ಜೀವನಾಡಿ ಕಬಿನಿ ಜಲಾಶಯಕ್ಕಿಲ್ಲ ರಸ್ತೆ..!

ಮಂಗಳವಾರ, ಜೂನ್ 25, 2019
22 °C
ಪ್ರವಾಸಿಗರ ಅಳಲು; ಸ್ಥಳೀಯರ ದೂರು

ಜೀವನಾಡಿ ಕಬಿನಿ ಜಲಾಶಯಕ್ಕಿಲ್ಲ ರಸ್ತೆ..!

Published:
Updated:
Prajavani

ಎಚ್.ಡಿ.ಕೋಟೆ: ನಾಡಿನ ಜಲಾಶಯಗಳಲ್ಲೊಂದಾದ ಕಬಿನಿ ಜಲಾಶಯಕ್ಕೆ ತೆರಳುವ ರಸ್ತೆಯೇ ಹದಗೆಟ್ಟಿದೆ.

ಕಬಿನಿ ನದಿ ರಾಜ್ಯವೂ ಸೇರಿದಂತೆ ನೆರೆಯ ತಮಿಳುನಾಡಿನ ಲಕ್ಷಾಂತರ ರೈತರ ಜೀವನಾಡಿ. ಜಲಾಶಯ ವೀಕ್ಷಣೆಗೆ ಅಸಂಖ್ಯಾತ ಪ್ರವಾಸಿಗರು ಬರಲಿದ್ದು, ಇಲ್ಲಿಗೆ ತೆರಳುವ ರಸ್ತೆ ತಗ್ಗುಗಳಿಂದಲೇ ಕೂಡಿದ್ದು, ಸಂಚಾರಕ್ಕೆ ಯೋಗ್ಯವಾಗಿಲ್ಲ. ಒಮ್ಮೆ ಈ ರಸ್ತೆಯಲ್ಲಿ ಸಂಚರಿಸಿದವರು ಈ ಭಾಗದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಶಾಪ ಹಾಕುವುದು ಇಂದಿಗೂ ತಪ್ಪದಾಗಿದೆ.

ರಾಜ್ಯದಲ್ಲಿ ಮೊದಲು ಭರ್ತಿಯಾಗುವ ಜಲಾಶಯ ಎಂದರೇ ಕಬಿನಿ. ತಾಲ್ಲೂಕಿನ ಹ್ಯಾಂಡ್‌ಪೋಸ್ಟ್‌ನಿಂದ ಜಲಾಶಯ 12 ಕಿ.ಮೀ. ದೂರದಲ್ಲಿದ್ದು, ಈ ರಸ್ತೆ ಹಾಳಾಗಿ ಹಲವು ವರ್ಷ ಗತಿಸಿದರೂ; ಅಭಿವೃದ್ಧಿಯಾಗದೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಜಲಾಶಯ ವೀಕ್ಷಣೆಗೆ ಪ್ರವಾಸಿಗರು ರಾಜ್ಯವೂ ಸೇರಿದಂತೆ ಹೊರ ರಾಜ್ಯದಿಂದಲೂ ನಿತ್ಯವೂ ಬರುತ್ತಾರೆ. 12 ಕಿ.ಮೀ. ದೂರದ ಹಾದಿ ಕ್ರಮಿಸಲು ಕನಿಷ್ಠ 1 ಗಂಟೆ ಬೇಕಿದ್ದು, ದುರಸ್ತಿಗೆ ಮುಂದಾಗದಿರುವುದು ಪ್ರವಾಸಿಗರು, ಈ ಭಾಗದ ಜನರ ಕಟು ಟೀಕೆಗೆ ಗುರಿಯಾಗಿದೆ.

ಜಲಾಶಯ ಭರ್ತಿಯಾದ ಸಂದರ್ಭ ವೀಕ್ಷಣೆಗಾಗಿ ನಿತ್ಯವೂ ಅಪಾರ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಿಂದಿನ ವರ್ಷವೂ ಸಾಕಷ್ಟು ಜನರು ಬಂದಿದ್ದರು. ಈ ಬಾರಿ ಕೇರಳದಲ್ಲಿ ಮುಂಗಾರು ಚಾಲನೆ ಪಡೆದಿದ್ದು, ಕಬಿನಿ ಮೈದುಂಬಿ ಹರಿಯುವುದನ್ನು ವೀಕ್ಷಿಸಲು ಅಪಾರ ಜನರು ಬರಲಿದ್ದಾರೆ.

ಇತಿಹಾಸ ಪ್ರಸಿದ್ಧ ಕಿತ್ತೂರು ಗ್ರಾಮದಲ್ಲಿನ ರವಿ ರಾಮೇಶ್ವರ ದೇಗುಲ, ಕಳಸೂರು ಗ್ರಾಮದಲ್ಲಿನ ಜೈನ ದೇವಾಲಯ, ಭೀಮನಕೊಲ್ಲಿ ಗ್ರಾಮದಲ್ಲಿರುವ ಮಹದೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಇನ್ನೂ ಹಲ ಪ್ರಮುಖ ಪ್ರದೇಶಗಳಿಗೆ ಈ ರಸ್ತೆಯೇ ಆಸರೆಯಾಗಿದೆ.

ಪ್ರವಾಸಿಗರ ಪಯಣ ಕಬಿನಿಯತ್ತ ಆರಂಭವಾಗುವುದಕ್ಕೂ ಮುನ್ನವೇ ಸಂಬಂಧಿಸಿದ ಅಧಿಕಾರಿ ವರ್ಗ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ, ಅಭಿವೃದ್ಧಿಗೆ ಮುಂದಾಗಲಿ ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !