‘ಕನ್ನಡ ಉಳಿದರೆ ನಮ್ಮತನ ಉಳಿವು’

7
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷೆ ಎಸ್‌.ಜಿ. ಸುಶೀಲಮ್ಮ ಅಭಿಮತ

‘ಕನ್ನಡ ಉಳಿದರೆ ನಮ್ಮತನ ಉಳಿವು’

Published:
Updated:
Prajavani

ಬೆಂಗಳೂರು: ‘ಕನ್ನಡ ಉಳಿದರೆ ಮಾತ್ರ ಕನ್ನಡತನ ಉಳಿಯುತ್ತದೆ. ಕನ್ನಡಿಗರು ಕನ್ನಡತನ ಬಿಟ್ಟುಕೊಡದೇ ಬೇರೆ ಭಾಷೆಗಳನ್ನು ಕಲಿಯಬೇಕು’ ಎಂದು ಸಮ್ಮೇಳನಾಧ್ಯಕ್ಷೆ ಎಸ್‌.ಜಿ.ಸುಶೀಲಮ್ಮ ಅಭಿಪ್ರಾಯಪಟ್ಟರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಹೆಬ್ಬಾಳ ಸರ್ಕಾರಿ ಕ್ಷೇತ್ರ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಮಹಿಳಾ ಸಬಲೀಕರಣ ಸಮಾವೇಶ
ವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕನ್ನಡ ಭಾಷೆಯನ್ನು ಸಾರ್ವಜನಿಕವಾಗಿ ಬಳಸಿ, ಉಳಿಸಬೇಕಿದೆ’ ಎಂದು ಶಾಸಕ ಬೈರತಿ ಸುರೇಶ್‌ ಹೇಳಿದರು.

ಬೆಳಿಗ್ಗೆ ಶಾಲೆಯ ಆವರಣದಲ್ಲಿ ಎಸಿ‍ಪಿ ಎಂ.ಶಿವಶಂಕರ್‌ ಅವರು ರಾಷ್ಟ್ರಧ್ವಜ, ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಾಯಣ್ಣ ಅವರು ಸಾಹಿತ್ಯ ಪರಿಷತ್ತಿನ ಧ್ವಜ ಮತ್ತು ಪಾಲಿಕೆ ಸದಸ್ಯ ಎಂ.ಆನಂದಕುಮಾರ್‌ ಅವರು ನಾಡಧ್ವಜದ ಧ್ವಜಾರೋಹಣವನ್ನು ನೆರವೇರಿಸಿದರು.

ಹೆಬ್ಬಾಳದ ಮೇಲ್ಸೇತುವೆ ಮಾರ್ಗವಾಗಿ ಕೆಂ‍ಪಮ್ಮದೇವಿ, ಆನಂದನಗರದ ಮೂಲಕ ಶಾಲೆಯ ಆವರಣದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಜರುಗಿತು.ವಿವಿಧ ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಕನ್ನಡದ ವೈವಿಧ್ಯಮಯ ಹಾಡುಗಳಿಗೆ ನೃತ್ಯ ರೂಪಕದ ಮೂಲಕ ಸಭಿಕರನ್ನು ರಂಜಿಸಿದರು. ಕನ್ನಡ ನಾಡಿನ ಶ್ರೀಮಂತ ಪರಂಪರೆಯನ್ನು ಸಾರುವ ಕನ್ನಡ ಗೀತೆಗಳ ನೃತ್ಯ ವೈಭವ ಪ್ರೇಕ್ಷಕರ ಕಣ್ಮನಗಳನ್ನು ತಣಿಸಿತು. ನಾಡು ನುಡಿ ಮತ್ತು ಸಮ್ಮೇಳನದ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು.

ಮಹಾತ್ಮ ಗಾಂಧಿ ಅವರ 150ನೇ ಜನ್ಮ ಜಯಂತಿ ನೆನಪಿನಲ್ಲಿ ಗಾಂಧೀಜಿಯ ಹತ್ತು ಸಾವಿರ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಸಾಹಿತ್ಯ, ರಂಗಭೂಮಿ, ಶಿಕ್ಷಣ, ಸಮಾಜ ಸೇವೆ, ಸಿನಿಮಾ, ಕ್ರೀಡಾ ಕ್ಷೇತ್ರ ಸೇರಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ 68 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !