‘ಜಿಗಜಿಣಗಿ ಸ್ಪರ್ಧಿಸದಿದ್ದರೆ ಪೂಜೆ ಮಾಡ್ತೀವಿ..!’

ಶನಿವಾರ, ಮಾರ್ಚ್ 23, 2019
24 °C

‘ಜಿಗಜಿಣಗಿ ಸ್ಪರ್ಧಿಸದಿದ್ದರೆ ಪೂಜೆ ಮಾಡ್ತೀವಿ..!’

Published:
Updated:

ವಿಜಯಪುರ: ‘ಕೇಂದ್ರ ಸಚಿವ ರಮೇಶ ಜಿಗಜಿಣಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ, ಯುವಕರಿಗೆ ಬೆಂಬಲ ನೀಡಿದರೆ, ಅವರ ಭಾವಚಿತ್ರವಿಟ್ಟು ಪೂಜೆ ಮಾಡ್ತೀವಿ’ ಎಂದು ಸರ್ವ ಜನತಾ ಪಕ್ಷದ ಸ್ವಯಂ ಘೋಷಿತ ಅಭ್ಯರ್ಥಿ ರಾಜು ಎಸ್.ಪಡಗಾನೂರ ತಿಳಿಸಿದರು.

‘ಜಿಗಜಿಣಗಿಗೆ ವಯಸ್ಸಾಗಿದೆ. ಯುವಕರಿಗೆ ಅವಕಾಶ ನೀಡಲು ಚುನಾವಣಾ ಅಖಾಡಕ್ಕೆ ಧುಮುಕಲೇಬಾರದು’ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ತಮ್ಮ ಅಧಿಕಾರದ ಅವಧಿಯಲ್ಲಿ ಜಿಗಜಿಣಗಿ ಗಮನ ಸೆಳೆಯುವ ಯಾವೊಂದು ಕೆಲಸ ಮಾಡಿಲ್ಲ. ಸಾಧನೆ ಶೂನ್ಯ. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಒಮ್ಮೆಯೂ ತುಟಿ ಬಿಚ್ಚಿಲ್ಲ’ ಎಂದು ರಾಜು ದೂರಿದರು.

ಸರ್ವ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಯಾರು ? ಚಿಹ್ನೆ ಯಾವುದು ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, ‘ನಿಮಗೆ ಫೋನಚ್ಚಿ ಕೊಡುವೆ. ಕೇಳ್ಕೊಳ್ಳಿ’ ಎಂದು ರಾಜು ಎಸ್.ಪಡಗಾನೂರ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !