ದೇವರ ದಾಸಿಮಯ್ಯಗೆ ಅಪಮಾನ: ಕ್ರಮಕ್ಕೆ ಆಗ್ರಹ

ಬುಧವಾರ, ಏಪ್ರಿಲ್ 24, 2019
31 °C

ದೇವರ ದಾಸಿಮಯ್ಯಗೆ ಅಪಮಾನ: ಕ್ರಮಕ್ಕೆ ಆಗ್ರಹ

Published:
Updated:

ಬೆಂಗಳೂರು: ‘ಚುನಾವಣೆಯ ನೀತಿ ಸಂಹಿತೆ ನೆಪದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಕಾಟಾಚಾರಕ್ಕೆ ಎಂಬಂತೆ ನಡೆಸಲಾಗಿದ್ದು, ಈ ಶ್ರೇಷ್ಠ ವಚನಕಾರನಿಗೆ ಅವಮಾನ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ನೇಕಾರರ ಜಾಗೃತಿ ವೇದಿಕೆಯ ರಾಜ್ಯ ಘಟಕ ಅಧ್ಯಕ್ಷ ಲಿಂಗರಾಜು ಡಿ.ನೊಣವಿನಕೆರೆ ಆಗ್ರಹಿಸಿದ್ದಾರೆ.

‘ದೇವರ ದಾಸಿಮಯ್ಯ ಜಯಂತಿಯನ್ನು ಏಪ್ರಿಲ್‌ 10ರಂದು ನಯನ ಸಭಾಂಗಣದಲ್ಲಿ ಇಲಾಖೆ ವತಿಯಿಂದ ಸರಳವಾಗಿ ಆಯೋಜಿಸಲಾಗಿತ್ತು.‌‌‌‌ ಅಂದು ಕೇವಲ 25 ನಿಮಿಷಗಳಲ್ಲಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗಿತ್ತು. ಅಲ್ಲದೆ, ಸಮಾರಂಭದ ಮಧ್ಯೆಯೇ ನಿರ್ದೇಶಕರು ಎದ್ದುಹೋಗುವ ಮೂಲಕ ದಾಸಿಮಯ್ಯ ಅವರಿಗೆ ಅಗೌರವ ತೋರಿದ್ದರು’ ಎಂದು ದೂರಿದ್ದಾರೆ.

‘ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಅಡ್ಡಿಯಾಗದ ನೀತಿ ಸಂಹಿತೆ ಬೆಂಗಳೂರಿನಲ್ಲಿ ಮಾತ್ರ ಹೇಗೆ ಅಡ್ಡಿಯಾಯಿತು ಎಂದು ಪ್ರಶ್ನಿಸಿರುವ ಅವರು, ‘ಚುನಾವಣೆ ಬಳಿಕ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !