ಭಯದಿಂದ ಪ್ರಜಾಧ್ವನಿ ಯಾತ್ರೆ: ಸಿ.ಟಿ. ರವಿ

ಹಾಸನ: ‘ಕಾಂಗ್ರೆಸ್‌ನವರಿಗೆ ಭಯ ಶುರುವಾಗಿದ್ದು, ಅದಕ್ಕಾಗಿ ಯಾತ್ರೆ ಹೊರಟಿದ್ದಾರೆ. ಏನೇ ಯಾತ್ರೆ ಹೊರಟರೂ, 365 ದಿನ ಓದಿದ ವಿದ್ಯಾರ್ಥಿಗೆ, ಮೂರು ದಿನ ಓದಿದ ವಿದ್ಯಾರ್ಥಿಗೂ ಸರಿಸಾಟಿಯಾಗಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಜಾಧ್ವನಿ ಯಾತ್ರೆ ಉದ್ಘಾಟನೆ ವೇಳೆ ಕಸ ಗುಡಿಸಿದ ಕಾಂಗ್ರೆಸ್ ನಾಯಕರು, ಬಿಜೆಪಿಯನ್ನು ಓಡಿಸುವುದಾಗಿ ಹೇಳಿದ್ದಾರೆ. ಗುಜರಾತನಲ್ಲೂ ಅದೇ ಮಾತು ಹೇಳಿದ್ದರು. ಪ್ರಜಾಪ್ರಭುತ್ವದಲ್ಲಿ ಗುಡಿಸುವ ಶಕ್ತಿ ಇರುವುದು ರಾಜ್ಯದ ಜನರಿಗೆ ಮಾತ್ರ. ನಾವು ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ’ ಎಂದು ತಿರುಗೇಟು ನೀಡಿದರು.
‘ನನ್ನ ರಕ್ತ ಕಾಂಗ್ರೆಸ್‌ನಲ್ಲೇ ಇದೆ. ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ’ ಎಂಬ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಖಂಡಿತ ಹೋಗಲಿ. ಬೇಡ ಅನ್ನುವವರು ಯಾರು? ಇಷ್ಟು ವರ್ಷದ ರಾಜಕೀಯ ಅನುಭವದಂತೆ, ಬಿಜೆಪಿ ಬರಬೇಕಾದರೆ ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಹೇಗೆ ಬಂದರೋ, ಅದೇ ರೀತಿ ಕಾಂಗ್ರೆಸ್‌ಗೆ ಹೋಗಬೇಕಾದರೆ ಬಿಜೆಪಿಗೆ ರಾಜೀನಾಮೆ ಕೊಟ್ಟು ಹೋಗುತ್ತಾರೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.