ಜೋಡೆತ್ತಿನ ಸರ್ಕಾರ!

7

ಜೋಡೆತ್ತಿನ ಸರ್ಕಾರ!

Published:
Updated:

ಬೆಂಗಳೂರು: ಬಿಬಿಎಂಪಿ ಬಜೆಟ್‌ಗೆ ರಾಜ್ಯ ಸರ್ಕಾರ ಅನುಮೋದನೆ ಕೊಟ್ಟಿರುವುದು ಪಾಲಿಕೆ ಸಭೆಯಲ್ಲಿ ಸ್ವಲ್ಪ ಲವಲವಿಕೆ ಸೃಷ್ಟಿಸಿತ್ತು. ಬಿಜೆಪಿಯ ಸದಸ್ಯರು, ‘ಹಾಸಿಗೆ ಇದ್ದಷ್ಟು ಕಾಲು ಚಾಚಿ’ ಎಂದು ಕಾಲೆಳೆಯುತ್ತಲೇ ‘ಆದಾಯ ಮೂಲವನ್ನು ಗಟ್ಟಿಗೊಳಿಸಿ’ ಎಂದು ಎಚ್ಚರಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಆಗಬೇಕಾದ ಕಾಮಗಾರಿಗಳು, ಅನುದಾನದ ಕೊರತೆ ಕುರಿತು ಕೆಲವು ಸದಸ್ಯರು ಗೊಣಗಲಾರಂಭಿಸಿದರು.

ಆಗ ಎಲ್ಲರನ್ನೂ ಸಮಾಧಾನಪಡಿಸಲು ಮುಂದಾದ ಮೇಯರ್‌ ಆರ್‌. ಸಂಪತ್‌ರಾಜ್‌, ‘ಅದಕ್ಕೆಲ್ಲಾ ಚಿಂತೆ ಮಾಡಬೇಡಿ. ರಾಜ್ಯದಲ್ಲಿ ಡಬಲ್‌ ಬುಲ್‌ (ಜೋಡೆತ್ತಿನ) ಸರ್ಕಾರ ನಡೆಯುತ್ತಿದೆ. ಹಾಗಾಗಿ ಎಲ್ಲವೂ ಸರಿಹೋಗುತ್ತದೆ’ ಎಂದರು. ‘ಪಾಲಿಕೆಯಲ್ಲಿರುವುದೂ ಅದೇ ಅಲ್ಲವೇ’ ಎಂಬುದು ಬಿಜೆಪಿ ಸದಸ್ಯರ ಪ್ರಶ್ನೆಯಾಗಿತ್ತು.

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ‘ಎತ್ತುಗಳು ಬೇರೆ ಬೇರೆ ದಿಕ್ಕಿಗೆ ಎಳೆದರೆ ಏನು ಗತಿ?’ ಎಂದು ಕೇಳಿದ್ದು ಮೇಯರ್‌ ಕಿವಿಗೆ ಬೀಳಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !