ಯಾತ್ರಾರ್ಥಿಗಳಿಗೆ ಭಾರತೀಯ ರಾಯಭಾರ ಕಚೇರಿ ಸಲಹೆ

ಗುರುವಾರ , ಏಪ್ರಿಲ್ 25, 2019
31 °C
ಕೈಲಾಸ ಮಾನಸಸರೋವರ ಯಾತ್ರೆ

ಯಾತ್ರಾರ್ಥಿಗಳಿಗೆ ಭಾರತೀಯ ರಾಯಭಾರ ಕಚೇರಿ ಸಲಹೆ

Published:
Updated:

ಕಠ್ಮಂಡು: ನೇಪಾಳ ಮೂಲಕ ಕೈಲಾಸ ಮಾನಸಸರೋವರ ಯಾತ್ರೆ ಕೈಗೊಳ್ಳುವವರು ಚೀನಾದ ವೀಸಾ ಮತ್ತು ಟಿಬೆಟ್‌ನ ಪ್ರಯಾಣ ಪರವಾನಗಿ ಪಡೆದುಕೊಳ್ಳಬೇಕು ಎಂದು ನೇಪಾಳದಲ್ಲಿರುವ ಭಾರತದ ರಾಯಭಾರ ಕಚೇರಿ ಹೇಳಿದೆ.

ಪ್ರಯಾಣದ ವೇಳೆ ಅನಾರೋಗ್ಯ ಕಾಣಿಸಿಕೊಂಡರೆ ತುರ್ತು ವೈದ್ಯಕೀಯಸೇವೆ ಮೊದಲಾದವುಗಳಿಗಾಗಿ ಯಾತ್ರಾರ್ಥಿಗಳು ವಿಮೆ ಮಾಡಿಸಿಕೊಂಡಿರಬೇಕು ಎಂದಿದೆ.

ನವದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿಯಿಂದ ವೀಸಾ ಪಡೆದುಕೊಳ್ಳಬೇಕು ಎಂದೂ ಸಲಹೆ ನೀಡಿದೆ.

ಟ್ರಾವೆಲ್‌ ಏಜೆಂಟ್‌ಗಳು ನೇಪಾಳದ ಸಿಮಿಕೋಟ್‌ ಅಥವಾ ರಸುವಾಗದಿಗೆ ತೆರಳಲು ನಿರ್ಬಂಧಿತ ಪ್ರದೇಶದ ಪರವಾನಗಿ ಪಡೆದಿದ್ದಾರೆಯೇ ಎಂಬುದನ್ನು ಖಾತರಿಪಡಿಕೊಳ್ಳಬೇಕು.

ಸಿಮಿಕೋಟ್‌ ಪ್ರದೇಶದಲ್ಲಿ ವೈದ್ಯಕೀಯ ನೆರವು ಲಭಿಸದ ಕಾರಣ ಯಾತ್ರಾರ್ಥಿಗಳು ಸಾಕಷ್ಟು ಔಷಧಗಳನ್ನು ಕೊಂಡೊಯ್ಯಬೇಕು ಎಂದೂ ಹೇಳಲಾಗಿದೆ.

ಯಾತ್ರೆಗೂ ಮುನ್ನ ಯಾತ್ರಾರ್ಥಿಗಳು ವೈದ್ಯಕೀಯ ತಪಾಸಣೆಗೆ ಒಳಪಡಬೇಕು ಎಂದೂ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !