ಗುರುವಾರ , ನವೆಂಬರ್ 21, 2019
21 °C

ಕಮಲ್‌ ಬಣ್ಣದ ಬದುಕಿಗೆ 60

Published:
Updated:
Prajavani

ದಕ್ಷಿಣ ಭಾರತದ ಬಹುಮುಖ ಪ್ರತಿಭೆಯ ನಟ ಕಮಲ್‌ ಹಾಸನ್‌ ಚಿತ್ರರಂಗದಲ್ಲಿ 60 ವರ್ಷ ಪೂರೈಸಿದ್ದಾರೆ! ನಟನೊಬ್ಬ ಚಿತ್ರರಂಗದಲ್ಲಿ 60 ವರ್ಷ ಪೂರೈಸುವುದು ಕಡಿಮೆ ಸಾಧನೆಯಲ್ಲ. 

1959ರಲ್ಲಿ ಬಿಡುಗಡೆಯಾದ ‘ಕಲತ್ತೂರ್‌ ಕಣ್ಣಮ್ಮ’ ತಮಿಳು ಚಿತ್ರದ ಮೂಲಕ ಬಾಲನಟನಾಗಿ ಬಣ್ಣದ ಬದುಕಿಗೆ ಅಡಿ ಇಟ್ಟ ಕಮಲ್‌ ನಂತರ ಹಿಂದಿರುಗಿ ನೋಡಲಿಲ್ಲ. ಆ ನಂಟಿಗೆ ಈಗ 60 ವರ್ಷ.

 ಆ ಚಿತ್ರ ತೆರೆಕಂಡು ಆಗಸ್ಟ್‌ 12ಕ್ಕೆ ಸರಿಯಾಗಿ 60 ವರ್ಷವಾಯಿತು. ಕಮಲ್‌ ವೃತ್ತಿ ಬದುಕಿಗೆ ನಾಂದಿ ಹಾಡಿದ ಈ ಚಿತ್ರದಲ್ಲಿ ಅಭಿನಯಕ್ಕಾಗಿ ಉತ್ತಮ ಬಾಲನಟ ರಾಷ್ಟ್ರೀಯ ಪ್ರಶಸ್ತಿ ದೊರೆತಿತ್ತು. ಆಗಿನ್ನೂ ಅವರಿಗೆ ನಾಲ್ಕು ವರ್ಷ. ಜೇಮಿನಿ ಗಣೇಶನ್‌, ಸಾವಿತ್ರಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 

ಕಮಲ್‌ ಹಾಸನ್‌ ಭಾರತೀಯ ಚಿತ್ರರಂಗ ಕಂಡ ಅದ್ಭುತ ಕಲಾವಿದ. ಹಲವು ಪ್ರತಿಭೆಗಳ ಸಂಗಮ. ಅಮೋಘ ಸಾಧನೆಯನ್ನು ಮೆಲುಕು ಹಾಕಲು ಅವರ ಅಭಿಮಾನಿಗಳು www.ikamalhaasan.com ತೆರೆದಿದ್ದಾರೆ. ಕಮಲ್‌ ಬಣ್ಣದ ಬದುಕಿನ ಮಹತ್ವದ ಘಟನೆಗಳನ್ನು ನೆನಪಿಸುವ ಚಿತ್ರ, ವಿಡಿಯೊಗಳು ಈ ವೆಬ್‌ಸೈಟ್‌ನಲ್ಲಿವೆ.  

ಚಿತ್ರರಂಗದಲ್ಲಿ ಆರು ದಶಕ ಕಳೆದ ಕಮಲ್‌ 150 ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಚಿತ್ರಕತೆ, ಸಾಹಿತ್ಯ, ಹಾಡು ಬರೆದಿದ್ದಾರೆ. ಕಾಲಿವುಡ್‌ ಜನರು ಪ್ರೀತಿಯಿಂದ ಅವರನ್ನು ‘ಉಳಗನಾಯಗನ್‌’ ಎಂದು ಕರೆದಿದೆ.

ಅಪೂರ್ವ್‌ ರಾಗಂಗಳ್‌, ಮೂಂದ್ರಮ್ ಪಿರಾಯ್‌ (ಸದ್ಮಾ), ಸಾಗರ ಸಂಗಮಂ, ನಾಯಗನ್, ಏಕ್‌ ದೂಜೆ ಕೇಲಿಯೆ, ಪುಷ್ಪಕ ವಿಮಾನ, ಅಪೂರ್ವ್‌ ಸಹೋದರಗಳ್‌, ಥೇವರ್‌ ಮಗನ್‌, ಸ್ವಾತಿಮುತ್ತ್ಯಂ, ಗುಣ, ನಾಯಗನ್, ಹೇ ರಾಮ್‌, ಇಂಡಿಯನ್‌, ದಶಾವತಾರಂ, ವಿಶ್ವರೂಪಂ ಮುಂತಾದವು ಬಹುಕಾಲ ನೆನಪಿನಲ್ಲಿ ಉಳಿಯುತ್ತವೆ

ಪ್ರತಿಕ್ರಿಯಿಸಿ (+)