ಇಂಡೋನೆಷ್ಯಾದಲ್ಲಿ ಪ್ರವಾಹ; ಭೂಕುಸಿತ: 8 ಸಾವು

7

ಇಂಡೋನೆಷ್ಯಾದಲ್ಲಿ ಪ್ರವಾಹ; ಭೂಕುಸಿತ: 8 ಸಾವು

Published:
Updated:

ಜಕಾರ್ತ (ಎಪಿ): ಇಂಡೋನೆಷ್ಯಾದಲ್ಲಿ ಧಾರಕಾರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಣೆಕಟ್ಟುಗಳು ಭರ್ತಿಯಾಗಿದ್ದು ಪ್ರವಾಹ ಹಾಗೂ ಭೂಕುಸಿತದಿಂದಾಗಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. ಸುಮಾರು 2 ಸಾವಿರ ಜನರು ನೆಲೆ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.

ಮಕಾಸ್ಸಾರ್ ಜಿಲ್ಲೆ ಸೇರಿ ಒಂಬತ್ತು ಜಿಲ್ಲೆಗಳು ಪ್ರವಾಹಪೀಡಿತವಾಗಿವೆ. ಪ್ರವಾಹದಿಂದ ನಾಲ್ವರು ಕಾಣೆಯಾಗಿದ್ದಾರೆ. ಸುಮಾರು 2 ಸಾವಿರ ಜನರಿಗೆ ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ. 

ಮಂಗಳವಾರ ತಡ ರಾತ್ರಿ ಉಂಟಾದ ಪ್ರವಾಹದಿಂದ ಇಬ್ಬರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ವ್ಯಕ್ತಿಯೊಬ್ಬರು ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಸಾವಿಗೀಡಾಗಿದ್ದಾರೆ ಎಂದು ದಕ್ಷಿಣ ಸುಲಾವೆಸಿ ಪ್ರಾಂತೀಯ ರಾಜಧಾನಿ ಮಕಾಸ್ಸಾರ್ ಜಿಲ್ಲೆಯ ಸಮೀಪದ ಗಾವ ಜಿಲ್ಲೆಯ ಮುಖ್ಯಸ್ಥ ಅದ್ನಾನ್ ಪುರಿಚಾ ಇಚ್ಸಾನ್ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಿ ಸರ್ಕಾರಿ ಕಚೇರಿಗಳು ಮತ್ತು ಮಸೀದಿಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !