ಕುಟುಂಬವನ್ನೇ ಮರೆತು ಕೆರೆ ಕಟ್ಟಿದೆ; ಕಾಮೇಗೌಡ

ಬುಧವಾರ, ಜೂನ್ 26, 2019
29 °C
ಚಮತ್ಕಾರಿ ಬೀಜದ ಚೆಂಡು ತಯಾರಿಕೆ ಕಾರ್ಯಾಗಾರ

ಕುಟುಂಬವನ್ನೇ ಮರೆತು ಕೆರೆ ಕಟ್ಟಿದೆ; ಕಾಮೇಗೌಡ

Published:
Updated:
Prajavani

ಮೈಸೂರು: ‘ನೀವೆಲ್ಲಾ ಭಾರತದ ಒಡವೆಗಳು. ಎಲ್ಲದಕ್ಕೂ ಅರ್ಹರಿದ್ದೀರಿ. ನಿಮ್ಮಗಳ ಮುಂದೆ ನಾನು ಏನೇನು ಅಲ್ಲಾ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವಷ್ಟು ದೊಡ್ಡವ ನಾನಲ್ಲ. ಆದರೂ ನನಗೆ ತಿಳಿದಿದ್ದನ್ನು ಹೇಳುವೆ. ಮೌನವಾಗಿ ಕೂರಬೇಡಿ. ಧೈರ್ಯವಾಗಿ ಎದ್ದು ನಿಂತು ಪ್ರಶ್ನೆಗಳನ್ನು ಕೇಳಿ...’

ನಗರದ ಲಕ್ಷ್ಮೀಪುರಂನಲ್ಲಿನ ಗೋಪಾಲ ಶಿಶುವಿಹಾರ ಸಂಸ್ಥೆಯ ಆವರಣದಲ್ಲಿ ಮಂಗಳವಾರ ನಡೆದ ‘ಚಮತ್ಕಾರಿ ಬೀಜದ ಚೆಂಡು ತಯಾರಿಕೆ ಕಾರ್ಯಾಗಾರ’ದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳೊಟ್ಟಿಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಪರಿಸರ ಪ್ರೇಮಿ ಕೆರೆ ಕಾಮೇಗೌಡ ಸಂವಾದಕ್ಕೆ ಮುನ್ನ ಪ್ರಶ್ನೆಗಳನ್ನು ಕೇಳಿ ಎಂದು ವಿದ್ಯಾರ್ಥಿ ಸಮೂಹವನ್ನು ಉತ್ತೇಜಿಸಿದ ಪರಿಯಿದು.

ಕಾಮೇಗೌಡರು ನೀಡಿದ ಪ್ರೇರೇಪಣೆಯಿಂದ ಪ್ರೌಢಶಾಲೆ, ಕಾಲೇಜಿನ ವಿದ್ಯಾರ್ಥಿಗಳು ಉತ್ಸುಕತೆಯಿಂದ ಕೆರೆ, ಪರಿಸರದ ಜತೆ ಅವರ ವೈಯಕ್ತಿಕ ಬದುಕಿನ ಪ್ರಶ್ನೆಗಳನ್ನು ಕೇಳಲು ಮುಗಿಬಿದ್ದರು. ಆಯ್ದ ಪ್ರಶ್ನೋತ್ತರಗಳ ಸಾರಾಂಶ ಇಂತಿದೆ.

* ಶ್ರೀನಿವಾಸ್, ನಿಮ್ಮ ದುಡಿಮೆಯನ್ನೆಲ್ಲಾ ಕೆರೆಗೆ ವಿನಿಯೋಗಿಸಿದ್ದೀರಿ ? ವೈಯಕ್ತಿಕ ಬದುಕಿನ ನಿರ್ವಹಣೆ ಹೇಗೆ ?

ಚಿಕ್ಕಂದಿನಿಂದಲೂ ಕುಟುಂಬ, ಬಂಧು–ಬಳಗವನ್ನೇ ಮರೆತು ಬಿಟ್ಟಿದ್ದೆ. ನನಗೆ ವೈಯಕ್ತಿಕ ಬದುಕಿಲ್ಲ. ಎಂದೂ ನಾನು ವೈಯಕ್ತಿಕ ಸುಖಕ್ಕೆ ಆದ್ಯತೆಯನ್ನೇ ಕೊಡಲಿಲ್ಲ. ನನ್ನ ಸರ್ವಸ್ವವೂ ಕೆರೆಗಳೇ ಆಗಿವೆ.

* ಎಷ್ಟು ವರ್ಷದಿಂದ ಕೆರೆ ಕಟ್ಟುವ ಕೆಲಸ ಮಾಡುತ್ತಿದ್ದೀರಿ ? ನೀವೊಬ್ಬರೇ ಮಾಡುತ್ತಿದ್ದೀರಾ..?

ಚಿಕ್ಕವನಾಗಿದ್ದಾಗಿನಿಂದಲೂ ನನ್ನ ಪ್ರಪಂಚ ಬೆಟ್ಟ, ಕೆರೆಗೆ ಸೀಮಿತವಾಗಿದೆ. ಕೆರೆ, ಗಿಡ ಬಿಟ್ಟರೇ ಬೇರೇನೂ ಗೊತ್ತಿಲ್ಲ. ಆರಂಭದಿಂದಲೂ ನಾನೊಬ್ಬನೇ ಈ ಕಾಯಕ ಮಾಡುತ್ತಿರುವೆ. ಇನ್ನೊಬ್ಬರನ್ನು ನಂಬಿಕೊಂಡಿದ್ದರೆ, ನಾನು ಕೆರೆ ಕಟ್ಟಲು ಆಗುತ್ತಿರಲಿಲ್ಲ. ಒಬ್ಬನೇ ಗುರಿಯ ಸಂಕಲ್ಪದೊಂದಿಗೆ ಮುನ್ನುಗಿದಾಗ, ಕೆಲಸ ಪೂರ್ಣಗೊಳ್ಳುತ್ತದೆ. ಮತ್ತೊಬ್ಬರನ್ನು ನಂಬಿಕೊಂಡರೆ ಆ ಕೆಲಸ ಮುಗಿಯಲು ಸಾಕಷ್ಟು ಸಮಯ ಹಿಡಿಯುತ್ತದೆ. ಏನೇ ಮಾಡಬೇಕಾದರೂ ಅವರನ್ನೇ ಕೇಳಬೇಕಾಗುತ್ತದೆ. ಜಗತ್ತಿಗೆ ಬೆಳಕು ನೀಡುವ ಸೂರ್ಯ ಸಹ ಒಬ್ಬಂಟಿ.

* ಎಷ್ಟು ಕೆರೆ ಕಟ್ಟಿಸಿದ್ದೀರಿ ?

ಇದೂವರೆಗೂ 14 ಕೆರೆ ಕಟ್ಟಿಸಿರುವೆ. ಇವುಗಳಲ್ಲಿ 12 ಕೆರೆಗಳಲ್ಲಿ ನೀರಿದೆ. ಎರಡು ಖಾಲಿಯಾಗಿವೆ. ಮತ್ತಷ್ಟು ಕೆರೆ ಕಟ್ಟಿಸಲು ಕೈಯಲ್ಲಿ ಹಣವಿಲ್ಲ. ಆದರೂ ಕೆರೆ ಕಟ್ಟಿಸುವ ಆಸೆಗೆ ಮುಪ್ಪು ಬಂದಿಲ್ಲ. ಕೆರೆ ಕಟ್ಟೋದು ಸುಲಭವಲ್ಲ. ಕೆರೆ ನಿರ್ಮಾಣಕ್ಕೆ ಸೂಕ್ತ ವಾತಾವರಣ ಬೇಕಿದೆ. ಮಣ್ಣಿನ ಗುಣವನ್ನು ನೋಡಬೇಕು. ನಂತರವೇ ಕೆರೆ ಕಟ್ಟಬೇಕು.

* ಸದ್ಗುರು ಆರಂಭಿಸಿದ ನದಿ ರಕ್ಷಿಸಿ ಬಗ್ಗೆ ಏನೇಳ್ತೀರಿ ?

ನಮ್ಮೂರಲ್ಲಷ್ಟೇ ಅಲ್ಲ. ಜಗತ್ತಿನ ಎಲ್ಲೆಡೆಯೂ ಕೆರೆಗಳನ್ನು ಉಳಿಸಿಕೊಳ್ಳಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ಮುಂದಾಗಬೇಕು. ಕೆರೆ ನಾಶಕ್ಕೆ ಅವಕಾಶ ಕೊಡಬಾರದು.

* ಕೆರೆ ನಿರ್ಮಾಣಕ್ಕೆ ಸರ್ಕಾರದ ಆರ್ಥಿಕ ಸಹಕಾರ, ಬೆಂಬಲ ಸಿಕ್ಕಿದೆಯಾ ?

ಏನು ಕೊಟ್ಟಿಲ್ಲ. ಭಗವಂತ ನನಗೆ ಕೈ ಕೊಟ್ಟ್ವಾನೆ. ಸರ್ವರ ಒಳಿತಿಗಾಗಿ ದುಡಿದಿರುವೆ. ಪಶು–ಪಕ್ಷಿಗಳು ಈ ಕೆರೆಗಳಲ್ಲಿ ನೀರು ಕುಡಿದು ಬಾಯಾರಿಕೆ ನೀಗಿಸಿಕೊಳ್ಳೋದನ್ನು ಕಣ್ತುಂಬಿಕೊಳ್ಳೋದೇ ನನಗೆ ಆನಂದ.

ಡಾ.ಪಾಂಡುರಂಗ ಪಾಟೀಲ, ಜನಚೇತನ ಟ್ರಸ್ಟ್‌ನ ಸಹ ಕಾರ್ಯದರ್ಶಿ, ಸ್ವದೇಶಿ ಜಾಗರಣ ಮಂಚ್‌ನ ರಾಜ್ಯ ಸಂಯೋಜಕ ಎನ್‌.ಆರ್‌.ಮಂಜುನಾಥ್‌ ಉಪಸ್ಥಿತರಿದ್ದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !