ಸೋಮವಾರ, ಸೆಪ್ಟೆಂಬರ್ 16, 2019
21 °C

ಶ್ರೀಲಂಕಾ ಸ್ಫೋಟ: ಸಂಚುಕೋರನ ಡಿಎನ್‌ಎ ಪರೀಕ್ಷೆಗೆ ಕೋರ್ಟ್ ಸಮ್ಮತಿ

Published:
Updated:

ಕೊಲೊಂಬೊ: ಈಸ್ಟರ್‌ ದಿನದಂದು ನಡೆದ ಸ್ಫೋಟದ ಸಂಚುಕೋರ ಎನ್ನಲಾದ ನ್ಯಾಷನಲ್‌ ಥೌವೀತ್‌ ಜಮಾತ್‌ನ (ಎನ್‌ಟಿಜೆ) ನಾಯಕ ಮೃತ ಮೊಹಮ್ಮದ್‌ ಕಾಸಿಂ ಝಹ್ರಾನ್‌ನ ಡಿಎನ್‌ಎ ಪರೀಕ್ಷೆಯನ್ನು ಮೇ 15ರ ಒಳಗೆ ನಡೆಸುವಂತೆ ಶ್ರೀಲಂಕಾ ನ್ಯಾಯಾಲಯ ಆದೇಶ ಹೊರಡಿಸಿದೆ. 

ಪರೀಕ್ಷೆಗೆ ಝಹ್ರಾನ್‌ನ ಸೋದರಿಯ ಡಿಎನ್‌ಎ ಮಾದರಿ ಬಳಸಿಕೊಳ್ಳಬಹುದು ಎಂದು ನ್ಯಾಯಾಲಯವು ಆದೇಶಿಸಿದೆ.

ಜೊತೆಗೆ ಸ್ಫೋಟದ ಎರಡನೇ ದಾಳಿಕೋರ ಇಬ್ರಾಹಿಂನ ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂದೂ ನ್ಯಾಯಾಲಯ ಹೇಳಿದೆ. ಸ್ಫೋಟಕ್ಕೆ ಬಳಸಲಾದ ವಾಹನಗಳ ಕುರಿತು ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ.

Post Comments (+)