ಗುರುವಾರ , ನವೆಂಬರ್ 14, 2019
22 °C

22ರಂದು ಕೊಳ್ಳೇಗಾಲದಲ್ಲಿ ಉದ್ದೋಗ ಮೇಳ

Published:
Updated:

ಚಾಮರಾಜನಗರ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಕೊಳ್ಳೇಗಾಲದ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಕೊಳ್ಳೇಗಾಲದ ಲಿಂಗನಪುರ ರಸ್ತೆಯ ಲಯನ್ಸ್ ಶಾಲೆಯ ಆವರಣದಲ್ಲಿ ಸೆ.22ರಂದು ಉದ್ಯೋಗ ಮೇಳ ಏರ್ಪಡಿಸಲಾಗಿದೆ.

ಮೈಸೂರು ಹಾಗೂ ಬೆಂಗಳೂರಿನ ಖಾಸಗಿ ಕಂಪನಿಗಳಾದ ಎಂ. ಎಸ್. ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್, ಲೈಟನಿಂಗ್ ಲಾಗ್ವಿಂಸ್ಟಿಕ್, ಆದಿತ್ಯ ಬಿರ್ಲಾ ಕ್ಯಾಪಿಟಲ್ ಕಂಪನಿ, ಅಪೊಲೊ, ಕ್ರಿಸ್ಟಲ್ ಸಾಫ್ಟ್‌ವೇರ್, ಕೆ.ಎಸ್.ಎನ್.ಗ್ರೂಪ್, ಕ್ವಿಸ್ ಕಾರ್ಪ್, ಎಚ್.ಬಿ.ಎಸ್ ಸೇರಿದಂತೆ ವಿವಿಧ ಮಾರುಕಟ್ಟೆ ಸೇವೆಗಳು, ಹಣಕಾಸು ಸೇವೆಗಳು, ವಿಮಾ ಸೇವೆಗಳು, ಕೈಗಾರಿಕಾ ಸೇವೆಗಳು, ಬ್ಯಾಂಕಿಂಗ್ ಸೇವೆಗಳು ಮತ್ತು ಆಸ್ಪತ್ರೆ ಸೇವೆಗಳ ಕಂಪನಿಗಳು ಉದ್ಯೋಗಮೇಳದಲ್ಲಿ ಪಾಲ್ಗೊಳ್ಳಲಿವೆ.

ಎಸ್ಸೆಸ್ಸೆಲ್ಸಿ, ಪಿಯು, ಪದವಿ, ಐ.ಟಿ.ಐ, ಡಿಪ್ಲೊಮಾ ಮತ್ತು ನರ್ಸಿಂಗ್ ವಿದ್ಯಾರ್ಹತೆಯುಳ್ಳ, 18–35ರ ವಯೋಮಿತಿಯಲ್ಲಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.

ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿಯನ್ನು (ದೂ. ಸಂ: 08226- 224430) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)