ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ

7
ಇಂದಿನಿಂದ ಆರಂಭ

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ

Published:
Updated:

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಶನಿವಾರದಿಂದ ಆ.15ರ ಸ್ವಾತಂತ್ರ್ಯ ದಿನಾಚರಣೆಯವರೆಗೆ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ವಾಹನಗಳ ಮೂಲಕ ಬರಲಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುವುದನ್ನು ತಡೆಗಟ್ಟಲು ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಕ್ಯಾಬ್‌ಗಳ ವ್ಯವಸ್ಥೆ: ಡಾ.ಮರಿಗೌಡ ರಸ್ತೆಯಲ್ಲಿರುವ ಹಾಪ್‌ಕಾಮ್ಸ್‌ ಆವರಣದಲ್ಲಿ ಕ್ಯಾಬ್‌ಗಳ ಪಿಕ್‌ ಅಪ್‌ ಅಂಡ್ ಡ್ರಾಪಿಂಗ್ ವ್ಯವಸ್ಥೆ ಮಾಡಲಾಗಿದೆ.

ವಾಹನ ನಿಲುಗಡೆ ನಿಷಿದ್ಧ ಸ್ಥಳಗಳು (ರಸ್ತೆಯ ಎರಡೂ ಬದಿಗಳಲ್ಲಿ)

* ಡಾ.ಮರಿಗೌಡ ರಸ್ತೆ, ಲಾಲ್‌ಬಾಗ್‌ ಮುಖ್ಯದ್ವಾರದಿಂದ ನಿಮ್ಹಾನ್ಸ್‌ವರೆಗೆ

* ಕೆ.ಎಚ್‌.ರಸ್ತೆ, ಕೆ.ಎಚ್‌.ವೃತ್ತದಿಂದ ಶಾಂತಿನಗರ ಜಂಕ್ಷನ್‌ವರೆಗೆ

* ಸಿದ್ಧಯ್ಯ ರಸ್ತೆ, ಊರ್ವಶಿ ಜಂಕ್ಷನ್‌ನಿಂದ ವಿಲ್ಸನ್‌ ಗಾರ್ಡನ್‌ 12ನೇ ಕ್ರಾಸ್‌ವರೆಗೆ

* ಸುಬ್ಬಯ್ಯ ರಸ್ತೆ, ಬಿ.ಟಿ.ಎಸ್ ರಸ್ತೆ, ಟಿ.ಮರಿಯಪ್ಪ ರಸ್ತೆ ಹಾಗೂ ಕ್ರುಂಬಿಗಲ್‌ ರಸ್ತೆ

ವಾಹನ ನಿಲುಗಡೆ ಸ್ಥಳಗಳು

* ಆಲ್‌ ಅಮೀನ್‌ ಕಾಲೇಜು ಆವರಣದಲ್ಲಿ ದ್ವಿಚಕ್ರ ವಾಹನಗಳಿಗೆ

* ಶಾಂತಿನಗರ ಬಿಎಂಟಿಸಿ ಘಟಕದ ಐದನೇ ಮಹಡಿ ಹಾಗೂ ಜೆ.ಸಿ ರಸ್ತೆಯ ಬಿಬಿಎಂಪಿ ಕಾಂಪ್ಲೆಕ್ಸ್‌ನಲ್ಲಿ ಕಾರು, ದ್ವಿಚಕ್ರ ವಾಹನಗಳಿಗೆ

 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !