‘ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ..’!
–ಹೀಗೆ ಹಾಡುತ್ತಾ ಯಾತ್ರಾರ್ಥವಾಗಿ ಕನಕದಾಸರು ಶ್ರೀರಂಗಪಟ್ಟಣಕ್ಕೆ ಬಂದಿದ್ದ ವೇಳೆ ಶೇಷಶಾಯಿಯಾದ ಆದಿರಂಗನನ್ನು ಕಂಡು, ‘ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರೂ ನಿನ್ನನೆಬ್ಬಿಸುವರೊಬ್ಬರನೂ ಕಾಣೆ ಶ್ರೀರಂಗಪಟ್ಟಣದ ರಂಗನಾಥ...’ ಎಂದು ಹಾಡಿದ್ದಾರೆ.

ಶ್ರೀರಂಗನಾಥನ ದರ್ಶನ ಪಡೆದ ಕನಕದಾಸರು ಶಿವನಸಮುದ್ರ ಬಳಿಯ ಮಧ್ಯರಂಗನ ದರ್ಶನಕ್ಕಾಗಿ ಪೂರ್ವಾಭಿಮುಖವಾಗಿ ತೆರಳುವ ಮಾರ್ಗದಲ್ಲಿ ಮಹದೇವಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಕಾಶಿ ವಿಶ್ವನಾಥನನ್ನು ಕಾಣುವ ಮುನ್ನ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಬಟ್ಟೆ ಶುಚಿಗೊಳಿಸಲು ಕೂತಿದ್ದ ಬಂಡೆ ‘ಕನಕನ ಕಲ್ಲು’ ಎಂದೇ ಜನಜನಿತ. ನದಿಯ ಮಧ್ಯೆ ಸೀಳಿದಂತಿರುವ ಜೋಡು ಕಲ್ಲುಗಳಲ್ಲಿ ತುಸು ದೊಡ್ಡದಾದ ಕಲ್ಲಿನ ಮೇಲೆ ಅವರು ಕುಳಿತು ಧ್ಯಾನ ಮಾಡಿದರು ಎಂಬ ಪ್ರತೀತಿ ಇದೆ. ಕನಕದಾಸರು ಮಜ್ಜನಗೈದು ಹರಿಯನ್ನು ಸ್ಮರಿಸಿದರು ಎನ್ನಲಾದ ಸ್ಥಳದಲ್ಲಿ ಬಾಳೆ ಎಲೆಯ ಅಚ್ಚಿನಂತಹ ಗುರುತು ಈಗಲೂ ಇದೆ.

ಬೇಸಿಗೆಯಲ್ಲಿ (ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದಾಗ) ಅಂದರೆ, ಮಾರ್ಚ್ನಿಂದ ಮೇ ತಿಂಗಳವರೆಗೆ ಇಲ್ಲಿ ಕನಕನಕಲ್ಲು ಗೋಚರಿಸುತ್ತದೆ. ಹರಿಗೋಲಿ (ತೆಪ್ಪ)ನಲ್ಲಿ ಹೋದರೆ ನದಿಯ ಮಧ್ಯೆ ಇರುವ ಈ ಕಲ್ಲನ್ನು ಸಮೀಪದಿಂದ ನೋಡಬಹುದು.

ಕನಕನ ಗುಡಿ
ಕನಕದಾಸರು ಇಲ್ಲಿಗೆ ಭೇಟಿ ನೀಡಿದ್ದ ಜ್ಞಾಪಕಾರ್ಥವಾಗಿ ಅಂಬಿಗರು ನದಿಯ ದಂಡೆಯಲ್ಲಿ ಪುಟ್ಟ ಕನಕನ ಗುಡಿ ಕಟ್ಟಿಸಿದ್ದಾರೆ. ಪ್ರತಿ ಶನಿವಾರ ಕನಕನ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತದೆ.

ಕಾಶಿ ವಿಶ್ವನಾಥನ ತೆಪ್ಪೋತ್ಸವದ ಸಂದರ್ಭದಲ್ಲಿ ಕನಕನ ಬಂಡೆಗೆ ಭಕ್ತರು ಪೂಜೆ ಸಲ್ಲಿಸುವ ವಾಡಿಕೆ ಶತಮಾನಗಳಿಂದ ನಡೆದು ಬಂದಿದೆ. ಮಾತ್ರವಲ್ಲದೆ, ಗಂಗಾಮತಸ್ಥರ ಕುಟುಂಬಗಳು ವರ್ಷಕ್ಕೊಮ್ಮೆ ಕನಕದಾಸರ ಹಬ್ಬ ಆಚರಿಸುತ್ತಾರೆ. ದೀಪಾವಳಿ ಹಬ್ಬದಂದು ಸುತ್ತಮುತ್ತಲ ಗ್ರಾಮಗಳ ಹತ್ತು ದೇವರುಗಳ ಕೂಟ ಇಲ್ಲಿ ನೆರೆಯುತ್ತದೆ. ಚೀರನಹಳ್ಳಿ ಚನ್ನಬೀರೇಶ್ವರ, ಮಾಡಲದ ಹುಚ್ಚು ಬೀರೇಶ್ವರ, ಚಿಕ್ಕಮರಳಿ ಚನ್ನಬೀರೇಶ್ವರ, ದೊಡ್ಡಮುಲಗೂಡು ದೊಡ್ಡ ಬೀರಪ್ಪ, ಗಾಮನಹಳ್ಳಿ ಹುಚ್ಚಯ್ಯ ಬೀರೇಶ್ವರ, ಕಾಡುಕೊತ್ತನಹಳ್ಳಿ ಮಾರಮ್ಮ, ರಾಮಂದೂರು ಕಾಳಮ್ಮ, ಕುರುಂಪುರದ ಲಕ್ಷ್ಮಿದೇವಿ, ನೇರಲಕೆರೆ ಶಂಭುಲಿಂಗೇಶ್ವರ ಹಾಗೂ ಏಳೂರಮ್ಮ ದೇವರ ಕೂಟಗಳು ಇಲ್ಲಿ ನೆರೆಯುತ್ತವೆ.

ಪವಾಡದ ಕಥೆ
ಮಹದೇವಪುರ ಬಳಿ ಕಾವೇರಿ ಉತ್ತರದಿಂದ ದಕ್ಷಿಣ ದಿಕ್ಕಿಗೆ ಹರಿಯುತ್ತಾಳೆ. ನದಿ ದಾಟಿ ಪೂರ್ವಕ್ಕೆ ತೆರಳಬೇಕಾದರೆ ಆ ಕಾಲದಲ್ಲಿ ದೋಣಿಯನ್ನು ಆಶ್ರಯಿಸಬೇಕಿತ್ತು. ‘ನದಿ ದಾಟಲು ಕನಕದಾಸರು ದೋಣಿಯನ್ನು ಏರಲು ಮುಂದಾದಾಗ ಉನ್ನತ ಕುಲದವರು ಎನಿಸಕೊಂಡ ಹಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಅದಕ್ಕೆ ಕನಕದಾಸರು ಹಿಂದುಳಿದ ಜಾತಿಯವರು ಎಂಬುದು ಒಂದು ಕಾರಣವಾದರೆ, ಅವರ ಮೈಯೆಲ್ಲಾ ಕಜ್ಜಿಯಾಗಿತ್ತು ಎಂಬುದು ಮತ್ತೊಂದು ಕಾರಣ. ದೋಣಿಯನ್ನು ಏರಲು ಅವಕಾಶ ನೀಡದಿದ್ದರಿಂದ ಕನಕದಾಸರು ಪಕ್ಕದ ತೋಟದ ಮಾಲೀಕನಿಂದ ಬಾಳೆ ಎಲೆ ಪಡೆದು ಅದರ ಮೇಲೆ ಕುಳಿತೇ ನದಿಯನ್ನು ದಾಟಿದರು. ಈ ಪವಾಡದ ದೃಶ್ಯವನ್ನು ಕಂಡು ಚಕಿತರಾದ ಅಂಬಿಗ ಮತ್ತು ದೋಣಿಯಲ್ಲಿ ಪ್ರಯಾಣಿಸುತ್ತಿದ್ದವರು ಕನಕದಾಸರ ಬಳಿ ಕ್ಷಮೆ ಯಾಚಿಸಿದರಂತೆ ಎಂಬ ಕತೆಯನ್ನು ನಮ್ಮ ತಾತನಿಂದ ಕೇಳಿ ತಿಳಿದಿದ್ದೇನೆ’ ಎಂದು ಅಂಬಿಗರ ಮನೆತನದ ಬೋರಯ್ಯ ಹೇಳುತ್ತಾರೆ.

ಚರ್ಮದ ತುರಿಕೆ ಇತರ ಬೇನೆಗಳಿಂದ ಬಳಲುವವರು ಕಾವೇರಿ ನದಿಯಲ್ಲಿ ಸ್ನಾನ ಮಾಡಿ ನಾರುಮಡಿಯಲ್ಲಿ ಕನಕನ ಕಲ್ಲಿಗೆ ಪೂಜೆ ಸಲ್ಲಿಸಿದರೆ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆಯಿಂದ ಕನಕನ ಕಲ್ಲಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಅನೂಚಾನವಾಗಿ ನಡೆದು ಬಂದಿದೆ.

ಸರ್ಕಾರಕ್ಕೆ ಪ್ರಸ್ತಾವ
ಕನಕ (ಪೀಠ) ಕಲ್ಲು ಇರುವ ಸ್ಥಳವನ್ನು ಕೂಡಲಸಂಗಮ ಮಾದರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂದು ಮಹದೇವಪುರ ಜನರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಕನಕನ ಪೀಠದ ಬಳಿ ಸಾಗಲು ‘ಭಾರತ್ ನಿರ್ಮಾಣ್’ ಸ್ವಯಂ ಸೇವಕರು ತಾತ್ಕಾಲಿಕವಾಗಿ ಮಣ್ಣಿನ ರಸ್ತೆ ನಿರ್ಮಿಸಿದ್ದಾರೆ.

ನದಿ ದಂಡೆಯವರೆಗೆ ಸಿಮೆಂಟ್ ರಸ್ತೆ, ನದಿ ದಡದಿಂದ ಪೀಠದವರೆಗೆ ಕಿರು ಸಂಪರ್ಕ ಸೇತುವೆ ಹಾಗೂ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದರೂ ಕನಕನ ಕಲ್ಲು ಗೋಚರಿಸುವಂತೆ ಕೊಳಾಯಿ ರೂಪದ ರಕ್ಷಣಾ ಗೋಡೆ ನಿರ್ಮಿಸಲು ಕಾವೇರಿ ನೀರಾವರಿ ನಿಗಮ ಒಂದು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಹೀಗೆ ಬನ್ನಿ
ಜಿಲ್ಲಾ ಕೇಂದ್ರ ಮಂಡ್ಯದಿಂದ ಅರಕೆರೆ– ಮಂಡ್ಯಕೊಪ್ಪಲು– ಶಾಂತಿಕೊಪ್ಪಲು ಮಾರ್ಗವಾಗಿ ಮಹದೇವಪುರಕ್ಕೆ ಬರಬಹುದು. ಶ್ರೀರಂಗಪಟ್ಟಣ– ಬನ್ನೂರು ರಸ್ತೆಯಲ್ಲಿ ಶಾಂತಿಕೊಪ್ಪಲು ತೋಟದ ಬಳಿ ಬಲಕ್ಕೆ ತಿರುವು ಪಡೆದು ಒಂದು ಕಿ.ಮೀ. ಕ್ರಮಿಸಿದರೆ ಮಹದೇವಪುರ ಸಿಗುತ್ತದೆ. ಮೈಸೂರು ಕಡೆಯಿಂದಲೂ ಇಲ್ಲಿಗೆ ಸಾರಿಗೆ ಸಂಪರ್ಕವಿದೆ. ಮೂರೂ ಕಡೆಯಿಂದ ಖಾಸಗಿ ಮತ್ತು ಸಾರಿಗೆ ಸಂಸ್ಥೆ ಬಸ್ ಸೌಕರ್ಯ ಇದೆ. ಮಂಡ್ಯದಿಂದ 22 ಕಿ.ಮೀ. ಮೈಸೂರಿನಿಂದ 13 ಕಿ.ಮೀ ಹಾಗೂ ಶ್ರೀರಂಗಪಟ್ಟಣದಿಂದ 10 ಕಿ.ಮೀ ದೂರದಲ್ಲಿದೆ ಕನಕ ದಾಸರು ಕುಳಿತು ತಪಗೈದ ಚಾರಿತ್ರಿಕ ಕಲ್ಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.