ಸ್ವೀಡನ್‌ಗೆ ಸಹಕಾರ: ಬ್ರಿಟನ್‌ ಸಂಸದರ ಒತ್ತಾಯ

ಭಾನುವಾರ, ಏಪ್ರಿಲ್ 21, 2019
32 °C
ಜೂಲಿಯನ್‌ ಅಸಾಂಜ್‌ ಹಸ್ತಾಂತರ ಪ್ರಕರಣ

ಸ್ವೀಡನ್‌ಗೆ ಸಹಕಾರ: ಬ್ರಿಟನ್‌ ಸಂಸದರ ಒತ್ತಾಯ

Published:
Updated:
Prajavani

ಲಂಡನ್: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಿಲೀಕ್ಸ್‌ ಸಹ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ ಅವರನ್ನು ಹಸ್ತಾಂತರಿಸಬೇಕೆಂದು ಸ್ವೀಡನ್‌ ಕೋರಿದರೆ ಅದಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಬ್ರಿಟನ್‌ನ 70 ಮಂದಿ ಸಂಸದರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

’ಅಸಾಂಜ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ, ಸ್ವೀಡನ್‌ಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು‘ ಎಂದು ಬ್ರಿಟನ್‌ನ ಗೃಹ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ಅವರಿಗೆ ಬರೆದ ಪತ್ರದಲ್ಲಿ ಸಂಸದರು ಕೋರಿದ್ದಾರೆ.

’ಲೈಂಗಿಕ ಕಿರುಕುಳ ತಡೆಗೆ ಬ್ರಿಟನ್‌ ಆದ್ಯತೆ ನೀಡುತ್ತಿದೆ ಎಂಬ ಸ್ಪಷ್ಟ ಸಂದೇಶ ನೀಡುವ ಅಗತ್ಯ ಇದೆ. ದೂರುದಾತೆಗೆ ನ್ಯಾಯ ದೊರಕಬೇಕೆಂದು ನಾವು ಬಯಸುತ್ತೇವೆ‘ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸ್ವೀಡನ್‌ನಲ್ಲಿ 2010ರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಅಸಾಂಜ್‌ ಮೇಲಿತ್ತು. ಆದರೆ ಈ ಪ್ರಕರಣದ ವಿಚಾರಣೆಯನ್ನು 2017ರಲ್ಲಿ ಕೈಬಿಡಲಾಗಿತ್ತು.

ಅಸಾಂಜ್‌ ಬಂಧನದ ಬಳಿಕ, ಪ್ರಕರಣದ ಮರುವಿಚಾರಣೆಗೆ ಕೋರುವುದಾಗಿ ಸಂತ್ರಸ್ತೆ ಪರ ವಕೀಲೆ ಹೇಳಿದ್ದಾರೆ.

’ನನ್ನ ಮೇಲಿನ ಆರೋಪ ರಾಜಕೀಯ ಪ್ರೇರಿತ‘ ಎಂದು ಅಸಾಂಜ್‌ ಹೇಳಿದ್ದಾರೆ. ಏಳು ವರ್ಷಗಳಿಂದ ಈಕ್ವೆಡಾರ್‌ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ಅಸಾಂಜ್‌ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !