ಪ್ರಯೋಗಶೀಲ ಮಾದರಿ ರೈತ ಈಶ, ಸಾವಯವ ಗೊಬ್ಬರಕ್ಕೆ ಹೆಚ್ಚು ಒತ್ತು

ಬುಧವಾರ, ಜೂನ್ 19, 2019
25 °C
ಜಮೀನಿನಲ್ಲಿ ಹೊಸ ಹೊಸ ಬೆಳೆಗಳನ್ನು ಬೆಳೆಯುವ ಉತ್ಸಾಹ

ಪ್ರಯೋಗಶೀಲ ಮಾದರಿ ರೈತ ಈಶ, ಸಾವಯವ ಗೊಬ್ಬರಕ್ಕೆ ಹೆಚ್ಚು ಒತ್ತು

Published:
Updated:
Prajavani

ಸಂತೇಮರಹಳ್ಳಿ: ಈ ಜಮೀನಿನಲ್ಲಿ ಒಮ್ಮೆ ಬೆಳೆದ ಬೆಳೆ ಮತ್ತೆ ಸದ್ಯಕ್ಕೆ ಪುನರಾವರ್ತನೆ ಆಗುವುದಿಲ್ಲ. ಪ್ರತಿ ಬಾರಿಯು ಹೊಸ ಹೊಸ ಫಸಲನ್ನು ನೀಡುತ್ತಾ ಇರುತ್ತದೆ. 

ಇದು ಡಿ.ಎಂ.ಈಶ ಎಂಬ ರೈತರಿಗೆ ಸೇರಿದ ಜಮೀನು. ಸಂತೇಮರಹಳ್ಳಿ ಹೋಬಳಿಯ ದೇಶವಳ್ಳಿ ಗ್ರಾಮದ ಈಶ ಅವರು ಪ್ರಯೋಗ ಶೀಲರು. ಜಮೀನಿನಲ್ಲಿ ಹೊಸ ಹೊಸ ಬೆಳೆಗಳ ಕೃಷಿ ಮಾಡುವುದನ್ನು ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. 

ಈ ಹಿಂದೆ ಕಬ್ಬು, ಬಾಳೆ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆದು ಇದೀಗ ಹಣ್ಣು, ಹೂವುಗಳ ಬೆಳೆ ಬೆಳೆಯುತ್ತಿರುವ ಇವರು ಇತರ ರೈತರಿಗೆ ಮಾದರಿಯಾಗಿದ್ದಾರೆ. 

ವ್ಯವಸಾಯದಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ‌ಈಶ ಅವರು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ. ರಾಜ್ಯದ ವಿವಿಧ ಕಡೆಗಳಲ್ಲಿರುವ ಮಾದರಿ ರೈತರ ಜಮೀನುಗಳಿಗೆ ತೆರಳಿ ಅಲ್ಲಿನ ವಿನೂತನ ಪ್ರಯೋಗಗಳನ್ನು ಗಮನಿಸಿ ತಮ್ಮ ಜಮೀನಿನಲ್ಲಿ ಅನುಷ್ಠಾನಕ್ಕೆ ತರುತ್ತಿದ್ದಾರೆ.

ಇದೀಗ ಪಾಲಕ್ ಪನ್ನೀರು, ಮಲ್ಲಿಗೆ, ಸೀಬೆ ಹಾಗೂ ಮೂಸಂಬಿ ಬೆಳೆಗಳನ್ನು ಬೆಳೆಯುತ್ತಾ ಪ್ರತಿ ಬೆಳೆಯಲ್ಲಿಯೂ ಹೆಚ್ಚಿನ ಇಳುವರಿ ತೆಗೆದು ಹಣ ಗಳಿಸುತ್ತಿದ್ದಾರೆ. 

ತಮ್ಮ ಮೂರು ಎಕರೆ ಜಮೀನಿನಲ್ಲಿ ಅರ್ಧ ಎಕರೆ ಪನ್ನೀರು ಮತ್ತು ಮಲ್ಲಿಗೆ, ಉಳಿದ ಎರಡೂವರೆ ಎಕರೆಯಲ್ಲಿ ಸೀಬೆ, ಮೂಸಂಬಿ, ಮಾವು ಹಾಗೂ ಕನಕಾಂಬರ ಬೆಳೆಯುದ್ದಾರೆ. ನೀರಿಗೆ ಕೊಳವೆ ಬಾವಿಯನ್ನೇ ಅವಲಂಬಿಸಿರುವ ಅವರು ಕೊಳವೆ ಬಾವಿಯಿಂದ ಕೃಷಿಹೊಂಡಕ್ಕೆ ನೀರು ತುಂಬಿಸಿ ನಂತರ ಹನಿ ನೀರಾವರಿ ಪದ್ಧತಿ ಮೂಲಕ ಬೆಳೆಗಳಿಗೆ ಹಾಯಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಪಾಲಕ್‌ ಪನ್ನೀರ್ ಗಿಡವೊಂದಕ್ಕೆ ₹ 10ರಂತೆ ತಂದು ಅರ್ಧ ಎಕರೆ ಪ್ರದೇಶದಲ್ಲಿ ಗಿಡವನ್ನು ನಾಟಿ ಮಾಡಿದ್ದಾರೆ. ನಾಟಿ ಮಾಡಿದ 2 ತಿಂಗಳೊಳಗೆ ಪನ್ನೀರ್ ಎಲೆಗಳು ಕಟಾವು ಹಂತಕ್ಕೆ ಬರುತ್ತವೆ. ಪ್ರತಿ ಕೆಜಿಗೆ ₹ 50ರಂತೆ ಪ್ರತಿ ದಿನ 50 ಕೆಜಿಯಿಂದ 100ಕೆಜಿ ವರೆಗೂ ಎಲೆಗಳನ್ನು ಮಾರಾಟ ಮಾಡುತ್ತಾರೆ.

‘ಗೌರಿ-ಗಣೇಶ, ವರ ಮಹಾಲಕ್ಷ್ಮಿ ಹಬ್ಬ ಸೇರಿದಂತೆ ವಿವಾಹ, ಶುಭ ಸಮಾರಂಭಗಳಂದು ಪನ್ನೀರ್‌ ಎಲೆಗೆ ಬೇಡಿಕೆ ಹೆಚ್ಚಿರುತ್ತದೆ. ಈ ವೇಳೆ ₹ 100ರವರೆಗೂ ಎಲೆಗಳನ್ನು ಮಾರಾಟ ಮಾಡುತ್ತೇನೆ. ಕೂಲಿ ಆಳು ಸೇರಿ ಪನ್ನೀರ್ ಎಲೆಗಳ ಸಾಗಾಣಿಕೆ ವೆಚ್ಚ ಪ್ರತಿ ತಿಂಗಳು ₹ 10ರಿಂದ 20 ಸಾವಿರದವರೆಗೂ ಖರ್ಚಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಸೀಬೆ, ಮೂಸಂಬಿ, ಮಾವುಗಳನ್ನು ಮಿಶ್ರ ಬೆಳೆಯಾಗಿ ಬೆಳೆದು ಅವುಗಳಲ್ಲಿಯೂ ಹಣ ಸಂಪಾದಿಸುತ್ತಿದ್ದಾರೆ. ಸೀಬೆ ಹಣ್ಣುಗಳನ್ನು ವಾರಕ್ಕೊಮ್ಮೆ ಕಟಾವು ಮಾಡಿ ಕೆಜಿಗೆ ₹ 90ರಂತೆ 30 ಕೆಜಿ ವರೆಗೂ ಮಾರಾಟ ಮಾಡುತ್ತಾರೆ.

ಜಮೀನಿನಲ್ಲಿ ಕೃಷಿಹೊಂಡದ ಬಳಿ ಪ್ರಾಣಿ ಪಕ್ಷಿಗಳು ಸುಳಿಯದಂತೆ ಸುತ್ತಲೂ ಟಾರ್ಪಲಿನ್ ಹಾಕಿ ಭದ್ರಪಡಿಸಿದ್ದಾರೆ. ಜಮೀನಿನ ಸುತ್ತಲೂ ಸೋಲಾರ್ ಬೇಲಿ ಅಳವಡಿಸಿಕೊಂಡು ಬೆಳೆಗಳ ರಕ್ಷಣೆಗೆ ಕಾಳಜಿವಹಿಸಿದ್ದಾರೆ.

‘ವ್ಯವಸಾಯದಲ್ಲಿ ಯಾರಿಗೂ ಮೋಸ ಆಗುವುದಿಲ್ಲ. ಒಂದೇ ತೆರನಾದ ಬೆಳೆಗಳನ್ನು ಬೆಳೆದರೆ ರೈತನಿಗೆ ಆರ್ಥಿಕ ಹೊರೆಯಾಗುತ್ತದೆ. ಆದ್ದರಿಂದ, ಎಲ್ಲ ಬಗೆಯ ವಿವಿಧ ಮಾದರಿಯ ಬೆಳೆಗಳನ್ನು ಬೆಳೆದು ಕಾಲಕ್ಕೆ ತಕ್ಕಂತೆ ಪಾಲನೆ ಮಾಡಿದರೆ ಪ್ರತಿ ಬೆಳೆಯು ಆದಾಯ ತಂದು ಕೊಡುತ್ತದೆ. ರೈತರು ಧೃತಿಗೆಡದೆ ವ್ಯವಸಾಯದಲ್ಲಿ ತೊಡಗಬೇಕು’ ಎಂದು ಈಶ ಅವರು ‘ಪ್ರಜಾವಾಣಿ’ಗೆ ಹೇಳಿದರು. 

ಸಾವಯವ ಗೊಬ್ಬರ ಬಳಕೆ ಶ್ರೇಷ್ಠ

‘ಕೃಷಿ ಜಮೀನುಗಳಿಗೆ ಸಾವಯವ ಗೊಬ್ಬರ ಬಳಕೆ ಅತ್ಯಂತ ಉಪಯುಕ್ತವಾಗಿದೆ. ಹೀಗಾಗಿ, ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ. ಜತೆಗೆ ಜಮೀನಿನಲ್ಲಿ ಬೆಳೆಯುವ ಕಳೆ ಗಿಡಗಳನ್ನು ಅಲ್ಲಿಯೇ ಬಿಟ್ಟು ಹಸಿರೆಲೆ ಗೊಬ್ಬರವನ್ನಾಗಿತ್ತೇನೆ’ ಎಂದು ಈಶ ಅವರು ಳಿಸಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !