕತಕನಹಳ್ಳಿ ಸದಾಶಿವ ಜಾತ್ರಾ ಮಹೋತ್ಸವ ಸಾಮೂಹಿಕ ವಿವಾಹ; 65 ಜೋಡಿ ದಾಂಪತ್ಯಕ್ಕೆ

ಸೋಮವಾರ, ಏಪ್ರಿಲ್ 22, 2019
31 °C

ಕತಕನಹಳ್ಳಿ ಸದಾಶಿವ ಜಾತ್ರಾ ಮಹೋತ್ಸವ ಸಾಮೂಹಿಕ ವಿವಾಹ; 65 ಜೋಡಿ ದಾಂಪತ್ಯಕ್ಕೆ

Published:
Updated:
Prajavani

ವಿಜಯಪುರ: ವಿಜಯಪುರ ತಾಲ್ಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ಸದಾಶಿವ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ 65 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.

ವಧು-ವರರ ಸಂಬಂಧಿಕರು, ಮಠಾಧೀಶರು, ರಾಜಕೀಯ ಗಣ್ಯರು ಪಾಲ್ಗೊಂಡು ದಾಂಪತ್ಯದ ನವ ಜೀವನಕ್ಕೆ ಕಾಲಿರಿಸಿದ ಜೋಡಿಗಳಿಗೆ ಶುಭ ಕೋರಿದರು. ಬಸಯ್ಯ ಹಿರೇಮಠ ಧಾರ್ಮಿಕ ಕಾರ್ಯ ನೆರವೇರಿಸಿದರು.

ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಕತಕನಹಳ್ಳಿಯ ಶ್ರೀ ಮಠದ ಪೀಠಾಧೀಶ ಶಿವಯ್ಯ ಮಹಾಸ್ವಾಮಿ, ‘ಸತಿ-ಪತಿಗಳು ಒಬ್ಬರನ್ನೊಬ್ಬನ್ನರಿತು ಪ್ರೀತಿ, ವಿಶ್ವಾಸದಿಂದ ಬಾಳ್ವೆ ನಡೆಸಬೇಕು. ಉದಾತ್ತ ಸಂಸ್ಕಾರ ಬೆಳೆಸಿಕೊಂಡು ಸಮೃದ್ಧವಾದ ಜೀವನ ನಡೆಸಬೇಕು, ಸದಾ ಸದಾಶಿವನ ಧ್ಯಾನ ಮಾಡಬೇಕು’ ಎಂದರು.

‘ಸಾಮೂಹಿಕ ವಿವಾಹದಲ್ಲಿ ವಿವಾಹವಾಗುವವರು ಬಡವರಲ್ಲ. ಅವರು ಬಹಳ ದೊಡ್ಡ ಶ್ರೀಮಂತರು, ಸದಾಶಿವನ ಸನ್ನಿಧಿಯಲ್ಲಿ ವಿವಾಹವಾಗುತ್ತಿರುವವರು ದೊಡ್ಡ ಶ್ರೀಮಂತರು’ ಎಂದು ವಿವರಿಸಿದರು.

ಶಿವಬಸವ ಯೋಗಾಶ್ರಮದ ಶಂಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉದ್ಯಮಿ ಬಾಬುಗೌಡ ಬಿರಾದಾರ, ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ ಚೌಕಿಮಠ, ಸುಭಾಸ ಇಂಗಳೇಶ್ವರ, ರಾಜು ಕರಂಭಟನಾಳ, ರಾಜು ಗಡ್ಡೋಡಗಿ, ಪ್ರಕಾಶಗೌಡ ಪಾಟೀಲ ಹಾಲಹಳ್ಳಿ, ರಾಜು ಪಾಟೀಲ, ಶರಣಪ್ಪ ಬಬಲೇಶ್ವರ, ಗುರುಪಾದ ಶಿರಮಗೊಂಡ, ವಿಜಯ ಜೋಶಿ, ರಾಕೇಶ ಕುಲಕರ್ಣಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !